ಅಹಮದಾಬಾದ್​:ರೈತನೊಬ್ಬ ಸಿಂಹದೊಂದಿಗೆ ಹೋರಾಡಿ ತನ್ನ ಹಸುವನ್ನು ಉಳಿಸಿಕೊಂಡಿರುವ ಘಟನೆ ಗುಜರಾತಿನ ಸೋಮನಾಥ ಜಿಲ್ಲೆಯಲ್ಲಿರುವ ಗಿರ್​ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ರೈತನ ಸಾಹಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಸಿಂಹದ ದಾಳಿಗೆ ಒಳಗಾಗಿರುವ ಹಸು ತಪ್ಪಿಸಿಕೊಳ್ಳಲಾಗದೆ ಪರದಾಡುತ್ತಿರುತ್ತದೆ. ಈ ವೇಳೆ ಇದನ್ನು ನೋಡಿದ ಮಾಲೀಕ ಮೊದಲಿಗೆ ಅದನ್ನು ಹೆದರಿಸಿ ಓಡಿಸಲು ಯತ್ನಿಸುತ್ತಾನೆ. ಆದರೆ, ಇದಕ್ಕೆ ಜಗ್ಗದ ಸಿಂಹ ಹಸುವನ್ನು ಮತ್ತಷ್ಟು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ.
ગીર સોમનાથ જિલ્લાના આલીદર ગામે સિંહણ દ્વારા ગાય ઉપર હુમલો કરેલ ત્યારે ખેડૂતે#Creditકિરીટસિંહ ચૌહાણ પોતાની ગાયને એક ખમીરવંતો પ્રયાસ કરેલ અને સફળતા મળેલ.ખુબ ખુબ સલામ#lion#animalattack#cow#lioness#kingofthejungle#hunt#wildlife#india#nationalgeographic#discoverypic.twitter.com/lDYGub9bfZ
ಇದನ್ನೂ ಓದಿ:ಸಂಸತ್​ ಮುಂಗಾರು ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ ಸಾಧ್ಯತೆ!
ಹೇಗಾದರೂ ಮಾಡಿ ತನ್ನ ಹಸುವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೈತ ರಸ್ತೆ ಬಿದ್ದಿದ್ದ ಇಟ್ಟಿಗೆಗಳನ್ನು ಸಿಂಹದತ್ತ ಎಸೆಯಲು ಶುರು ಮಾಡುತ್ತಾನೆ. ಕಡೆಗೆ ತನ್ನ ಹಸುವನ್ನು ಸಿಂಹದ ದಾಳಿಯಿಂದ ಪಾರು ಮಾಡುವಲ್ಲಿ ರೈತ ಯಶಸ್ವಿಯಾಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಡಿಯೋವನ್ನು ಗಿರ್​ ಅಭಯಾರಣ್ಯದಲ್ಲಿ ಸಂಚರಿಸುತ್ತಿದ್ದ ವೇಳೆ ವ್ಯಕ್ತಿ ಒಬ್ಬರು ಸೆರೆ ಹಿಡಿದಿದ್ದು, ಇದನ್ನು ಬಿಜೆಪಿಯ ಕೌನ್ಸಿಲರ್ ವಿವೇಕ್​ ಕೊಡಾಟಿಯಾ ಟ್ವೀಟ್​ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 14 =
Remember me
