ನವದೆಹಲಿ:ಕಳೆದ ಎರಡು ತಿಂಗಳಿನಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ಗಣರಾಜ್ಯೋತ್ಸವ ದಿನದಂದು ಬೃಹತ್​ ರ್ಯಾಲಿ ನಡೆಸಲು ರೈತರು ಸಿದ್ಧವಾಗಿದ್ದಾರೆ. ಆದರೆ ಆ ದಿನದಂದು ಗ್ಯಾಂಗ್​ ಒಂದು ರೈತರ ಮೇಲೆ ದಾಳಿ ನಡೆಸಿ, ನಾಲ್ವರನ್ನು ಗುಂಡಿಕ್ಕಿ ಕೊಲ್ಲಲು ಯೋಜನೆ ಹಾಕಿಕೊಂಡಿದೆ ಎಂದು ರೈತ ಮುಖಂಡರು ದೂರಿದ್ದಾರೆ. ಸುಪಾರಿ ಪಡೆದಿರುವ ಗ್ಯಾಂಗ್​ ಅವನು ಎಂದು ಒಬ್ಬ ಮುಖ ಮುಚ್ಚಿಕೊಂಡಿರುವ ವ್ಯಕ್ತಿಯನ್ನು ಮಾಧ್ಯಮದ ಎದುರು ಪ್ರಸ್ತುತ ಪಡಿಸಿದ್ದಾರೆ. ಆದರೆ ಈ ಆರೋಪದಲ್ಲಿ ಇದೀಗ ಬಿಗ್​ ಟ್ವಿಸ್ಟ್​ ಎದುರಾಗಿದೆ. ಸಂಬಂಧಿಕರನ್ನು ನೋಡಲು ಬಂದ ನನ್ನನ್ನು ಥಳಿಸಿ, ಸುಳ್ಳು ಕಥೆ ಹೇಳಿಸಿದ್ದಾರೆ ಎಂದು ಆ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ.
ಇದನ್ನೂ ಓದಿ:ಹಿಂಬದಿಯಿಂದ ಬಂದವ ಪತ್ನಿ ತಲೆಗೆ ಮಚ್ಚು ಬೀಸಿ ತನ್ನ ಕುತ್ತಿಗೆಯನ್ನೂ ಸೀಳಿಕೊಂಡ! ನಡುರಸ್ತೆಯಲ್ಲೇ ದಂಪತಿ ನರಳಾಟ
ದೆಹಲಿಯಲ್ಲಿರುವ ನನ್ನ ಸಂಬಂಧಿಗೆ ಮಗುವಾಗಿತ್ತು. ಮಗುವನ್ನು ನೋಡಲೆಂದು ನಾನು ಸೋನಿಪತ್​ನಿಂದ ದೆಹಲಿಗೆ ಬಂದೆ. ಬಸ್ಸಿಳಿದು ಬರುತ್ತಿದ್ದಾಗ ಯಾರೋ ಕಿಡಿಗೇಡಿಗಳು ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದರು. ಅದೇ ಆರೋಪದಲ್ಲಿ ನನ್ನನ್ನೂ ಎಳೆದೊಯ್ದ ಕೆಲವರು ಯಾವುದೋ ಒಂದು ಕ್ಯಾಪ್​ನಲ್ಲಿ ನನ್ನ ಬಟ್ಟೆ ಬಿಚ್ಚಿ ಹೊಡೆದರು. ನೀನು ಅದಾದ ಮೇಲೆ ಉಲ್ಟಾ ನೇತಾಡಿಸಿ ಬೆಲ್ಟ್​ನಲ್ಲಿ ಹೊಡೆದರು. ಮಾರನೇ ದಿನ ನಾವು ಹೇಳಿದಂತೆ ಹೇಳು ಎಂದು ಹೇಳಿದರು. ಊಟ ಕೊಟ್ಟು, ನಂತರ ವಿಡಿಯೋ ಮಾಡಿಸಿದರು. ನನ್ನ ಜತೆ ಸಾಗರ್​ ಹೆಸರಿನ ಯುವಕನನ್ನೂ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಸಾಗರ್​ ಹಿಂದಿನ ದಿನವೇ ಅಲ್ಲಿಂದ ಓಡಿ ಹೋಗಿದ್ದ. ಮಾರನೇ ದಿನ ಬೆಳಗ್ಗೆ ಅವರು ಸಾಗರ್​ನನ್ನು ಕೊಲೆ ಮಾಡಿದ್ದಾಗಿ ಹೇಳಿದರು. ನೀನು ನಾವು ಹೇಳಿದಂತೆ ಕೇಳದಿದ್ದರೆ ನಿನ್ನನ್ನೂ ಕೊಲೆ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಅತ್ತೆ ಸೊಸೆ ಫೇಸ್​ಬುಕ್​ ವಾರ್​! ಅನ್​ಫ್ರೆಂಡ್​ ಮಾಡಿದ ಸೊಸೆಯನ್ನು ಮನೆಯೊಳಗೆ ಸೇರಿಸದ ಅತ್ತೆ ಮಾವ
ಅದಾದ ಮೇಲೆ ನನ್ನನ್ನು ಪ್ರೆಸ್​ ಮೀಟ್​ನಲ್ಲಿ ಕೂರಿಸಲಾಯಿತು. 10 ಜನರ ಗ್ಯಾಂಗ್​ ಎಂದು ಹೇಳು, ಕೊಲೆ ಮಾಡಲು ಸಂಚು ಹಾಕಿದ್ದೆವೆಂದು ಹೇಳು ಎಂದು ಕಥೆ ಹೇಳಲಾಯಿತು ಎಂದು ಆತ ಹೇಳಿಕೊಂಡಿದ್ದಾನೆ. ಒತ್ತಾಯ ಪೂರ್ವಕವಾಗಿ ನನ್ನಿಂದ ಸುಳ್ಳು ಕಥೆ ಹೇಳಿಸಲಾಯಿತು ಎಂದು ಆತ ತಿಳಿಸಿದ್ದಾನೆ. ಹರಿಯಾಣ ಪೊಲೀಸರ ವಶದಲ್ಲಿರುವ ಯುವಕ ಪೊಲೀಸರ ಮುಂದೆ ಈ ಎಲ್ಲ ವಿಚಾರಗಳನ್ನು ಹೇಳಿಕೊಂಡಿದ್ದಾನೆ. (ಏಜೆನ್ಸೀಸ್​)
ಆನೆಗೇ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಕೊನೆಯುಸಿರೆಳೆದ ಆನೆ

ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × four =
Remember me
