|ಮಂಡಗದ್ದೆ ಪ್ರಕಾಶಬಾಬು ಕೆ. ಆರ್.
ಮಹಾ ಪ್ರಸಾದ ಜನನೀ ಸರ್ವಸೌಭಾಗ್ಯ ವರ್ಧಿನೀ|
ಆದಿವ್ಯಾಧಿ ಹರೇ ನಿತ್ಯಮ್ ತುಳಸೀ ತ್ವಾಮ್ ನಮೋಸ್ತುತೇ||
ತುಳಸೀ ಗಿಡದ ದರ್ಶನ ಮತ್ತು ಸ್ಪರ್ಶ ಮಾತ್ರದಿಂದಲೇ ಪಾಪಗಳು ನಶಿಸುತ್ತವೆ. ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರು ಎರೆಯುವುದರಿಂದ ವ್ಯಕ್ತಿಯು ರಾಗದ್ವೇಷದಿಂದ ದೂರವಾಗುತ್ತಾನೆ. ಕೇವಲ ಒಂದೆಸಳು ತುಳಸಿ ಎಲೆಯನ್ನು ಸಮರ್ಪಿಸಿದರೂ ಶ್ರೀಮನ್ನಾರಾಯಣ ಸಂತುಷ್ಟನಾಗುತ್ತಾನೆ ಎಂದು ಸ್ಕಂದ ಪುರಾಣದ ಹನ್ನೊಂದನೇ ಅಧ್ಯಾಯದಲ್ಲಿ ಹೇಳಿದೆ. ತುಳಸಿದೇವಿ ಉಪಾಸನೆಯಿಂದ ಬ್ರಹ್ಮಹತ್ಯಾದಿ ದೋಷಗಳು ಪರಿಹಾರವಾಗುತ್ತವೆಯಂತೆ. ‘ವಂದೇ ವಂದ್ಯಂ ಸದಾ ವಂದ್ಯಂ ತುಳಸಿ ದೇವ್ಯಂ ಪ್ರಣಾಮ್ಯಹಂ’ ಎಂದು ಭಜಿಸುವ ತುಳಸಿ ಹಬ್ಬದ ಸಂದರ್ಭದಲ್ಲಿ ಪ್ರಸಿದ್ಧ ತುಳಸಿ ಮಂದಿರಗಳ ಸ್ಥೂಲ ಪರಿಚಯ ಇಲ್ಲಿದೆ.
ಹೊಸನಾಡು:ಈ ತುಳಸಿ ಮಂದಿರ ಇರುವುದು ಮಂಗಳೂರಿನ ಪುತ್ತಿಗೆ ಗ್ರಾಮದಲ್ಲಿ. ಮಂಗಳೂರಿನಿಂದ 35 ಕಿ.ಮೀ ದೂರದಲ್ಲಿದೆ. ಹೊಸನಾಡು ಕೊಡ್ಯಡ್ಕ ದೇಗುಲ ರಮಣೀಯ ಪರಿಸರದಿಂದ ಕೂಡಿದೆ. ಇಲ್ಲಿನ ಮೂಲದೇವರು ಅನ್ನಪೂರ್ಣೆಶ್ವರಿ. ಅದರ ಜೊತೆಯಲ್ಲಿ ಪ್ರಸಿದ್ಧ ತುಳಸಿ ದೇವಿಯ ಮಂದಿರವನ್ನು ನೋಡಬಹುದು. ಈ ದೇವಾಲಯವನ್ನು ಜಯರಾಮ ಹೆಗಡೆ ಎಂಬುವರು 1996ರಲ್ಲಿ ನಿರ್ವಿುಸಿದರು.
