ತಿರುವನಂತಪುರಂ:ಇತ್ತೀಚಿನ ದಿನಗಳಲ್ಲಿ ಮಿಲ್ಕಿ ಬ್ಯೂಟಿ, ನಟಿ ತಮನ್ನಾ ಭಾಟಿಯಾ ಹೆಚ್ಚು ಸುದ್ದಿಯಲ್ಲಿದ್ದು, ಅವರು ನಟಿಸಿರುವ ವೆಬ್​ ಸೀರೀಸ್​ ಹಾಗೂ ಚಿತ್ರಗಳು ಅಪಾರ ಯಶಸ್ಸನ್ನು ಗಳಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ.
ಇನ್ನೂ ಅಭಿಮಾನಿಗಳ ವಿಚಾರಕ್ಕೆ ಬರುವುದಾದರೆ ತಮ್ಮ ನೆಚ್ಚಿನ ನಟ/ನಟಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ಕೇರಳದ ಕೊಲ್ಲಂನಲ್ಲಿ ಸೋಮವಾರ ನಡೆದ ಘಟನೆ ಮತ್ತೊಂದು ಸಾಕ್ಷಿಯಾಗಿದೆ.
Watch#TamannaahGraceful Handling of a Bizarre Fan Encounterpic.twitter.com/HjsJ67Tn7H
ಇದನ್ನೂ ಓದಿ:ಭಾರತದ ಸ್ವತಂತ್ರ ಆರ್ಥಿಕತೆಗೆ ಕೈಮಗ್ಗ ಉದ್ಯಮ ಸ್ಫೂರ್ತಿದಾಯಕ: ಪ್ರಧಾನಿ ಮೋದಿ
ಸೋಮವಾರ ಕೇರಳದ ಕೊಲ್ಲಂನಲ್ಲಿ ಮಳಿಗೆಯೊಂದರ ಉದ್ಘಾಟನೆಗೆ ಆಗಮಿಸಿದ್ದ ನಟಿ ತಮನ್ನಾರನ್ನೂ ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಅಲ್ಲಿದ್ದ ಅಭಿಮಾನಿಯೋರ್ವ ಬಿಗಿ ಭದ್ರತೆಯನ್ನೂ ಲೆಕ್ಕಿಸದೆ ಬ್ಯಾರಿಕೇಟ್​ಗಳನ್ನೂ ಹಾರಿ ನಟಿಯ ಜೊತೆ ಮಾತನಾಡಲು ಮುಂದಾಗಿದ್ದಾನೆ.
ಆತನನ್ನೂ ಕಂಡು ಒಂದು ಕ್ಷಣಕ್ಕೆ ನಟಿ ಗಾಬರಿಯಾಗಿದ್ದಾರೆ. ಬಳಿಕ ಅವರ ಕೈಹಿಡಿಯಲು ಆತ ಮುಂದಾಗಿದ್ದು, ಇದಕ್ಕೆ ಆಸ್ಪದ ಕೊಡದ ನಟಿ ಬಳಿಕ ಆತನ ಜೊತೆ ಫೋಟೋಗೆ ಪೋಸ್​ ನೀಡಿ ಮುಂದಕ್ಕೆ ತೆರಳಿದ್ದಾರೆ. ಇದಾದ ಬಳಿಕ ಕಾರ್ಯಕ್ರಮದ ಭದ್ರತೆಗಾಗಿ ನೇಮಿಸಿದ್ದ ಬೌನ್ಸರ್​ ಹಾಗೂ ಅಭಿಮಾನಿಗಳ ನಡುವೆ ವಾಗ್ವಾದವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 2 =
Remember me
