ನವದೆಹಲಿ :ನಿನ್ನೆ ತಾನೇ ಬಾಲಿವುಡ್ ನಟ ಆಮೀರ್​ ಖಾನ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಇದೀಗ ಅವರೊಂದಿಗೆ 3 ಇಡಿಯಟ್ಸ್ ಚಿತ್ರದಲ್ಲಿ ಸಹನಟರಾಗಿ ನಟಿಸಿದ್ದ ತಮಿಳು ನಟ ಆರ್.ಮಾಧವನ್​ ಕೂಡ ಕರೊನಾ ಪಾಸಿಟೀವ್ ಆಗಿದ್ದಾರೆ. ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ತಿಳಿಸಿರುವ ಮಾಧವನ್ ತಮ್ಮ ಚಿತ್ರದ ಪಾತ್ರಗಳನ್ನು ಉಲ್ಲೇಖಿಸುತ್ತಾ ತಮಾಷೆಯ ಕಾಮೆಂಟ್ ಮಾಡಿದ್ದಾರೆ.
ರಾಜು ಹಿರಾನಿ ಅವರ ಚಿತ್ರವಾದ 3 ಇಡಿಯಟ್ಸ್​ ಭಾರೀ ಜನಪ್ರಿಯತೆ ಗಳಿಸಿದ ಚಿತ್ರ. ಈ ಚಿತ್ರದಲ್ಲಿ ರಾಂಚೋ(ಆಮೀರ್), ಫರಹಾನ್(ಮಾಧವನ್) ಮತ್ತು ರಾಜು(ಶರ್ಮನ್ ಜೋಶಿ) ಎಂಬ ಮೂವರು ಆಪ್ತ ಕಾಲೇಜು ಸ್ನೇಹಿತರಿರುತ್ತಾರೆ. ವೈರಸ್ ಎಂಬ ಅಡ್ಡಹೆಸರು ಹೊಂದಿದ ವೀರು ಸಹಸ್ರಬುದ್ಧಿ (VIRU S.) ಎಂಬ ಐಐಟಿ ಪ್ರಾಂಶುಪಾಲರು ಈ ಮೂವರ ಹಿಂದೆ ಬಿದ್ದಿರುತ್ತಾರೆ. ಅದನ್ನು ನೆನಪಿಸುತ್ತಾ ಮಾಧವನ್ ಫನ್ನಿ ಕಾಮೆಂಟ್ ಬರೆದಿದ್ದಾರೆ.
Farhan HAS to follow Rancho and Virus has always been after us BUT this time he bloody caught up. 😡😡😄😄BUT-ALL IS WELL and the Covid🦠 will be in the Well soon. Though this is one place we don’t want Raju in😆😆. Thank you for all the love ❤️❤️I am recuperating well.🙏🙏🙏pic.twitter.com/xRWAeiPxP4— Ranganathan Madhavan (@ActorMadhavan)March 25, 2021
Farhan HAS to follow Rancho and Virus has always been after us BUT this time he bloody caught up. 😡😡😄😄BUT-ALL IS WELL and the Covid🦠 will be in the Well soon. Though this is one place we don’t want Raju in😆😆. Thank you for all the love ❤️❤️I am recuperating well.🙏🙏🙏pic.twitter.com/xRWAeiPxP4

“ರಾಂಚೋನ ಫರಹಾನ್ ಫಾಲೋ ಮಾಡಲೇಬೇಕು. ವೈರಸ್ ನಮ್ಮ ಹಿಂದೆ ಯಾವಾಗಲೂ ಇದ್ದು, ಇದೀಗ ಗಟ್ಟಿಗೆ ಹಿಡಿದುಕೊಂಡುಬಿಟ್ಟಿದ್ದಾನೆ” ಎಂದಿರುವ ಮಾಧವನ್, ಜೊತೆಗೇ ನಿರಾತಂಕವಾಗಿರಬೇಕು ಎಂದು ಹೇಳಲು ಆ ಚಿತ್ರದಲ್ಲಿ ಕ್ಯಾಚ್​ ಫ್ರೇಸ್​ ಆಗಿ ಬಳಸಲ್ಪಡುವ ‘ಆಲ್ ಇಸ್ ವೆಲ್​’ ಅನ್ನೂ ತಮ್ಮ ಸಂದೇಶದಲ್ಲಿ ಅಡಕಗೊಳಿಸಿದ್ದಾರೆ. “ಆಲ್ ಇಸ್ ವೆಲ್ ಅಂಡ್ ದ ಕೋವಿಡ್ ವೈರಸ್ ವಿಲ್ ಬಿ ಇನ್ ದ ವೆಲ್ ಸೂನ್” ಎಂದು ಬರೆದು ತಾವು ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಜಾಗದಲ್ಲಿ ನಾವು ರಾಜು ನಮ್ಮ ಜೊತೆಗಿರಬೇಕೆಂದು ಬಯಸುವುದಿಲ್ಲ ಎಂದಿದ್ದಾರೆ!(ಏಜೆನ್ಸೀಸ್)
ಬಾಲಿವುಡ್ ನಟ ಆಮೀರ್ ಖಾನ್​ಗೆ ಕರೊನಾ ಸೋಂಕು
ಲಂಚ ಪಡೆಯುತ್ತಾ ಸಿಕ್ಕಿಬಿದ್ದ ಪೊಲೀಸ್… ಪಿಸ್ತೂಲ್ ತೋರಿಸಿ ಪರಾರಿ !
ಬೆಂಗಳೂರು ಎಂಟ್ರಿಗೂ ಮುನ್ನ ಕರೊನಾ ನೆಗೆಟಿವ್‌ ವರದಿ ಕಡ್ಡಾಯ- ಯಾರಿಗೆಲ್ಲಾ ಅನ್ವಯ? ಎಂದಿನಿಂದ ಜಾರಿ? ಇಲ್ಲಿದೆ ಡಿಟೇಲ್ಸ್‌


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 5 =
Remember me