ವೃಂದಾವನ:ಮಥುರಾದಿಂದ 15 ಕಿ.ಮೀ ದೂರದಲ್ಲಿರುವ ಈ ವೃಂದಾವನ ಹಿಂದೂಗಳ ಪವಿತ್ರ ಯಾತ್ರಾಸ್ಥಳವಾಗಿದೆ. ಯಮುನಾ ನದಿಯ ತಟದಲ್ಲಿದೆ. ಈ ವೃಂದಾವನ ಬೆಳಕಿಗೆ ಬಂದದ್ದೇ 16ನೇ ಶತಮಾನದಲ್ಲಿ. ಚೈತನ್ಯ ಮಹಾಪ್ರಭುಗಳು ಇದನ್ನು ಪತ್ತೆ ಮಾಡಿದರು. ಮೊದಲಿಗೆ ಈ ಸ್ಥಳದಲ್ಲಿ ಪೂರ್ತಿ ತುಳಸಿ ಗಿಡಗಳೇ ತುಂಬಿಕೊಂಡಿತ್ತಂತೆ. ಇದು ಶ್ರೀಕೃಷ್ಣಪರಮಾತ್ಮನ ಆಟದ ಸ್ಥಳವಾಗಿ ತ್ತಂತೆ. ಇಲ್ಲಿ ಗೋವಿಂದದೇವ, ಮದನಮೋಹನ ಗೋಪಿನಾಥ ಮತ್ತು ಜಗನ್ ಕಿಶೋರ್ ಮಂದಿರಗಳು ಪ್ರಮುಖ ಆಕರ್ಷಣೆ.
ವೃಂದಾಕುಂಡ್:ವೃಂದಾಕುಂಡ್ ವೃಂದಾವನ ದಲ್ಲಿಯೇ ಇದೆ. ಇಲ್ಲಿ ತುಳಸಿಮಾತೆಯನ್ನು ‘ವೃಂದಾದೇವಿ’ ಎಂದು ಕರೆಯುತ್ತಾರೆ. 1989ರಲ್ಲಿ ಇಸ್ಕಾನ್ ಸಂಸ್ಥೆಯು ವೃಂದಾದೇವಿ ದೇಗುಲ, ವೃಂದಾಕುಂಡ್ ಮತ್ತು ಗುಪ್ತಕುಂಡವನ್ನು ನಿರ್ವಿುಸಿದೆ. ಈಗ ಈ ಸ್ಥಳದಲ್ಲಿ ಮಂದಿರದ ಸುತ್ತ ತುಳಸಿತೋಟವಿದೆ. ಧ್ಯಾನಕ್ಕೆ ಪ್ರಶಸ್ತ ಸ್ಥಳ.
ಕಾಮ್ಯವನ:ವೃಂದಾದೇವಿಯನ್ನು ಐದುಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನ ಮೊಮ್ಮಗ ವಜ್ರನಾಭಾ ಕಾಮ್ಯವನದಲ್ಲಿ ಪ್ರತಿಷ್ಠಾಪಿಸಿದ ಎಂದು ಹೇಳಲಾಗಿದೆ. ಈ ದೇವಾಲಯವನ್ನು ಉಡುಪಿ ಗೋಸ್ವಾಮಿ ಅವರು ಪತ್ತೆ ಹಚ್ಚಿರುವರು. ಅವರು ವೃಂದಾವನದಲ್ಲಿರುವ ಬ್ರಹ್ಮಕುಂಡದ ಸ್ಥಳವನ್ನು ಉತ್ಖನನ ಮಾಡುವಾಗ ವೃಂದಾದೇವಿ ವಿಗ್ರಹ ಪತ್ತೆ ಆಗಿದೆ. ವಿಗ್ರಹವನ್ನು ಗೋವಿಂದರಾಜ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ.
ತುಳಸಿ ಮಾನಸ ಮಂದಿರ:ತುಳಸಿ ಮಾನಸ ಮಂದಿರವು ವಾರಣಾಸಿಯ ಪ್ರಸಿದ್ಧ ಮಂದಿರ. 1964ರಲ್ಲಿ ಪ್ರತಿಷ್ಠಾಪನೆಯಾಗಿದ್ದು ಅಮೃತಶಿಲೆಯಿಂದ ನಿರ್ಮಾಣಗೊಂಡಿದೆ. ಇಲ್ಲಿನ ಮೂಲದೈವ ಶ್ರೀರಾಮಚಂದ್ರ. ಇದೇ ಸ್ಥಳದಲ್ಲಿ ಸಂತ ತುಳಸೀದಾಸರು ‘ರಾಮಚರಿತ ಮಾನಸ’ ರಚಿಸಿದರಂತೆ. ಮಂದಿರದ ಗೋಡೆಗಳ ಮೇಲೆ ರಾಮಚರಿತ ಮಾನಸದ ದೃಶ್ಯಗಳಿವೆ. ಈ ಮಂದಿರದ ಪ್ರಮುಖ ಆಕರ್ಷಣೆ ತುಳಸಿ ವನ ಮತ್ತು ತುಳಸಿ ವಿಗ್ರಹ.
