ರಾಂಚಿ :ಕ್ರಿಕೆಟ್​ ಆಟಗಾರರೆಂದರೆ ನಮ್ಮ ಯುವಜನರಿಗೆ ಎಲ್ಲಿಲ್ಲದ ಅಭಿಮಾನ. ಅದೇ ಇಲ್ಲೊಬ್ಬ ಯುವಕ, ಕ್ರಿಕೆಟ್​​ ಪಟು ಎಂ.ಎಸ್​.ಧೋನಿ ಬಗ್ಗೆ ಅಸಾಮಾನ್ಯ ಅಭಿಮಾನ ಪ್ರದರ್ಶಿಸಿದ್ದಾನೆ. ಈ ಯುವ ಅಭಿಮಾನಿ ತನ್ನ ಹಳ್ಳಿಯಿಂದ ಧೋನಿ ನಿವಾಸದವರೆಗೆ 16 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ತಲುಪಿದ್ದಾನೆ!
ಹರಿಯಾಣದ ಹಿಸಾರ್​​ ಜಿಲ್ಲೆಯ ಜಾಲನ್​ ಖೇಡ ಗ್ರಾಮದ 18 ವರ್ಷದ ಅಜಯ್​ ಗಿಲ್​ ಎಂಬುವ ತನ್ನ ಹಳ್ಳಿಯಿಂದ ಧೋನಿಯವರ ರಾಂಚಿ ನಿವಾಸದವರೆಗೆ, ಅಂದರೆ ಸುಮಾರು 1,400 ಕಿಲೋಮೀಟರ್​ ದೂರ, ನಡೆದುಕೊಂಡು ಬಂದಿದ್ದಾನೆ. ಗ್ರಾಮದ ಸಲೂನಿನಲ್ಲಿ ಕೆಲಸ ಮಾಡುವ ಈ ಯುವಕ ತಲೆಯ ಒಂದು ಕಡೆ ಧೋನಿ ಎಂದೂ, ಇನ್ನೊಂದು ಕಡೆ ಮಾಹಿ ಎಂದೂ ಕೂದಲಲ್ಲಿ ಡಿಸೈನ್​ ಮಾಡಿಸಿಕೊಂಡಿದ್ದು, ತಾನು ತಂದಿದ್ದ ಭಾರತದ ಬಾವುಟಕ್ಕೆ ಧೋನಿ ಸಹಿ ಮಾಡಿಸಿಕೊಳ್ಳಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಾನೆ.

ಆದರೆ “ತಮ್ಮ ಅಭಿಮಾನಿಯೊಂದಿಗೆ 10 ನಿಮಿಷವಾದರೂ ಮಾತಾಡೇ ಆಡ್ತಾರೆ” ಎಂಬ ವಿಶ್ವಾಸದಿಂದ ಬಂದಿದ್ದ ಈ ಯುವಕನಿಗೆ, ಸದ್ಯಕ್ಕೆ ನಿರಾಸೆ ಕಾದಿತ್ತು. ಕಾರಣ, ಯುಎಇಯಲ್ಲಿ ನಡೆಯುವ ಐಪಿಎಲ್​ 2021 ಪಂದ್ಯಾವಳಿಗೆ ತೆರಳುವ ಸಲುವಾಗಿ, ಮಹೇಂದ್ರ ಸಿಂಗ್​ ಧೋನಿ ಅವರು, ಅದಾಗಲೇ ಚೆನ್ನೈ ವಿಮಾನ ನಿಲ್ದಾಣದಲ್ಲಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಜಾಕ್​​ಲೀನ್ ಫರ್ನಾಂಡಿಸ್​​, ಸಚಿನ್ ತೆಂಡೂಲ್ಕರ್…. ಸೆಲೆಬ್ರಿಟಿಗಳ ಸ್ವಾತಂತ್ರ್ಯ ದಿನಾಚರಣೆಯ ಝಲಕ್​ ಇಲ್ಲಿದೆ
ಧೋನಿ ವಾಪಸಾಗಲು ಇನ್ನೂ ಮೂರು ತಿಂಗಳು ಬೇಕು ಎಂದು ತಿಳಿಸಿದರೂ ಅವರನ್ನು ಭೇಟಿಯಾಗದೆ ಮನೆಗೆ ವಾಪಸ್​ ಹೋಗುವುದಿಲ್ಲ ಎಂದು ಅವರ ಫಾರ್ಮ್​​ಹೌಸಿನ ಹೊರಗೆ ಅಜಯ್​​ ಹಟ ಹಿಡಿದು ನಿಂತಿದ್ದ. ಸ್ಥಳೀಯ ಬಿಸಿನೆಸ್​ಮನ್​ ಅನುರಾಗ್​ ಚಾವ್ಲಾ ಎಂಬುವರು, ಮತ್ತೊಮ್ಮೆ ಧೋನಿಯನ್ನು ಕಾಣಲು ಬರುವಂತೆ ಆತನ ಮನವೊಲಿಸಿ, ದೆಹಲಿಗೆ ಏರ್​ ಟಿಕೆಟ್​ ಕೊಡಿಸಿ ವಾಪಸ್​ ಕಳುಹಿಸಿದರು ಎಂದು ದ ಟೆಲಿಗ್ರಾಫ್​ ವರದಿ ಮಾಡಿದೆ.(ಏಜೆನ್ಸೀಸ್)
VIDEO | ಟೀಂ ಇಂಡಿಯ ಸೇರಲು ಮೈದಾನಕ್ಕೆ ಬಂದ ಅಭಿಮಾನಿ?!

ಓಲಾ ಎಲೆಕ್ಟ್ರಿಕ್​ ಸ್ಕೂಟರ್ ಅನಾವರಣ; ಬೆಲೆ, ಲಭ್ಯತೆ ವಿವರ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 2 =
Remember me
