ಮಹಾರಾಷ್ಟ್ರ:ರೈತರೊಬ್ಬರು ತಮ್ಮ ಹೊಲದಲ್ಲಿ ಮೂಲಂಗಿಯನ್ನು ಬೆಳೆದಿದ್ದಾರೆ. ಈ ರೈತ ಬೆಳೆದಿರುವ ಒಂದೊಂದು ಮೂಲಂಗಿಯೂ ಬರೋಬ್ಬರಿ 5 ಕೆಜಿ ತೂಗುತ್ತಿವೆ. ಇದು ಈಗ ಆ ಪ್ರಾಂತ್ಯದ ಸಾರ್ವಜನಿಕರನ್ನು ಅಚ್ಚರಿಗೀಡು ಮಾಡಿದೆ. ನೀರಿನ ಕೊರತೆಯಿಂದ ನಿತ್ಯ ಬರಗಾಲ ಎದುರಿಸುತ್ತಿದ್ದರೂ ಮಹಾರಾಷ್ಟ್ರದ ಬೀಡು ಜಿಲ್ಲೆಯ ರೈತರು ಆಧುನಿಕ  ಪದ್ಧತಿಯನ್ನು ಬಳಸಿಕೊಂಡು ಕೃಷಿಯಲ್ಲಿ ಕ್ರಾಂತಿ ಮಾಡುತ್ತಿದ್ದಾರೆ.
ಬೀಡ್ ಜಿಲ್ಲೆಯ ಕೂಲೆವಾಡಿ ಗ್ರಾಮದ ನಿವಾಸಿ ಜ್ಞಾನದೇವ ಶೇಷರಾವ್ ನೆಟ್ಗೆ ಈ ದಾಖಲೆ ತೂಕದ ಮೂಲಂಗಿ ಬೆಳೆದ ರೈತ. ಇವರು ಬೆಳೆದ  ಒಂದೊಂದು ಮೂಲಂಗಿಗಳು ತಲಾ 5 ಕೆ.ಜಿ ತೂಗುತ್ತಿವೆ.
ಇದನ್ನೂ ಓದಿ:VIDEO| 3 ಅಡಿಯಿರೋ ಬಾಡಿಬಿಲ್ಡರ್ 4 ಅಡಿ ಎತ್ತರದ ವಧುವನ್ನು ಮದುವೆಯಾದ!
ಸಾಮಾನ್ಯವಾಗಿ ಬೆಳೆಯುವ ಮೂಲಂಗಿಗಳು ಕಾಲು ಕೆಜಿಯಿಂದ ಗರಿಷ್ಠ ಎಂದರೆ 1 ಕೆ.ಜಿ.ಯವರೆಗೆ ತೂಗಬಹುದು. ಆದರೆ ಈ ರೈತ ಬೆಳೆದಿರುವ ಮೂಲಂಗಿ ತಲಾ 5 ಕೆ.ಜಿ ತೂಗುತ್ತಿವೆ. ಒಟ್ಟು ಮೂಲಂಗಿಗಳಲ್ಲಿ 15 ಮೂಲಂಗಿಗಳು 5 ಕೆ.ಜಿಗಿಂತ ಹೆಚ್ಚು ತೂಕವನ್ನು ಹೊಂದಿದ್ದು, ಸಾಮಾನ್ಯ ತೂಕದ ವ್ಯಾಪ್ತಿಯನ್ನು ಮೀರಿದೆ. ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಆಧುನಿಕ ಕೃಷಿ ತಂತ್ರಜ್ಞಾನ ಬಳಸಿಕೊಂಡು ಶೇಂಗಾದೊಂದಿಗೆ ಮೂಲಂಗಿ ನಾಟಿ ಮಾಡಿ ಪ್ರಯೋಗ ಮಾಡಿ ಈ ಸಾಧನೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಯುವಕನ ಹೊಟ್ಟೆಯಲ್ಲಿದ್ದವು 56 ಬ್ಲೇಡ್‌ ತುಂಡುಗಳು; ಮುಂದೆ ಕಾದಿತ್ತು ಅಚ್ಚರಿ!
ರೈತ ಜ್ಞಾನದೇವ್ ಮಾತನಾಡಿ, ಹಸುವಿನ ಸಗಣಿ, ಸಾವಯವ ಗೊಬ್ಬರಗಳ ಬಳಕೆ ಕಾರಣವೆಂದು ಹೇಳಿದ್ದಾರೆ. ಈ ಗೊಬ್ಬರಗಳ ಬಳಕೆ ಮೂಲಂಗಿಗಳು ಬೃಹತ್​ ಗಾತ್ರದಲ್ಲಿ ಬೆಳೆದಿರಬಹುದೆಂದು ಹೇಳಿದ್ದಾರೆ.
ದೈತ್ಯ ಮೂಲಂಗಿಯನ್ನು ಬೆಳೆಸಿ ಗಮನ ಸೆಳೆದಿದ್ದಾರೆ. ಅವರ ಈ ಸಾಧನೆ ಸ್ಥಳೀಯ ಕೃಷಿ ಸಮುದಾಯದಲ್ಲಿ ಉತ್ಸಾಹ ಹೆಚ್ಚಿಸಿದ್ದು, ಈ ವಿಶೇಷವನ್ನು ನೋಡಲು ರೈತರು ಇವರ ಕೃಷಿ ಭೂಮಿಗೆ ಭೇಟಿ ನೀಡುತ್ತಿದ್ದಾರೆ.
ತಾಯಿಯ ಹೊಟ್ಟೆಯಲ್ಲಿದ್ದ ಮಗುವಿನ ಹೃದಯ ಶಸ್ತ್ರಚಿಕಿತ್ಸೆ; ಏಮ್ಸ್‌ ವೈದ್ಯರಿಂದ ಯಶಸ್ವಿ ಚಿಕಿತ್ಸೆ
ತಾಯಿಯ ಹೊಟ್ಟೆಯಲ್ಲಿದ್ದ ಮಗುವಿನ ಹೃದಯ ಶಸ್ತ್ರಚಿಕಿತ್ಸೆ; ಏಮ್ಸ್‌ ವೈದ್ಯರಿಂದ ಯಶಸ್ವಿ ಚಿಕಿತ್ಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 8 =
Remember me
