ನವದೆಹಲಿ:ಕೇಂದ್ರದ ನೂತನ ಕೃಷಿ ನೀತಿ ವಿರೋಧಿಸಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಭಾರತ್ ಬಂದ್ ಜನಜೀವನದ ಮೇಲೆ ಬಹುತೇಕ ಯಾವುದೇ ಪರಿಣಾಮ ಬೀರದಿದ್ದರೂ ಜನಸಾಮಾನ್ಯರ ಜತೆಗೆ ವಿವಿಧ ಸಂಘಟನೆಗಳ ನೈತಿಕ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಯಿತು. ದೆಹಲಿ, ಹರಿಯಾಣ, ಪಂಜಾಬ್​ಗಳಲ್ಲಿ ಬಂದ್ ಬಿಸಿ ಜೋರಾಗಿತ್ತು. ಇನ್ನೂ ಹಲವು ರಾಜ್ಯಗಳಲ್ಲಿ ಹೆದ್ದಾರಿ ಬಂದ್, ರಸ್ತೆ ತಡೆ ಮೂಲಕ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಬಹುತೇಕ ಸಹಜ ವಾಗಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಯಿತಾದರೂ ಸಾರಿಗೆ, ಆಸ್ಪತ್ರೆ, ದಿನಸಿ ಅಂಗಡಿ, ಮಾಲ್ ಸೇರಿದಂತೆ ಎಲ್ಲ ಚಟುವಟಿಕೆಗಳು ಎಂದಿನಂತೆ ನಡೆದವು. ಅನ್ನ ನೀಡುವ ರೈತರ ಶಾಂತಿಯುತ ಹೋರಾಟಕ್ಕೆ ನಮ್ಮ ಬೆಂಬಲ ಮುಂದುವರಿಯುತ್ತದೆ ಎನ್ನುವ ಮೂಲಕ ಬಂದ್ ಮಾಡಲು ಸಿದ್ಧರಿಲ್ಲ ಎಂಬ ಸಂದೇಶವನ್ನು ವ್ಯಾಪಾರಿಗಳು, ವರ್ತಕರು ನೀಡಿದರು. ಚಿತ್ರದುರ್ಗ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಹಾವೇರಿ, ವಿಜಯಪುರ, ಬೆಳಗಾವಿ, ದಾವಣಗೆರೆ, ಚಾಮರಾಜನಗರ, ಮೈಸೂರಿನ ಕೆಲವೆಡೆ ವಿವಿಧ ಸಂಘಟನೆ ಗಳ ಬೆಂಬಲದೊಂದಿಗೆ ರೈತರು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಹಲವೆಡೆ ಪ್ರತಿಭಟನೆ ಹಾಗೂ ರಸ್ತೆತಡೆ ನಡೆಸಿದ್ದರಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ದೇಶದೆಲ್ಲೆಡೆ ಪ್ರತಿಭಟನೆ:ರಾಜಧಾನಿ ದೆಹಲಿ, ಹರಿಯಾಣ, ಪಂಜಾಬ್ ಹೊರತುಪಡಿಸಿ ಉಳಿದೆಲ್ಲೆಡೆ ಭಾರತ್ ಬಂದ್ ಪ್ರತಿಭಟನೆ, ಧರಣಿಗಷ್ಟೇ ಸೀಮಿತವಾಯಿತು. ಉತ್ತರ ಪ್ರದೇಶದಲ್ಲಿ ಸಾವಿರಾರು ರೈತರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರಿಂದಾಗಿ ಇತರ ರಾಜ್ಯಗಳ ಸಂಪರ್ಕ ಸ್ಥಗಿತವಾಗಿತ್ತು. ದೆಹಲಿಯಲ್ಲಿ ಕೊರೆಯುವ ಚಳಿಯಲ್ಲೂ ಬೆಳಗ್ಗೆಯಿಂದಲೇ ಪ್ರತಿಭಟನೆ ತೀವ್ರಗೊಳಿಸಿದ್ದರು. ರಸ್ತೆ ತಡೆ ನಡೆಸಿದ್ದರಿಂದಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅಂಗಡಿ ಮುಂಗಟ್ಟುಗಳು ಬಹುತೇಕ ಬಾಗಿಲು ಮುಚ್ಚಿದ್ದವು. ವಾಣಿಜ್ಯ ವಹಿವಾಟು, ಎಪಿಎಂಸಿ, ಮಾರುಕಟ್ಟೆಗಳು ಬಂದ್ ಆಗಿದ್ದವು.

ಹೊಸ ಕೃಷಿ ಕಾಯ್ದೆಗಳೇ ರದ್ದಾಗಬೇಕೆಂದು ಪಟ್ಟು ಹಿಡಿದಿರುವ ರೈತರು ಬುಧವಾರ ನಡೆಯಲಿರುವ ಆರನೇ ಸುತ್ತಿನ ಸಭೆಯಲ್ಲಿ ಕೇಂದ್ರದ ಸಂಧಾನಕ್ಕೆ ಮಣಿಯುವರೇ ಎಂಬ ಕುತೂಹಲ ಇಮ್ಮಡಿಗೊಂಡಿದೆ. ಭಾರತ್ ಬಂದ್ ಬೆನ್ನಲ್ಲೇ ಮಂಗಳವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ರೈತ ಮುಖಂಡರು ಮಾತುಕತೆ ನಡೆಸಿದರು. ಷಾ ಮನವಿ ಹಿನ್ನೆಲೆಯಲ್ಲಿ 13ಕ್ಕೂ ಹೆಚ್ಚು ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ‘ಬೇಡಿಕೆಗಳನ್ನು ಸಡಿಲಿಸುವ ಪ್ರಶ್ನೆಯೇ ಇಲ್ಲ, ಹೌದು ಅಥವಾ ಇಲ್ಲ ಎರಡು ಉತ್ತರದ ಮೇಲಷ್ಟೇ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ಸಭೆಗೆ ಮುನ್ನ ರೈತರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 6 =
Remember me
