ಡೆಹ್ರಾಡೂನ್​​:ಹಣ ಖರ್ಚು ಮಾಡಿ ಬೈಕ್​, ಕಾರುಗಳಿಗೆ ಫ್ಯಾನ್ಸಿ ನಂಬರ್ ಪ್ಲೇಟ್​ ಬರೆಸುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ. ಆದರೆ, ಉತ್ತರಾಖಂಡದಲ್ಲಿ ವ್ಯಕ್ತಿಯೋರ್ವ ತನ್ನ ಕಾರಿನ ಮೇಲೆ ಹಿಂದಿಯಲ್ಲಿ ‘ಪಪ್ಪಾ’ ಎಂದು ಬರೆಸಿ ಮಾಡಿದ ತಪ್ಪಿಗೆ ಈಗ ದಂಡ ಕಟ್ಟಿದ್ದಾನೆ.
ಪ್ರಕರಣದ ಹಿನ್ನೆಲೆ:ವ್ಯಕ್ತಿಯೊಬ್ಬನ ಕಾರಿನ ನಂಬರ್​​​ 4141 ಆಗಿದ್ದು, ಅದನ್ನ ಫ್ಯಾನ್ಸಿ ಸ್ಟೈಲ್​ನಲ್ಲಿ ಪಪ್ಪಾ(पापा) ಎಂದು ಹಿಂದಿಯಲ್ಲಿ ಬರೆಸಲಾಗಿದೆ. ಇದು ಉತ್ತರಾಖಂಡ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ. ಹೀಗಾಗಿ, ನಂಬರ್ ಪ್ಲೇಟ್ ಹಾಕಿಸಿರುವ ವ್ಯಕ್ತಿಯನ್ನ ಟ್ರಾಫಿಕ್ ಕಚೇರಿಗೆ ಕರೆಯಿಸಿ, ದಂಡ ಕಟ್ಟಿಸಿಕೊಳ್ಳಲಾಗಿದೆ. ನಂಬರ್ ಪ್ಲೇಟ್​ ಬದಲಾವಣೆ ಮಾಡುವಂತೆ ತಿಳಿಸಿದ್ದು, ಇದರ ಬೆನ್ನಲ್ಲೇ ಚೇಂಜ್ ಮಾಡಲಾಗಿದೆ.
ಈ ನಂಬರ್ ಪ್ಲೇಟ್​ ತಮ್ಮ ಟ್ವಿಟರ್ ಅಕೌಂಟ್​ನಲ್ಲಿ ಶೇರ್ ಮಾಡಿಕೊಂಡಿರುವ ಉತ್ತರಾಖಂಡ ಪೊಲೀಸರು, ‘ಮಕ್ಕಳು ದೊಡ್ಡ ಹೆಸರು ಮಾಡುವಂತೆ ತಂದೆ ಹೇಳುತ್ತಾರೆ, ಆದರೆ, ಮಗ ತಂದೆಯ ಹೆಸರು ಕಾರಿನ ಪ್ಲೇಟ್​ ಮೇಲೆ ಬರೆಯುತ್ತಾನೆ ಎಂದು ಬರೆದುಕೊಂಡಿದ್ದಾರೆ. ಇಂತಹ ನಂಬರ್ ಪ್ಲೇಟ್ ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
पापा कहते हैं बड़ा नाम करेगा,गाड़ी के प्लेट पर पापा लिखेगा,मगर ये तो कोई न जाने,कि ऐसी प्लेट पर होता है चालान..
ट्वीट पर शिकायत प्राप्त करने के बाद#UttarakhandPoliceने गाड़ी मालिक को यातायात ऑफिस बुलाकर नम्बर प्लेट बदलवाई और चालान किया।pic.twitter.com/oL4E3jJFAV
— Uttarakhand Police (@uttarakhandcops)July 12, 2022

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ ವೇಳೆ ಕಳ್ಳತನ; ನೌಕರನ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + sixteen =
Remember me
