ನವದೆಹಲಿ:ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೆ, ಅವರಿಗೆ ಬೆಂಬಲ ನೀಡುತ್ತೇವೆ ಎನ್ನುತ್ತ ಸೇರಿಕೊಂಡವರೆಲ್ಲ ತಮ್ಮ ತಮ್ಮ ಬೇಳೆ ಬೇಯಿಸೋ ಪ್ರಯತ್ನ ನಡೆಸಿದ್ದಾರೆ.
ಇದರ ಫಲವೋ ಏನೋ ಎಂಬಂತೆ ತ್ರಿಕ್ರಿ ಬಾರ್ಡರ್​ನಲ್ಲಿ ಪ್ರತಿಭಟನಾ ನಿರತ ರೈತ ಸಂಘಟನೆಯ ವೇದಿಕೆ ಮೇಲೆ ನಕ್ಸಲ್ ಹಿತೈಷಿ, ದೇಶ ವಿರೋಧಿ ಘೋಷಣೆ ಕೂಗಿದವರ ಬಿಡುಗಡೆಗೆ ಆಗ್ರಹಿಸಿದ ಬ್ಯಾಕ್​ ಡ್ರಾಪ್ ಕಾಣಿಸಿಕೊಂಡಿದೆ! ಅಷ್ಟೇ ಅಲ್ಲ, ಒಂದು ಗುಂಪು ಈ ನಕ್ಸಲ್ ಹಿತೈಷಿ, ದೇಶ ವಿರೋಧಿ ಘೋಷಣೆ ಕೂಗಿದವರ ಫೊಟೋಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂತು.
ಇದನ್ನೂ ಓದಿ:ಯೂನಿಯನ್ ಲೀಡರ್​ಗಳ ಮೇಲೆ ನಂಬಿಕೆ ಇಡಿ, ಮುಷ್ಕರದಿಂದ ಹಿಂದೆ ಸರಿಯಿರಿ: ಡಿಸಿಎಂ ಸವದಿ
ಎಲ್ಗಾರ್ ಪರಿಷದ್ ಕೇಸ್​ ಮತ್ತು ದೆಹಲಿ ಗಲಭೆ ಕೇಸ್​ನಲ್ಲಿ ಬಂಧಿತರಾದವರ ಫೋಟೋಗಳವು. ಯುಎಪಿಎ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಬಂಧಿತರಾದವರ ಬಿಡುಗಡೆ ಆಗ್ರಹಿಸಿದ ಧ್ವನಿ ತ್ರಿಕ್ರಿ ಬಾರ್ಡರ್​ನಲ್ಲಿ ನಿನ್ನೆ ಅನುರಣಿಸಿತ್ತು. ವರವರ ರಾವ್​, ಉಮರ್​ ಖಾಲಿದ್, ಶಾರ್ಜೀಲ್​ ಇಮಾಮ್ ಮತ್ತು ಇತರರ ಬಿಡುಗಡೆಗೆ ಅಲ್ಲಿದ್ದವರು ಆಗ್ರಹಿಸಿ ಘೋಷಣೆ ಕೂಗಿದ್ದು ಗಮನಸೆಳೆದಿತ್ತು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಸಾರಿಗೆ​ ನೌಕರರ ಮುಷ್ಕರ – ಎಲ್ಲೆಲ್ಲಿ ಏನೇನು ಸ್ಥಿತಿಗತಿ..?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
