ಲಖನೌ:ವಿದ್ಯುತ್​ ನಿಗಮದ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಲಿಗರ್​ನಲ್ಲಿ ನಡೆದಿದೆ. ಕರೆಂಟ್​ ಬಿಲ್​ನಿಂದಾಗಿಯೇ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬ ದೂರಿದೆ.
ಅತ್ರೌಲಿ ತಹಸಿಲ್‌ನ ಸುನೈರಾ ಗ್ರಾಮದ ನಿವಾಸಿ ರಾಮ್‌ಜಿ ಲಾಲ್ ಆತ್ಮಹತ್ಯೆ ಮಾಡಿಕೊಂಡ ರೈತ. ಈತನ ಮನೆಗೆ ವಿದ್ಯುತ್​ ನಿಗಮದ ಅಧಿಕಾರಿಗಳು ಬಂದಿದ್ದು, 1.5 ಲಕ್ಷ ರೂಪಾಯಿಯ ವಿದ್ಯುತ್​ ಬಿಲ್​ ಕೊಟ್ಟು, ಹಣ ಕಟ್ಟುವಂತೆ ಹೇಳಿ ಹೋಗಿದ್ದಾರೆ. ಆದರೆ ಬಿಲ್​ನಲ್ಲಿ ಏನೋ ಸಮಸ್ಯೆಯಾಗಿದೆ ಎಂದು ಅರಿತ ರಾಮ್​ಜಿ ಅದನ್ನು ಸರಿಪಡಿಸಲೆಂದು ಕಚೇರಿಗೂ ಹೋಗಿದ್ದನಂತೆ. ಆದರೆ ಯಾವುದೇ ಉಪಯೋಗವಾಗಿಲ್ಲ. ಅದಾದ ಮೇಲೆ ಶನಿವಾರದಂದು ಮತ್ತೆ ಬಂದ ಅಧಿಕಾರಿಗಳು ಊರವರ ಎದುರು ರಾಮ್​ಜೀ ಕೆನ್ನೆಗೆ ಹೊಡೆದು ಅವಮಾನಿಸಿ ಹೋಗಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. ಅದೇ ನೋವಿನಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
1,500 ರೂಪಾಯಿಯ ಮೊತ್ತವನ್ನು ಬಿಲ್​ನಲ್ಲಿ ತಪ್ಪಾಗಿ ತೋರಿಸಿದ್ದರಿಂದಾಗಿ ಈ ಘಟನೆ ನಡೆದಿದೆ ಎಂದು ಮೃತ ರೈತನ ಅಳಿಯ ರಾಮ್‌ಚರಣ್ ಮತ್ತು ಇತರ ಕುಟುಂಬ ಸದಸ್ಯರು ಬಾರ್ಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರೈತನ ಮೃತ ದೇಹವನ್ನು ವಿದ್ಯುತ್ ಇಲಾಖೆ ಕಚೇರಿಯ ಮುಂದಿಟ್ಟು ಹೋರಾಟ ನಡೆಸಲಾಗಿದೆ. ರೈತನ ಮನೆಗೆ ಹೋಗಿದ್ದ ಎಸ್‌ಡಿಒ ಮತ್ತು ಜೂನಿಯರ್ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಅಂತಿಮ ವಿಧಿಗಳನ್ನು ನಡೆಸಲಾಗುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾಗಿ ಹೇಳಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡ ಪೊಲೀಸರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿ, ಹೋರಾಟಗಾರರನ್ನು ವಾಪಾಸು ಕಳುಹಿಸಿರುವುದಾಗಿ ತಿಳಿಸಲಾಗಿದೆ. (ಪಿಟಿಐ)
ಫಾಸ್ಟ್ಯಾಗ್​ ಇದ್ದರೆ ಓಕೆ, ಇಲ್ಲ ಅಂದ್ರೆ ನಾಳೆಯಿಂದ ಡಬಲ್​ ಟೋಲ್​! ಸರ್ಕಾರದ ಹೊಸ ಆದೇಶ

ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
