ಗುರುಗ್ರಾಮ: ಯುವಜನತೆ ಎದುರಿಸುತ್ತಿರುವ ಕುಂದುಕೊರತೆಗಳ ಬಗ್ಗೆ ವಿಶೇಷ ಗಮನಹರಿಸಲು ಫರಿದಾಬಾದ್ ಪೊಲೀಸರು ಪೊಲೀಸ್ ತಂಡವನ್ನು ರಚಿಸಿದ್ದಾರೆ.ಡ್ರಗ್ಸ್ ವ್ಯಸನ ಸೇರಿದಂತೆ ಯುವಜನತೆಗೆ ಸಂಬಂಧಿಸಿದ ಅಪರಾಧಗಳನ್ನು ಪರಿಶೀಲಿಸಲು ಈ ಟೀನೇಜ್ ಪೊಲೀಸ್ ಅಥವಾ ಟಿಎಪಿ ಸ್ಥಾಪಿಸಲಾಗಿದೆ.
14 ರಿಂದ 19 ವರ್ಷ ವಯಸ್ಸಿನ ಯುವಜನತೆಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುವುದು ಇಂದಿನ ಅಗತ್ಯವಾಗಿದೆ ಎಂದು ಫರಿದಾಬಾದ್‌ನ ನೂತನ ಪೊಲೀಸ್ ಆಯುಕ್ತ ಒ.ಪಿ.ಸಿಂಗ್ ಹೇಳಿದರು.
ಇದನ್ನೂ ಓದಿ:ಶ್ರಮಿಕ್​ ರೈಲುಗಳಿಂದ ಬಂದ ಆದಾಯ ಕೇವಲ 429 ಕೋಟಿ ರೂ. ಆದ್ರೂ ಲಾಭ ಮಾಡಿಕೊಂಡ್ರು ಎಂದ ರಾಹುಲ್​ ಗಾಂಧಿ
ಸಿಂಗ್ ಪ್ರಕಾರ, ಹದಿಹರೆಯದವರು ಸಾಮಾಜಿಕ ಜಾಲತಾಣ ಮತ್ತು ಇಂಟರ್ನೆಟ್​​ಗೆ ಒಡ್ಡಿಕೊಳ್ಳುವುದರಿಂದ ಸಮಾಜ ವಿರೋಧಿ ಚಟುವಟಿಕೆಗಳು ನಡೆಯುವ ಅಪಾಯ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜವಾಬ್ದಾರಿ ಹೆಚ್ಚಿರುವುದರಿಂದ ಎಸಿಪಿ ಶ್ರೇಣಿಯ ಅಧಿಕಾರಿಯೊಬ್ಬರು ಹೊಸ ವಿಭಾಗದ ಮುಖ್ಯಸ್ಥರಾಗಿರುತ್ತಾರೆ ಎಂದು ಅವರು ಹೇಳಿದರು.ಶಾಲಾ ಪ್ರಾಧಿಕಾರಗಳು, ಪಾಲಕರ ಸಂಸ್ಥೆಗಳು ಮತ್ತು ಯುವಜನತೆಯ ಸಮಸ್ಯೆಗಳ ಕುರಿತು ವ್ಯವಹರಿಸುತ್ತಿರುವ ಎನ್​​ಜಿಒಗಳ ನಿಕಟ ಸಮನ್ವಯದಡಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ತಿಳಿಸಿದರು.ಶಾಲಾ ಮುಖಂಡರು ಮತ್ತು ಕ್ರೀಡಾ ಮುಖಂಡರೊಂದಿಗೆ ಸಭೆ ನಡೆಸಿ, ಅವರು ಮತ್ತು ಅವರ ವಯಸ್ಸಿನ ಯುವಜನತೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಿಳಿದುಕೊಳ್ಳುವಲ್ಲಿ ಈ ಟಿಎಪಿ ಪೊಲೀಸರು ಕೆಲಸ ಮಾಡುತ್ತಾರೆ. ವೆಬ್ ಸಭೆ ನಡೆಸುವ ಮೂಲಕ ಯುವಜನತೆ ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಕರ್ನಾಟಕ, ಕೇರಳದಲ್ಲಿದ್ದಾರೆ 200 ಐಎಸ್ ಉಗ್ರರು : ವಿಶ್ವಸಂಸ್ಥೆ ವರದಿ ಎಚ್ಚರಿಕೆ
ಇಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದರೆ ಹರಿಯಾಣದ ಇತರ ಜಿಲ್ಲೆಗಳಲ್ಲಿ ಪ್ರಾಯೋಗಿಕ ಯೋಜನೆ ಪರಿಚಯಿಸಲಾಗುವುದು ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕ ಮನೋಜ್ ಯಾದವ ತಿಳಿಸಿದ್ದಾರೆ. ” ಯುವಜನತೆ ಸಾಕಷ್ಟು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆ ಎದುರಿಸುತ್ತಾರೆ. ಒತ್ತಡಕ್ಕೊಳಗಾಗುವ ಯುವಕರು ಅಪರಾಧಕ್ಕೆ ಗುರಿಯಾಗಬಹುದು. ಹರಿಯಾಣ ಪೊಲೀಸರು ಯುವಜನತೆಯನ್ನು ರಕ್ಷಿಸುವಲ್ಲಿ ಬದ್ಧರಾಗಿದ್ದಾರೆ ಎಂದು ಯಾದವ್ ತಿಳಿಸಿದರು.
ಕೆಲವೇ ಕ್ಷಣಗಳಲ್ಲಿ ಮದುವೆಯಾಗಲಿದ್ದ 19ರ ಹುಡುಗಿಗೆ ತಂದೆಯೇ ವಿಲನ್ ಆಗಿ ಬಂದ…. ನಡೆದಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seven =
Remember me
