ಭೋಪಾಲ್​:ಮಧ್ಯಪ್ರದೇಶದ ಛತರ್​ಪುರ್​ ಜಿಲ್ಲೆಯ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಗ್ರಾಮದಲ್ಲಿರುವ ವಿದ್ಯುತ್​ ವಿತರಣಾ ಕಂಪನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.
ಮುನೇಂದ್ರ ರಜಪೂತ್​ ಆತ್ಮಹತ್ಯೆ ಮಾಡಿಕೊಂಡ ರೈತ. ಸಾಯುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ರೈತ ಡೆತ್​ನೋಟ್​ ಬರೆದಿಟ್ಟಿದ್ದು, ಮೃತದೇಹವನ್ನು ಸರ್ಕಾರಕ್ಕೆ ಹಸ್ತಾಂತರಿಸಿ, ದೇಹದ ಪ್ರತಿಯೊಂದು ಅಂಗವನ್ನು ಮಾರಾಟ ಮಾಡಿ ಸಾಲ ತೀರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಗ್ರಾಪಂ ಚುನಾವಣೆ: ಗೆದ್ದವರ ಲೆಕ್ಕಾಚಾರ, ಸೋತವರ ಚಿಂತೆ ಏನು?
ಕರೊನಾ ಸಂಕಷ್ಟದ ನಡುವೆ ಸುಮಾರು 87,000 ರೂ. ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್​ ವಿತರಣ ಕಂಪನಿ (ಡಿಸ್ಕಾಂ) ರೈತನ ಹಿಟ್ಟಿನ ಗಿರಣಿ (ಫ್ಲೋರ್​ ಮಿಲ್​) ಮತ್ತು ಮೋಟರ್​ ಸೈಕಲ್​ ವಶಪಡಿಸಿಕೊಂಡಿದ್ದರು ಎಂದು ಮೃತ ರೈತನ ಕುಟುಂಬದವರು ದೂರಿದ್ದಾರೆ.
ರಾಜಕಾರಣಿಗಳು ಮತ್ತು ಉದ್ಯಮಿಗಳು ದೊಡ್ಡ ದೊಡ್ಡ ಹಗರಣಗಳು ಮಾಡಿದಾಗ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇಂತಹ ವ್ಯಕ್ತಿಗಳು ಸಾಲ ಪಡೆದರೆ, ತೀರಿಸಲು ಕಾಲಾವಕಾಶ ನೀಡುತ್ತಾರೆ ಅಥವಾ ಮನ್ನಾ ಮಾಡುತ್ತಾರೆ. ಆದರೆ, ಬಡವರು ಸಣ್ಣ ಪ್ರಮಾಣದ ಸಾಲ ಪಡೆದರೆ ಸಾಲ ಏಕೆ ತೀರಿಸಲು ಆಗುತ್ತಿಲ್ಲ ಎಂದು ಸರ್ಕಾರ ಒಮ್ಮೆಯು ಕಷ್ಟವನ್ನು ಆಲಿಸುವುದಿಲ್ಲ ಎಂದು ಮೃತ ರೈತ ತನ್ನ ಡೆತ್​ನೋಟ್​ನಲ್ಲಿ ಬರೆದುಕೊಂಡಿದ್ದಾರೆ.
A#farmerdied by suicide in Chhatarpur, In his suicide note to@narendramodihe asked his family to hand over his body to the govt “to sell every part of his body and pay the dues discom officials confiscated his atta chakki and his motorcycle over power dues#FarmersProtestpic.twitter.com/fwTB1UgcAw
— Anurag Dwary (@Anurag_Dwary)January 1, 2021

ಇದನ್ನೂ ಓದಿ:ಸೈಟು ಕೊಡಿಸುವುದಾಗಿ ನಂಬಿಸಿ ಸೆಲೆಬ್ರಿಟಿಗಳಿಗೆ ಪಂಗನಾಮ ಹಾಕಿದ ಖತರ್ನಾಕ್​ ವಂಚಕ!
16 ವರ್ಷ ಕೆಳಗಿನ ಮೂವರು ಹೆಣ್ಣುಮಕ್ಕಳು ಮತ್ತು ಓರ್ವ ಮಗನನ್ನು ಬಿಟ್ಟು ರೈತ ಮುನೇಂದ್ರ ರಜಪೂತ್​ ಅಗಲಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಆರು ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಯುವತಿ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ ಪಾಲಕರು!

ಅಕ್ರಮ ವಲಸಿಗರೆಂದು ತಿಳಿದು ಒಂದೂವರೆ ವರ್ಷ ಜೈಲಲ್ಲಿ ಕಳೆದ ದಂಪತಿಯ ಕಣ್ಣೀರಿನ ಕಥೆ…

ಸ್ನೇಹಿತನ ಕೊಂದು ಶವದ ಜತೆ ಊರೆಲ್ಲಾ ಸುತ್ತಾಡಿದ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
