ಜಪಾನ್‌:ಮಾವು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಣ್ಣುಗಳ ರಾಜ ಎಂದೇ ಮಾವು ಪ್ರಸಿದ್ಧಿ ಪಡೆದಿದೆ. ತಿನ್ನಲು ರುಚಿಕರವಷ್ಟೇ ಅಲ್ಲದೇ ಸುಗಂಧವನ್ನು ಹೊಂದಿದೆ. ಬೇಸಿಗೆ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳದ್ದೇ ಕಮಾಲು. ಹೀಗಿರುವಾಗ ಇಲ್ಲೊಂದು ಮಾವಿನಹಣ್ಣು ದುಬಾರಿ ಬೆಲೆಗೆ ಮಾರಾಟವಾಗಿದೆ.
ಜಪಾನಿನ ರೈತರೊಬ್ಬರು ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣುವೊಂದನ್ನು ಸುಮಾರು 19,000 ರೂ. ನಂತೆ ಮಾರಾಟ ಮಾಡುತ್ತಿದ್ದಾರೆ. ಸರಿಸುಮಾರು 5,000 ಮಾವಿನಹಣ್ಣುಗಳನ್ನು ಈ ರೈತ ಬೆಳೆಯುತ್ತಾರೆ. ಈ ಮಾವು ಬೆಳೆಯಲು ಯಾವುದೇ ಕೀಟನಾಶಕ ಬಳಸುವುದಿಲ್ಲ.
ಮಾವಿನಹಣ್ಣು ಬೆಳೆಯಲು ಸ್ಫೂರ್ತಿ:62 ವರ್ಷ ವಯಸ್ಸಿನ ಹಿರೊಯಿಕಿ ನಗಾಕುವಾ ಮೂಲತಃ ತೈಲ ವ್ಯಾಪಾರಿಯಾಗಿದ್ದವರು. ಒಂದು ದಿನ ಅವರಿಗೆ ತಾನು ನಿಸರ್ಗದ ಮೂಲದಿಂದ ನೈಸರ್ಗಿಕವಾಗಿ ಏನನ್ನಾದರೂ ಉತ್ಪಾದಿಸಬೇಕು ಎಂಬ ಬಯಕೆ ಮೂಡುತ್ತದೆ. ಅಗ ಅವರು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿದ್ದ ತೈಲ ವ್ಯಾಪಾರವನ್ನು ತೊರೆದು ಮಾವು ಬೆಳೆಯಲು ಮುಂದಾಗುತ್ತಾರೆ. ಅವರಿಗೆ ಮತ್ತೊಬ್ಬ ರೈತ ಮಿಯಾಝಕಿ ಮಾರ್ಗದರ್ಶನ ನೀಡುತ್ತಾರೆ, ಅವರ ಮಾರ್ಗದರ್ಶನದಂತೆ ಹಿರೊಯಿಕಿ ನಗಾರುವಾ ಚಳಿಗಾಲದಲ್ಲಿ ಮಾವು ಬೆಳೆಯುವ ಸಾಹಸಕ್ಕೆ ಮುಂದಾಗುತ್ತಾರೆ.
ಇದನ್ನೂ ಓದಿ:ಸೇಬು ಆಮದು ನಿಷೇಧಿಸಿದ ಕೇಂದ್ರ ಸರ್ಕಾರ; ಕಾರಣವೇನು ಗೊತ್ತಾ..?
ಮಾವಿನ ಕೃಷಿ:ಈ ಮಾವಿನ ತೋಟವಿರುವ ಜಪಾನಿನ ಹೊರಾಯಿಡೊದಲ್ಲಿ ಚಳಿಗಾಲದಲ್ಲಿ ಇಬ್ಬನಿ ಪ್ರಮಾಣ ತೀವ್ರವಾಗಿರುತ್ತದೆ. ಡಿಸೆಂಬರ್ ತಿಂಗಳಲ್ಲಿ ಮನೆಯ ಹೊರಗಿನ ವಾತಾವರಣ -8 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ಇರುತ್ತದೆ. ಆದರೆ, ನಗಾರುವ ನಿರ್ಮಾಣ ಮಾಡಿರುವ ಹಸಿರು ಮನೆಯಲ್ಲಿನ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ತೋರಿಸುತ್ತಿರುತ್ತದೆ.
ನೈಸರ್ಗಿಕ ಸಂಪನ್ಮೂಲವಾದ ಮಂಜು ಗಡ್ಡೆ ಹಾಗೂ ಬಿಸಿ ನೀರಿನ ಬುಗ್ಗೆಗಳು, ಚಳಿಗಾಲದಲ್ಲಿ ದೊರೆಯುವ ಮಂಜು ಗಡ್ಡೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ನಗಾರುವಾ, ಬೇಸಿಗೆಯಲ್ಲಿ ತಮ್ಮ ಹಸಿರು ಮನೆಯನ್ನು ತಂಪಾಗಿಡಲು ಬಳಸಿಕೊಳ್ಳುತ್ತಾರೆ. ಇದರಿಂದ ಮಾವಿನ ಹಣ್ಣುಗಳು ನಿಧಾನಕ್ಕೆ ಮಾಗುತ್ತವೆ. ಹಾಗೆಯೇ ಚಳಿಗಾಲದಲ್ಲಿ ತಮ್ಮ ಹಸಿರು ಮನೆಯನ್ನು ಬೆಚ್ಚಗಿಡಲು ನೈಸರ್ಗಿಕ ಬಿಸಿ ನೀರಿನ ಬುಗ್ಗೆಗಳನ್ನು ಬಳಸಿಕೊಂಡು ಒಂದು ಋತುವಿಗೆ ಸುಮಾರು 5,000 ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ.
ಚಿಂತಾಮಣಿಯ ಬಿಜೆಪಿ ಅಭ್ಯರ್ಥಿ ಪರ ಮತದಾರರಿಗೆ ಹಂಚುತಿದ್ದ 12 ಲಕ್ಷ ರೂ. ಜಪ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 13 =
Remember me