ರಾಜಪುರ:ರಾಜಪುರವು ಗೋಸ್ವಾಮಿ ತುಳಸೀದಾಸರ ಜನ್ಮಸ್ಥಳ. ಇದು ಉತ್ತರಪ್ರದೇಶದ ಬಾಂಡಾ ಜಿಲ್ಲೆಯಲ್ಲಿದೆ. ಇಲ್ಲಿ ತುಳಸೀದಾಸರ ಸ್ವಹಸ್ತಾಕ್ಷರ ‘ರಾಮಚರಿತ ಮಾನಸ’ದ ಪ್ರತಿಯಿದೆ.
ಬಾಲಿ:ಬಾಲಿ ತುಳಸಿ ದೇಗುಲವು ರಾಜಸ್ತಾನದ ಪಾಲಿ ಜಿಲ್ಲೆಯ ಬಾಲಿ ಗ್ರಾಮದಲ್ಲಿದೆ. ಇಲ್ಲಿರುವ ಭಕ್ತರು ತುಳಸಿರಾಣಿ ಮಂದಿರವನ್ನು ನಿರ್ವಿುಸಿದ್ದಾರೆ. ರಾತ್ರಿ ಸಮಯದಲ್ಲಿ ಈ ದೇವಾಲಯವು ಅರಳಿದ ಕುಸುಮದಂತೆ ಕಾಣುತ್ತದೆ.
ಪರದೀಪ್ ಕಡಲ ತೀರ:ಇದು ಒರಿಸ್ಸಾದ ಕಟಕ್​ನಿಂದ 94 ಕಿ.ಮೀ. ಮತ್ತು ಭುವನೇಶ್ವರದಿಂದ 125 ಕಿ.ಮೀ. ದೂರದಲ್ಲಿದೆ. ಈ ಕಡಲತೀರದ ಆಲಯಕ್ಕೆ ‘ತುಳಸಿ ಕ್ಷೇತ್ರ’ ಎನ್ನುವರು. ಇಲ್ಲಿ ಕುಳಿತ ಭಂಗಿಯಲ್ಲಿರುವ ತುಳಸಿ ಮಾತೆಯನ್ನು ನೋಡಬಹುದು.
ತುಳಸಿ ಅಮ್ಮನ ದೇವಾಲಯ:ಇದು ಕರ್ನಾಟಕದ ಕುಂದಾಪುರದಿಂದ 10 ಕಿ.ಮೀ. ದೂರದಲ್ಲಿದೆ. ಇದು ವಂಡಾರು ಮನೆತನದ ಕುಲದೇವರಾಗಿದೆ ಹಾಗೂ ಅಲ್ಲಿನ ಗ್ರಾಮದೇವತೆಯೂ ಆಗಿದೆ.
ಚಿತ್ರಂ:ಈ ದೇವಾಲಯ ಇರುವುದು ಆಂಧ್ರಪ್ರದೇಶದ ಚಿತ್ರಂನಲ್ಲಿ. ಇದು 15ನೇ ಶತಮಾನದ್ದು. ಶ್ರೀಕೃಷ್ಣದೇವರಾಯನು ಇದನ್ನು ಕಟ್ಟಿಸಿರುವುದು. ದೇವಾಲಯದಲ್ಲಿ ನಾವು ತುಳಸಿಮಾತೆಯ ವಿಗ್ರಹವನ್ನು ಕಾಣಬಹುದು. ಇದಕ್ಕೆ ನಿತ್ಯಪೂಜೆ ಸಲ್ಲಿಸುವರು. ಹಿಂದೆ ತುಳಸಿ ಮಾತೆಗೆ ಪ್ರತಿದಿನ 108 ಬಾರಿ ಪೂಜೆ ಸಲ್ಲಿಸುತ್ತಿದ್ದರಂತೆ. ಆದರೆ ಈಗ ಕಾರಣಾಂತರದಿಂದ ಮೂರು ಬಾರಿ ಪೂಜೆ ನಡೆಯುತ್ತಿದೆ.
ಚಂದ್ರು ಮತ್ತೆ ಬರಲ್ಲ, ಆದ್ರೆ ಸತ್ಯಾಂಶ ಹೊರಬರುತ್ತೆ: ಶಾಸಕ ರೇಣುಕಾಚಾರ್ಯ

ಶಿಕ್ಷಕರ ಏಟಿಗೆ ಬಲಿಯಾದಳು ನಾಲ್ಕನೇ ತರಗತಿಯ ವಿದ್ಯಾರ್ಥಿನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
