ಜೈಪುರ:ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮತದಾರರನ್ನು ತಮ್ಮತ್ತ ಸೆಳೆಯಲು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್​ ತೊಡಗಿವೆ.
ರಾಜ್ಯ ವಿಧಾನಸಭೆ ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿಗೆ ದೊಡ್ಡ ಎಡವಟ್ಟಾಗಿದ್ದು, ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹೂಡಲು ರೈತರೊಬ್ಬರು ಸಜ್ಜಾಗಿದ್ದಾರೆ.
ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಕಳೆದ ಕೆಲ ತಿಂಗಳುಗಳ ಹಿಂದೆ ನಹಿ ಸಹೇಗಾ ರಾಜಸ್ಥಾನ್ ಎಂಬ ಅಭಿಯಾನವನ್ನು ಆರಂಭಿಸಿದ್ದ ಬಿಜೆಪಿ ತನ್ನ ಪೋಸ್ಟರ್​ಗಳಲ್ಲಿ ರೈತರೊಬ್ಬರ ಫೋಟೋವನ್ನು ಬಳಸಿತ್ತು. ಬಿಜೆಪಿ ತನ್ನ ಅಭಿಯಾನದ ಪ್ರಚಾರಕ್ಕಾಗಿ ಬಳಸಿರುವ ಫೋಟೋ ತಮ್ಮದು ಎಂದು ರೈತರೊಬ್ಬರು ಹೇಳಿಕೊಂಡಿದ್ದು, ಸಾರ್ವಜನಿಕವಾಗಿ ಬಿಜೆಪಿಯವರು ತಮ್ಮ ಮರ್ಯಾದೆಯನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
Rajasthan Chief Minister Ashok Gehlot Ji met farmer Madhuram who is facing embarrassment and humiliation in his village due to the fake posters put up by BJP with his image.He requested the CM to take action and asked to remove all posters by BJP.pic.twitter.com/e3rTZ2jono
ಇದನ್ನೂ ಓದಿ:ಹಮಾಸ್ ಉಗ್ರರ ದಾಳಿ; 900ಕ್ಕೆ ಏರಿದ ಸಾವಿನ ಸಂಖ್ಯೆ
ಜೈಸಲ್ಮೇರ್​ ಮೂಲದ ರೈತ ಮಧುರಾಮ್​ ಜೈಪಾಲ್ (70), ಈ ಕುರಿತು ಮಾತನಾಡಿದ್ದು, ತಮ್ಮ ಅನುಮತಿ ಇಲ್ಲದೇ ಬಿಜೆಪಿಯವರು ಫೋಟೋವನ್ನು ಬಳಸಿ ಇದನ್ನು ನೋಡಿದ ನನ್ನ ಸಂಬಂಧಿಕರು ಹಾಗೂ ನೆರೆ ಹೊರೆಯವರು ಏಷ್ಟು ಸಾಲ ಮಾಡಿದ್ದೀರಾ, ನಿಮ್ಮ ಜಮೀನನ್ನು ಮಾರಾಟಕ್ಕೆ ಇಟ್ಟಿದ್ದೀರಾ ಎಂದು ಕೇಳಿದ್ದರು. ಪ್ರಶ್ನೆ ಕೇಳಿದವರಿಗೆಲ್ಲಾ ಉತ್ತರ ನೀಡಿ ನನಗೆ ಸಾಕಾಗಿ ಹೋಯಿತು. ಬಿಜೆಪಿಯವರು ಸುಖಾಸುಮ್ಮನೆ ನನ್ನ ಫೋಟೋವನ್ನು ಬಳಸುವ ಮೂಲಕ ನನ್ನನ್ನು ಸಾಲಗಾರನನ್ನಾಗಿ ಬಿಂಬಿಸಿದ್ದಾರೆ.
ನನ್ನ ಹೆಸರಿನಲ್ಲಿ ಜಮೀನು ಇದ್ದು, ನಾನು ಇದುರೆವಗೂ ಖಾಸಗಿ ಹಾಗೂ ಬ್ಯಾಂಕಿನವರ ಬಳಿ ಸಾಲ ಪಡೆದು ವ್ಯವಸಾಯ ಮಾಡಿಲ್ಲ. ಬಿಜೆಪಿಯವರು ನಾನು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದು, ಬ್ಯಾಂಕಿನವರು ನನ್ನ ಜಮೀನನ್ನು ಹರಾಜು ಹಾಕಿದ್ದಾರೆ ಎಂದು ಊರಿನ ತುಂಬೆಲ್ಲಾ ಪೋಸ್ಟರ್​ಗಳನ್ನು ಅಂಟಿಸಿಕೊಂಡು ಬಂದಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದ್ದು, ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ರೈತ ಮಧುರಾಮ್​ ಜೈಪಾಲ್ ಹೇಳಿದ್ದಾರೆ.
ಇತ್ತ ರೈತ ರೈತ ಮಧುರಾಮ್​ ಜೈಪಾಲ್ ಅವರ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಅವರನ್ನು ಭೇಟಿ ಮಾಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್ ಅವರಿಗೆ ಸಾಂತ್ವಾನ ಹೇಳಿದ್ದಾರೆ. ಬಳಿಕ ಮಾತನಾಡಿದ ಗೆಹ್ಲೋಟ್​ ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ನಿಸ್ಸೀಮರು ಎಂದು ಈ ವಿಚಾರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದು ಹರಿಹಾಯ್ದಿದ್ದಾರೆ. ‘
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:14 + 4 =
Remember me
