ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯ ಮೂರು ತಿದ್ದುಪಡಿಗಳ ಅನುಷ್ಠಾನ ತಡೆಯಲು ಕಾಂಗ್ರೆಸ್ ಆಡಳಿತದ ರಾಜ್ಯಗಳು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯುವ ನಿರೀಕ್ಷೆಯಿದೆ. ಕೇಂದ್ರದ ಕಾನೂನುಗಳನ್ನು ನಿಷ್ಕ್ರಿಯಗೊಳಿಸಲು ಕಾಂಗ್ರೆಸ್ ಆಡಳಿತದ ರಾಜ್ಯಗಳು ಪರ್ಯಾಯ ಕಾನೂನು ರೂಪಿಸಬೇಕೆಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಇತ್ತೀಚೆಗೆ ಕರೆ ನೀಡಿದ್ದರು. ಮಾದರಿ ಕರಡನ್ನು ಸಿದ್ಧಪಡಿಸಿ ಈಗಾಗಲೇ ರಾಜ್ಯಗಳಿಗೆ ಕಳಿಸಲಾಗಿದೆ. ಇತರ ಪ್ರತಿಪಕ್ಷಗಳ ರಾಜ್ಯಗಳಿಗೂ ಇದನ್ನು ನೀಡುವುದಾಗಿ ಕಾಂಗ್ರೆಸ್ ಹೇಳಿದೆ.
ಕರಡಿನಲ್ಲಿ ಏನಿದೆ?ಕೇಂದ್ರದ ಕಾನೂನುಗಳನ್ನು ಅನುಷ್ಠಾನಗೊಳಿಸುವ ದಿನಾಂಕವನ್ನು ರಾಜ್ಯ ಸರ್ಕಾರ ನಿರ್ಧರಿಸಬಹುದು ಎನ್ನುವುದು ಮೊದಲ ಅಂಶ. ರೈತ ಮತ್ತು ಯಾವುದೇ ಕಂಪನಿ ನಡುವಿನ ಗುತ್ತಿಗೆ ಕೃಷಿ, ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ)ಗಿಂತ ಕಡಿಮೆ ಇರದಂತೆ ಖಾತರಿಪಡಿಸುವುದು ಎರಡನೇ ಅಂಶವಾಗಿದೆ. ಇತರ ಪಕ್ಷಗಳೊಂದಿಗೆ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್​ನಂಥ ರಾಜ್ಯಗಳಲ್ಲಿ ಇಂಥ ವಿಶೇಷ ಅಧಿವೇಶನಗಳು ನಡೆಯಲಿವೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕೇರಳ, ಪಶ್ಚಿಮ ಬಂಗಾಳ ಮೊದಲಾದ ಕಾಂಗ್ರೆಸೇತರ, ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳು ಕೂಡ ಏನು ಮಾಡಬಹುದು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಿಲ್ಲ. ರಾಜ್ಯಗಳು ಅಂಗೀಕರಿಸುವ ಮಸೂದೆಗಳಿಗೆ ರಾಷ್ಟ್ರಪತಿ ಅಂಗೀಕಾರ ಪಡೆಯಬೇಕಾಗುತ್ತದೆ. ಸಹಿ ಹಾಕಲು ರಾಷ್ಟ್ರಪತಿ ನಿರಾಕರಿಸಬಹುದು. ಆದರೆ ಅವರು ಅದಕ್ಕೆ ವಿವರಣೆ ನೀಡುವುದು ಅಗತ್ಯ.
ರಾಹುಲ್ ‘ಕೃಷಿ ಯಾತ್ರೆ’ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮೂರೂ ಕೃಷಿ ಕಾನೂನುಗಳನ್ನು ರದ್ದು ಪಡಿಸಲಾಗುವುದು ಎಂದು ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಪಂಜಾಬ್​ನಲ್ಲಿ ‘ಖೇತಿ ಬಚಾವೋ ಯಾತ್ರಾ’ (ಕೃಷಿ ಉಳಿಸಿ ಯಾತ್ರೆ) ಅಂಗವಾಗಿ ಭಾನುವಾರ ನಡೆದ ಟ್ರ್ಯಾಕ್ಟರ್ ರ‍್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು. ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ), ಆಹಾರ ಧಾನ್ಯ ಖರೀದಿ ಮತ್ತು ಸಗಟು ಮಾರುಕಟ್ಟೆಗಳು ದೇಶದ ‘ಮೂರು ಆಧಾರಸ್ತಂಭಗಳು. ಪ್ರಧಾನಿ ನರೇಂದ್ರ ಮೋದಿ ಈ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದ್ದಾರೆ. ಹಾಗಾಗಲು ಕಾಂಗ್ರೆಸ್ ಬಿಡುವುದಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಈ ಕರಾಳ ಕಾನೂನುಗಳ ಅಡ್ಡಿಯನ್ನು ನಿವಾರಿಸಲಾಗುವುದು. ಅದಾನಿ ಮತ್ತು ಅಂಬಾನಿ ಮೋದಿ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ಮಧ್ಯವರ್ತಿಗಳ ಮಧ್ಯವರ್ತಿಗಳು!ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವವರು ‘ಮಧ್ಯವರ್ತಿಗಳ ಮಧ್ಯವರ್ತಿಗಳಂತೆ’ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟೀಕಿಸಿದ್ದಾರೆ. ಕೃಷಿಕರು ತಮ್ಮ ಫಸಲಿಗೆ ಅತಿ ಕಡಿಮೆ ಬೆಲೆ ಪಡೆಯುತ್ತಾರೆ. ಆದರೆ ಗ್ರಾಹಕರು ಅವುಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಬೇಕಾಗುತ್ತದೆ. ಮಧ್ಯವರ್ತಿಗಳೇ ಇದಕ್ಕೆ ಕಾರಣ. ಪ್ರಸಕ್ತ ಕಾನೂನು ವಿರೋಧಿ ಚಳವಳಿ ಶೀಘ್ರವೇ ತನ್ನಿಂತಾನೇ ಕೊನೆಗೊಳ್ಳುತ್ತದೆ ಎಂದರು.
ಕುಸುಮಾ ತಲೆ ಮೇಲೆ ‘ಕೈ’ ಇಟ್ರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ !

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 2 =
Remember me
