ಅಹಮದಾಬಾದ್:ಕ್ರಿಕೆಟ್ ಅನ್ನೋದು ಭಾರತದಲ್ಲಿರುವ ಧರ್ಮಗಳಲ್ಲೊಂದು ಎನ್ನುತ್ತಾರೆ. ಕ್ರಿಕೆಟ್ ಬಗ್ಗೆ ಬಹುತೇಕ ಜನರಿಗಿರುವ ಪ್ರೀತಿ ಅಂಥದ್ದು. ತಮ್ಮ ಮೆಚ್ಚುಗೆಯ ಆಟಗಾರರನ್ನು ನೋಡಿದಾಗ ಮಿತಿ ಮೀರಿ ವರ್ತಿಸುವ ಅಭಿಮಾನಿಗಳಿಗೇನೂ ಕಡಿಮೆ ಇಲ್ಲ. ಇಂಥದ್ದೇ ಒಂದು ಅತಿರೇಕದ ಪ್ರಸಂಗದಲ್ಲಿ ಅಭಿಮಾನಿಯೊಬ್ಬ ಸೆಕ್ಯುರಿಟಿ ಕಣ್ತಪ್ಪಿಸಿ ನೇರ ಪಿಚ್​ಗೇ ಆಗಮಿಸಿದ ಘಟನೆ ನಡೆದಿದೆ.
ಬುಧವಾರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ 3ನೇ ಕ್ರಿಕೆಟ್ ಪಂದ್ಯ ಆರಂಭವಾದ ವೇಳೆ. ಭಾರತ ತಂಡದ ನಾಯಕ ವಿರಾಟ್ ಕೋಹ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅದು ಹೇಗೋ ಸೆಕ್ಯುರಿಟಿ ಪ್ರೊಟೊಕಾಲ್ ಮುರಿದು ಪಿಚ್​ವರೆಗೆ ಕೊಹ್ಲಿಯನ್ನು ಭೇಟಿಯಾಗಲು ಅಭಿಮಾನಿಯೊಬ್ಬ ಧಾವಿಸಿ ಬಂದ. ಈ ದಿಢೀರ್ ಆಗಮನವನ್ನು ಕೊಂಚ ದೂರದಿಂದಲೇ ಗ್ರಹಿಸಿದ ಕೊಹ್ಲಿ, ಹಿಂದಕ್ಕೆ ಸರಿದು ಅಭಿಮಾನಿಗೆ ವಾಪಸಾಗಲು ಹೇಳಿದ ವೀಡಿಯೋ ತುಣುಕು ಇದೀಗ ವೈರಲ್ ಆಗಿದೆ.
ಇದನ್ನೂ ಓದಿ:ಸರ್ದಾರ್​ ಪಟೇಲ್​ ಕ್ರಿಕೆಟ್​ ಸ್ಟೇಡಿಯಂ ಈಗ ನರೇಂದ್ರ ಮೋದಿ ಸ್ಟೇಡಿಯಂ..!
ಕರೊನಾ ಮುನ್ನೆಚ್ಚರಿಕೆ ದೃಷ್ಟಿಯಿಂದ ಬಯೊಬಬಲ್ ಪ್ರೊಟೊಕಾಲ್ ಪಾಲಿಸಲಾಗುತ್ತಿದ್ದು, ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಹೊರಗಿನವರನ್ನು ಭೇಟಿ ಮಾಡುವ ಹಾಗಿಲ್ಲ. ತರಬೇತಿ ಸಮಯದಲ್ಲೂ ಅತಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಾಲಿ ಪಂದ್ಯಾವಳಿಯನ್ನು ನೋಡಲು ಶೇ.50 ರಷ್ಟು ಜನರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ.
Fan breaches security to meet Virat Kohli#INDvsENGpic.twitter.com/qCF7QQn2hj
— Rohith (@Rohith_Crico)February 24, 2021

ಹೀಗಿರುವಾಗ, ತಮ್ಮ ಎದುರಿಗೇ ಪ್ರತ್ಯಕ್ವನಾದ ಅಭಿಮಾನಿಯನ್ನು ನೋಡಿದ ವಿರಾಟ್​ ಕೊಹ್ಲಿ ಅವರು ಬೆಚ್ಚಿಬಿದ್ದಂತೆ ಪ್ರತಿಕ್ರಿಯೆ ನೀಡಿದ್ದಾರೆ. ತಕ್ಷಣ ಹಿಂದಕ್ಕೆ ಒಂದೆರಡು ಹೆಜ್ಜೆ ಹಾಕಿ ಅಭಿಮಾನಿಯನ್ನು ಮರಳಲು ಹೇಳಿದ್ದಾರೆ. ಸದರಿ ಅಭಿಮಾನಿಯು ನಂತರ ವಾಪಸಾಗಿದ್ದಾನೆ. ಈ ರೀತಿಯಾಗಿ ಸುರಕ್ಷಾ ವ್ಯವಸ್ಥೆಯನ್ನು ದಾಟಿ ಬಂದ ಬಗ್ಗೆ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ತನಿಖೆ ಆರಂಭಿಸಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಇಂಗ್ಲೆಂಡ್ ವಿರುದ್ಧದ ಅಹರ್ನಿಶಿ ಟೆಸ್ಟ್‌ನಲ್ಲಿ ಮೊದಲ ದಿನವೇ ಭಾರತ ಮೇಲುಗೈ

“ಕಾರು, ಬೈಕಿನಂತೆ ಹೆಂಡತಿಯನ್ನೂ ನಿಮ್ಮ ಆಸ್ತಿ ಎಂದು ತಿಳಿಯಬೇಡಿ” : ಗಂಡಸರಿಗೆ ಹೈಕೋರ್ಟ್ ಕಿವಿಮಾತು

ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 11 =
Remember me
