ಕರ್ನಾಲ್​​:ಹರಿಯಾಣದ ಕರ್ನಾಲ್​ನಲ್ಲಿ ಕಳೆದ ತಿಂಗಳು ಪ್ರತಿಭಟನಾನಿರತ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ಬಗ್ಗೆ ಹರಿಯಾಣ ಸರ್ಕಾರ ಉನ್ನತ ತನಿಖೆ ಆದೇಶಿಸಿದೆ. ‘ಬ್ಯಾರಿಕೇಡ್​ ದಾಟುವ ರೈತರ ತಲೆ ಒಡೆಯಿರಿ’ ಎಂದು ಆದೇಶಿಸಿ, ವಿವಾದದ ಕೇಂದ್ರಬಿಂದುವಾಗಿದ್ದ ಐಎಎಸ್​ ಅಧಿಕಾರಿ ಆಯುಷ್​ ಸಿನ್ಹಾರನ್ನು ಸರ್ಕಾರ ರಜೆಯ ಮೇಲೆ ಕಳುಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಗುಂಪು ಕರ್ನಾಲ್​ ಜಿಲ್ಲೆಯ ಹೊರಗೆ ನಡೆಸುತ್ತಿದ್ದ ತನ್ನ ಪ್ರತಿಭಟನೆಯನ್ನು ಹಿಂಪಡೆದಿದೆ ಎನ್ನಲಾಗಿದೆ.
ಆಗಸ್ಟ್​ 28 ರಂದು ಕರ್ನಾಲ್​ನ ಘರೌಂದಾ ಟೋಲ್​ ಪ್ಲಾಜಾದ ಬಳಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠಿ ಚಾರ್ಜ್​ ನಡೆದಿತ್ತು. ಈ ಸಂದರ್ಭದಲ್ಲಿ 10 ರೈತರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವ ರೈತ ಮೃತಪಟ್ಟಿದ್ದ ಎಂದು ರೈತ ಮುಖಂಡರು ಆರೋಪಿಸಿದ್ದರು. ಇಂದು ಕರ್ನಾಲ್​​ನಲ್ಲಿ ರೈತ ಮುಖಂಡ ಗುರ್​ನಾಮ್​ ಸಿಂಗ್​ ಚಾದುನಿ ಜೊತೆ, ಹರಿಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಂದ್ರ ಸಿಂಗ್ ಜಂಟಿ ಪತ್ರಿಕಾ ಗೋಷ್ಠಿ ನಡೆಸಿದರು.
ಇದನ್ನೂ ಓದಿ:ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕನ ಕೊಲೆ
ಆಗಸ್ಟ್​ 28 ರಂದು ನಡೆದ ಪೊಲೀಸರ ಲಾಠಿ ಚಾರ್ಜ್​ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿರುವ ತನಿಖೆಯ ಸಮಯದಲ್ಲಿ, ಎಸ್​ಡಿಎಂ ಆಯುಷ್​ ಸಿನ್ಹಗೆ ಕಡ್ಡಾಯ ರಜೆಯ ಮೇಲೆ ತೆರಳಲು ಸೂಚಿಸಲಾಗಿದೆ ಎಂದು ದೇವೇಂದ್ರ ಸಿಂಗ್​ ಹೇಳಿದರು. ಲಾಠಿ ಚಾರ್ಜ್​ನಲ್ಲಿ ಮೃತಪಟ್ಟಿದ್ದ ಎನ್ನಲಾದ ಸುಶೀಲ್​ ಕಾಜಲ್​ ಎಂಬ ರೈತನ ಇಬ್ಬರು ಕುಟುಂಬದ ಸದಸ್ಯರಿಗೆ ನೌಕರಿಯನ್ನು ನೀಡಲಾಗುವುದು ಎಂದರು.
ತದನಂತರ ರೈತ ಮುಖಂಡ ಚಾದುನಿ ಮಾತನಾಡಿ, ಕರ್ನಾಲ್​ ಜಿಲ್ಲಾ ಕೇಂದ್ರದ ಹೊರಗೆ ನಡೆಸುತ್ತಿರುವ ತಮ್ಮ ಧರಣಿ ಪ್ರತಿಭಟನೆಗೆ ಕೊನೆ ಹಾಡುವುದಾಗಿ ಹೇಳಿದರು. “ನಾವು ಎಫ್​ಐಆರ್​ ದಾಖಲಿಸಲು ಕೇಳಿದ್ದೆವು. ಆದರೀಗ ನ್ಯಾಯಾಧೀಶರ ತನಿಖೆ ಆದೇಶಿಸಲಾಗಿದೆ. ಇದು ಇನ್ನೂ ಉತ್ತಮ” ಎಂದರು.(ಏಜೆನ್ಸೀಸ್)
ಕರೊನಾ ಸಾವಿನ ನಿಜವಾದ ಲೆಕ್ಕ ಕೊಡಿ: ರಾಮಲಿಂಗಾರೆಡ್ಡಿ ಆಗ್ರಹ

ಭಾರತದಲ್ಲಿ ಕರೊನಾ ಚೇತರಿಕೆ ದರ ಎಷ್ಟು ಗೊತ್ತೆ?

ಕಾಮುಕನಿಂದ ಕ್ರೂರ ಹಿಂಸೆ ಅನುಭವಿಸಿದ ಮುಂಬೈ ಮಹಿಳೆ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 8 =
Remember me
