ನವದೆಹಲಿ:ಎರಡನೇ ಅವಧಿಯ ಆಡಳಿತ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ವಿಕಾಸ ಯಾತ್ರೆಯ ಬಗ್ಗೆ ಹಲವು ಲೇಖನಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೃಷಿ, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಮುಂತಾದ ಪ್ರಮುಖ ರಂಗಗಳಲ್ಲಿ ಮಾಡಿರುವ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್​ಗಳಲ್ಲಿ ವಿವರಿಸಿದ್ದಾರೆ. ಈ ವಿವರಣೆಗಳು ಹಾಗೂ ನವ ಭಾರತದ ಕುರಿತ ಮುನ್ನೋಟ ಒದಗಿಸುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ.
ದೇಶಕ್ಕೆ ಅನ್ನ ನೀಡಲು ಅಹರ್ನಿಶಿ ಶ್ರಮಿಸುವ ರೈತರ ಬಗ್ಗೆ ಭಾರತಕ್ಕೆ ಅಪಾರ ಹೆಮ್ಮೆಯಿದೆ. ರೈತರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸುಧಾರಣೆಗಳ ಮೂಲಕ ಕೃಷಿ ಕ್ಷೇತ್ರವನ್ನು ಸಶಕ್ತಗೊಳಿಸುತ್ತಿದೆ. ಉತ್ತಮ ಮಾರುಕಟ್ಟೆ ಲಭ್ಯಗೊಳಿಸಲು ಹಾಗೂ ಮಧ್ಯವರ್ತಿಗಳನ್ನು ನಿವಾರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಅಗತ್ಯ ಸಾಮಗ್ರಿಗಳ ಕಾನೂನಿಗೆ ತಿದ್ದುಪಡಿ ತಂದಿದ್ದು ದಿಟ್ಟ ಹೆಜ್ಜೆ. ತರಕಾರಿ, ದವಸ ಧಾನ್ಯಗಳ ಮಾರಾಟ ನಿಯಂತ್ರಣ ತೆಗೆದು ಹಾಕುವ ಉದ್ದೇಶದ ಈ ಸುಧಾರಣೆ ಕೃಷಿಕರಿಗೆ ಉತ್ತಮ ಬೆಲೆ ಸಿಗಲು ನೆರವಾಗುತ್ತದೆ. ರಕ್ಷಣೆ, ಬಾಹ್ಯಾಕಾಶ, ಅಣು ಶಕ್ತಿ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಹೊಸ ಅವಕಾಶಗಳನ್ನು ತೆರೆಯಲಾಗುತ್ತಿದೆ. ರಕ್ಷಣೆ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದು ಕಾಲದ ಅಗತ್ಯವಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.
ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಿದ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ 6 ವರ್ಷದ ಅಧಿಕಾರಾವಧಿಯಲ್ಲಿ 6 ದಶಕಗಳ ಅನೇಕ ಐತಿಹಾಸಿಕ ತಪು್ಪಗಳನ್ನು ಸರಿಪಡಿಸಿದ್ದಲ್ಲದೇ ಸ್ವಾವಲಂಬಿ ಭಾರತದ ಅಭಿವೃದ್ಧಿ ಹಾದಿಗೆ ಅಡಿಪಾಯ ಹಾಕಿದ್ದಾರೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಮೋದಿ 2.0 ಸರ್ಕಾರ ಶನಿವಾರಕ್ಕೆ ಒಂದನೇ ವರ್ಷ ಪೂರೈಸಿರುವ ಹಿನ್ನೆಲೆ ಸರಣಿ ಟ್ವೀಟ್​ಗಳ ಮೂಲಕ ಪ್ರಧಾನಿಗೆ ಶುಭ ಕೋರಿರುವ ಅಮಿತ್ ಷಾ, ಮೋದಿ 6 ದಶಕಗಳ ಅಭಿವೃದ್ಧಿಯ ಕುಂಠಿತ ಅಂತರವನ್ನು ಕಡಿಮೆ ಮಾಡುವ ಮೂಲಕ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸುತ್ತಿದ್ದಾರೆ. ಕಳೆದ 6 ವರ್ಷಗಳ ಆಡಳಿತ ಬಡವರ ಕಲ್ಯಾಣಕ್ಕೆ ಅದ್ಭುತ ಉದಾಹರಣೆ. ಮೋದಿಯವರನ್ನು ಆಯ್ಕೆ ಮಾಡಿ ದೇಶದ ಪ್ರಗತಿಗೆ ಸಹಕರಿಸಿದ ಜನತೆ ಹಾಗೂ ಪಕ್ಷದ ಸಾಧನೆಗಳು ಮತ್ತು ಅದರ ಸಾರ್ವಜನಿಕ ಕಲ್ಯಾಣ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಮಾಹಿತಿ ನೀಡಿ ಶ್ರಮಿಸುತ್ತಿರುವ ಕೋಟ್ಯಂತರ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಎಂದಿದ್ದಾರೆ.
ಕಷ್ಟವಾದರೂ ದೊಡ್ಡ ನಿರ್ಧಾರ
ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ಕಷ್ಟದಾಯಕ ಹಾಗೂ ದೊಡ್ಡ ನಿರ್ಧಾರಗಳು ದೇಶದಲ್ಲಿ ಬದಲಾವಣೆ ತಂದಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ದೂರದೃಷ್ಟಿಯ ನೀತಿಗಳು, ಸಮರ್ಪಣೆ ಮನೋಭಾವದಿಂದ ದೇಶದ ಪ್ರಜಾಪ್ರಭುತ್ವಕ್ಕೆ ಅವರು ಹೊಸ ನಿರ್ದೇಶನ ನೀಡಿದ್ದಾರೆ. ಜನರ ಕಲ್ಯಾಣ ಮತ್ತು ದೇಶದ ಹಿತಾಸಕ್ತಿ ಸರ್ಕಾರದ ಪ್ರತಿಯೊಂದು ನಿರ್ಧಾರದಲ್ಲೂ ಪ್ರತಿಫಲಿಸುತ್ತದೆ ಎಂದು ನಡ್ಡಾ ತಿಳಿಸಿದ್ದಾರೆ.
ವಿಪಕ್ಷಗಳಿಂದ ವ್ಯಾಪಕ ಟೀಕೆ
ಮೋದಿ 2.0 ಸರ್ಕಾರದ ಮೊದಲ ವರ್ಷಾಚರಣೆಗೆ ಕರೊನಾ ಬಿಕ್ಕಟ್ಟಿನ ವಿಷಯವನ್ನಿಟ್ಟು ಕೊಂಡು ವಿರೋಧ ಪಕ್ಷಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿವೆ. ಮೋದಿ ಆಡಳಿತದ ಮೊದಲ ವರ್ಷ ಸಂಪೂರ್ಣ ನಿರಾಶದಾಯಕವಾಗಿದ್ದು, ಹಾನಿಕಾರಕ ನಿರ್ವಹಣೆ ತೋರಿಸಿದೆ. ಅಸಹಾಯಕ ಜನತೆ, ಹೃದಯಹೀನ ಸರ್ಕಾರ ಎಂದು ಕಾಂಗ್ರೆಸ್ ಕಿಡಿ ಕಾರಿದೆ. ಮೋದಿ 2 ಕೋಟಿ ಉದ್ಯೋಗಗಳ ಭರವಸೆ ನೀಡಿದ್ದರು. ಆದರೆ ಭಾರತ ಇಂದು 45 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ ಹೊಂದಿದೆ ಎಂದು ಕಾಂಗ್ರೆಸ್ ದೂರಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
