ಚೆನ್ನೈ:ಪ್ರಸಕ್ತ ಸಾಲಿನ ಪದ್ಮಭೂಷಣ ಪುರಸ್ಕೃತೆ, ಖ್ಯಾತ ಗಾಯಕಿ ವಾಣಿ ಜಯರಾಂ ಅವರು ಇಂದು ಕೊನೆಯುಸಿರೆಳೆದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರು ಚೆನ್ನೈನ ನುಂಗಂಬಾಕಮ್​ನಲ್ಲಿನ ಹದ್ದೌಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರ ಹಣೆಯಲ್ಲಿ ಗಾಯವಾಗಿದ್ದು ಕಂಡುಬಂದಿದೆ ಎನ್ನಲಾಗಿದೆ.
ಕನ್ನಡ, ತುಳು ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಉರ್ದು, ಮರಾಠಿ, ಬಂಗಾಳಿ, ಭೋಜಪುರಿ, ಒರಿಯಾ ಮುಂತಾದ ಭಾಷೆಗಳ ಸಿನಿಮಾಗಳಲ್ಲೂ ವಾಣಿ ಜಯರಾಂ ಹಾಡಿದ್ದಾರೆ. ಇವರು ಹಿನ್ನೆಲೆ ಗಾಯನಕ್ಕಾಗಿ ಮೂರು ಸಲ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಮಾತ್ರವಲ್ಲ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಗುಜರಾತ್, ಒಡಿಶಾ ರಾಜ್ಯಗಳಿಂದಲೂ ವಿವಿಧ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.
ವೃತ್ತಿಪರ ಗಾಯಕಿಯಾಗಿ ಇತ್ತೀಚೆಗಷ್ಟೇ 50 ವರ್ಷಗಳನ್ನು ಪೂರೈಸಿರುವ ಅವರು 10 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಇಳಯರಾಜ, ಆರ್​ಡಿ ಬರ್ಮನ್, ಕೆ.ವಿ.ಮಹದೇವನ್, ಒ.ಪಿ. ಅಯ್ಯರ್, ಮದನ್ ಮೋಹನ್, ಜಿ.ಕೆ.ವೆಂಕಟೇಶ್, ವಿಜಯಭಾಸ್ಕರ್, ರಾಜನ್​ ನಾಗೇಂದ್ರ ಮುಂತಾದ ಸಂಗೀತ ಸಂಯೋಜನೆಯಲ್ಲಿ ದನಿಯಾಗಿದ್ದರು.
ತೆರೆದಿದೆ ಮನೆ ಬಾ ಓ ಅತಿಥಿ, ಈ ಶತಮಾನದ ಮಾದರಿ ಹೆಣ್ಣು, ಭಾವ ಎಂಬ ಹೂವು ಅರಳಿ, ಇವ ಯಾವ ಸೀಮೆ ಗಂಡು ಕಣಮ್ಮೊ, ಹೋದೆಯಾ ದೂರ ಓ ಜೊತೆಗಾರ, ಏನೇನೊ ಆಸೆ ನೀ ತಂದ ಭಾಷೆ, ಸವಿ ನೆನಪುಗಳು ಬೇಕು ಮುಂತಾದ ಕನ್ನಡದ ಎವರ್​ಗ್ರೀನ್​ ಗೀತೆಗಳು ವಾಣಿ ಅವರ ಕಂಠದಿಂದ ಹೊರಹೊಮ್ಮಿದ್ದವು.
‘ಉತ್ತಮ ವಿಲನ್’​: ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ; ಸಾಕುತಂದೆಯ ಕುತ್ತಿಗೆಗೇ ಲಾಂಗ್ ಇಟ್ಟು ಬೆದರಿಸಿದ್ದ!

ಏಳು ಮಂದಿಯನ್ನು ಮದ್ವೆಯಾಗಿ ಸಿಕ್ಕಿಬಿದ್ದ; ಸುಳ್ಳು ಹೇಳಿ ವಿವಾಹವಾಗಿ ವಂಚಿಸುತ್ತಿದ್ದ ಅಸ್ಲಾಂ ಖಾನ್ ಬಂಧನ

ಪೊಲೀಸ್ ಸಬ್​ ಇನ್​ಸ್ಪೆಕ್ಟರ್​​ ಕಿವಿಯನ್ನೇ ಕಚ್ಚಿದ ಪಾನಮತ್ತ ಬೈಕ್ ಸವಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eight =
Remember me
