ಹೈದರಾಬಾದ್:ನಗರದಲ್ಲಿ ಫ್ಯಾನ್ಸಿ ಟಿಜಿ ನಂಬರ್ ಪ್ಲೇಟ್‌ಗಳ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದ್ದ ಆರ್‌ಟಿಎ, ಪ್ರತ್ಯೇಕವಾಗಿ ಈ ನಂಬರ್​ ಪ್ಲೇಟ್​ ಸೇಲಾದ ಮೊತ್ತವನ್ನು ನೋಡಿ ಭಾರೀ ಅಚ್ಚರಿಗೆ ಒಳಗಾಗಿದೆ. ಇಂದು (ಮಾರ್ಚ್ 15) ಖೈರ್ತಾಬಾದ್‌ನಲ್ಲಿರುವ ಆರ್‌ಟಿಎ ಪ್ರಧಾನ ಕಚೇರಿಯಲ್ಲಿ ನಡೆದ ಹರಾಜು ಕಾರ್ಯಕ್ರಮದಲ್ಲಿ ಟಿಜಿ ಸರಣಿಯ ನಂಬರ್ ಪ್ಲೇಟ್‌ಗಳನ್ನು ಬಿಡುಗಡೆಗೊಳಿಸಲಾಯಿತು.
ಇದನ್ನೂ ಓದಿ:ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ: ಮೂವರ ವಿರುದ್ಧ ದೂರು
ತೆಲಂಗಾಣ ಸರ್ಕಾರ ಕಳೆದ ತಿಂಗಳು ರಾಜ್ಯದ ಸಂಕ್ಷೇಪಣವನ್ನು ‘ಟಿಎಸ್’ ನಿಂದ ‘ಟಿಜಿ’ಗೆ ಬದಲಾಯಿಸಲು ನಿರ್ಧರಿಸಿತು. ಈ ನಿರ್ಧಾರದ ಬೆನ್ನಲ್ಲೇ ತೆಲಂಗಾಣದ ಹಳೆಯ ವಾಹನಗಳ ನಂಬರ್ ಪ್ಲೇಟ್‌ಗಳಿಗೆ ಅಪ್‌ಡೇಟ್ ಅಗತ್ಯವಿದೆಯೇ ಎಂಬ ಬಗ್ಗೆ ಹಲವರು ಕುತೂಹಲ ವ್ಯಕ್ತಪಡಿಸಿದ್ದರು. ಈ ಹೊಸ ವಾಹನದ ನೋಂದಣಿಗೆ ಅರ್ಜಿ ಸಲ್ಲಿಸುವ ವಾಹನ ಮಾಲೀಕರು ಟಿಜಿ ನಂಬರ್ ಪ್ಲೇಟ್ ಪಡೆಯುತ್ತಾರೆ. ಆದರೆ ಈಗಾಗಲೇ ನೋಂದಣಿಯಾಗಿರುವ ವಾಹನಗಳು ಅದನ್ನು ಬದಲಾಯಿಸಬೇಕಾಗಿಲ್ಲ ಎಂದು ಇಲಾಖೆ ತಿಳಿಸಿದೆ.
ಇನ್ನು ಮೊದಲ ಟಿಜಿ ನಂಬರ್ ಪ್ಲೇಟ್, ಟಿಜಿ 09 0001 ಅನ್ನು ಹರಾಜಿನಲ್ಲಿ 9.61 ಲಕ್ಷ ರೂ.ಗೆ ಖರೀದಿಸಲಾಗಿತು. ತದನಂತರ TG 09 0909, 09 0005, 09 0002, 09 0369 ಮತ್ತು 09 0007 ನಂಬರ್ ಪ್ಲೇಟ್‌ಗಳನ್ನು ಕ್ರಮವಾಗಿ 2.30 ಲಕ್ಷ, 2.21, 1.2, 1.20 ಮತ್ತು 1.20 ಲಕ್ಷ ಮೊತ್ತಕ್ಕೆ ಖರೀದಿಸಲಾಗಿತು. ಹರಾಜಿನಿಂದ ಬಂದ ಒಟ್ಟು ಆದಾಯ 30,49,589 ರೂ. ಎಂದು ವರದಿಯಾಗಿದೆ.
ಇದನ್ನೂ ಓದಿ:ಒಂದು ಕಾಲದ ಸ್ಟಾರ್​ ನಟಿ ಇಂದು ಹೊಟ್ಟೆಪಾಡಿಗಾಗಿ ಸಾಬೂನು ಮಾರುತ್ತಿದ್ದಾರೆ! ಈಕೆ ಕನ್ನಡದಲ್ಲಿ ನಟಿಸಿದ್ದಾರೆ
ಏನಿದು ‘ಟಿಎಸ್’​ನಿಂದ ‘ಟಿಜಿ’:2014 ರಲ್ಲಿ ತೆಲಂಗಾಣ ರಚನೆಯ ನಂತರ ಆಗಿನ ಟಿಆರ್ಎಸ್ ಸರ್ಕಾರವು ‘ಟಿಎಸ್’ ಅನ್ನು ರಾಜ್ಯದ ಸಂಕ್ಷೇಪಣವಾಗಿ ಆಯ್ಕೆ ಮಾಡಿತು. ಸದ್ಯ ಇದರ ಬದಲಾವಣೆಯ ಬೆನ್ನಲ್ಲೇ ಹಳೆಯ ಫ್ಯಾನ್ಸಿ ನಂಬರ್​ ಪ್ಲೇಟ್​ಗಳ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಇದರಿಂದ ಆರ್​ಟಿಎಗೂ ಒಳ್ಳೆಯ ಆದಾಯ ದೊರಕಿದೆ ಎಂದು ವರದಿ ಉಲ್ಲೇಖಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಿ.ಶ್ರೀಧರ್ ಬಾಬು, “ಹಿಂದಿನ ಸರ್ಕಾರ ಯಾವುದೇ ನಿಯಮ, ಛಂದಸ್ಸು ಅನುಸರಿಸದೆ, ಅದರ ಇಚ್ಛೆಯ ಮೇರೆಗೆ ‘ಟಿಎಸ್’ಗೆ ಹೋಗಲು ನಿರ್ಧರಿಸಿತ್ತು. ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ‘ಟಿಎಸ್’ ಅನ್ನು ‘ಟಿಜಿ’ ಎಂದು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದು ತೆಲಂಗಾಣದ ಎಲ್ಲಾ ಹೊಸ ವಾಹನಗಳಿಗೆ ಅನ್ವಯಿಸುತ್ತದೆ ಮತ್ತು ಹಳೆಯ ವಾಹನಗಳಿಗೆ ಅಲ್ಲ” ಎಂದರು,(ಏಜೆನ್ಸೀಸ್).
ಬಿಸಿಯೂಟ ತುಂಬ ಅಗತ್ಯ, ದಯವಿಟ್ಟು ಅರ್ಧದಿನ ರಜೆ ಕೊಡ್ಬೇಡಿ: ಮನಕಲಕುವಂತಿದೆ ಈ ವಿದ್ಯಾರ್ಥಿ ಬರೆದ ಪತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
