ಧರ್ಮಪುರಿ:ತಮ್ಮ ಮನೆಯ ಮುಂದೆ ಹೆಲಿಕಾಪ್ಟರ್​ ಲ್ಯಾಂಡ್​ ಮಾಡಲು ಅನುಮತಿ ನೀಡುವಂತೆ ತಮಿಳುನಾಡಿನ ರೈತನೊಬ್ಬ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿರುವ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಗಣೇಶನ್​ (57) ರೈತನ ಹೆಸರು. ತಮಿಳುನಾಡಿನ ಧರ್ಮಪುರಿ ಮೂಲದ ಗಣೇಶನ್​ ತನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಮಾಡಿದ್ದಾರೆ.
ಅಂದಹಾಗೆ ಗಣೇಶನ್​ ಬಳಿ ಯಾವುದೇ ಹೆಲಿಕಾಪ್ಟರ್​ ಇಲ್ಲ. ಆದರೆ, ಆತನ ಕಿರಿಯ ಮಗಳು ಆಟಿಕೆ ಹೆಲಿಕಾಪ್ಟರ್​ ಹೊಂದಿದ್ದರೆ, ಹಿರಿಯ ಮಗಳು ಹೆಲಿಕಾಪ್ಟರ್​ ಫೋಟೋವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದು, ತನ್ನ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಗಣೇಶನ್​ ಅವರು ಈ ವಿಭಿನ್ನ ಪ್ರಯತ್ನ ಮಾಡಿದ್ದಾರೆ.
ಸಮಸ್ಯೆಯ ಬಗ್ಗೆ ಮಾತನಾಡಿರುವ ಗಣೇಶನ್​, ರಸ್ತೆ ಇಲ್ಲದಿರುವುದರಿಂದ ನಮ್ಮ ಮನೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಳೆದ 4 ತಿಂಗಳಿಂದ ಸಂಬಂಧಿಕರ ಮನೆಯಲ್ಲೇ ಉಳಿದ್ದೇವೆ. ರಸ್ತೆ ಇಲ್ಲದಿರುವ ಬಗ್ಗೆ ಪೊಲೀಸ್​ ಮತ್ತು ಕಂದಾಯ ಇಲಾಖೆಗೆ ದೂರು ದಾಖಲಿಸಿದರೂ ಯಾವುದೇ ಕ್ರಮ ವಹಿಸಿಲ್ಲ. ಆದ್ದರಿಂದ ಎಲ್ಲರ ಗಮನ ಸೆಳೆಯಲು ಈ ರೀತಿಯ ವಿಶೇಷ ಪ್ರಯತ್ನ ಮಾಡಿದೆ ಎಂದು ಸುದ್ದಿಗಾರರ ಮುಂದೆ ತಿಳಿಸಿದ್ದಾರೆ.(ಏಜೆನ್ಸೀಸ್​)
ರೆಡ್​ಹ್ಯಾಂಡ್​ ಆಗಿ ಸಿಕ್ಕಿಬೀಳ್ತಿದ್ದಂತೆ ಲಂಚದ ಹಣ ನುಂಗಲು ಯತ್ನ! SI ಹೈಡ್ರಾಮಕ್ಕೆ ಅಧಿಕಾರಿಗಳಿಂದ ತಕ್ಕ ಉತ್ತರ

ಭರತ್​ಗೆ ಗೆಲುವಿನ ವಿಜಯಾನಂದ: ಡಾ. ಆನಂದ ಸಂಕೇಶ್ವರ ಪಾತ್ರದಲ್ಲಿ ನಟಿಸಿರುವ ಭರತ್ ಬೋಪಣ್ಣ

ರಿಷಭ್​ ಶೆಟ್ಟಿ ಕಂಡರೆ ಹೊಟ್ಟೆಕಿಚ್ಚಂತೆ! ಕಾಂತಾರ ಯಶಸ್ಸಿನ ಬಗ್ಗೆ ನವಾಜುದ್ದೀನ್​ ಸಿದ್ದಿಖಿ ಆಡಿದ ಮಾತುಗಳಿವು…

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:three × 1 =
Remember me
