ನವದೆಹಲಿ:ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರ ಹೋರಾಟ ಆರಂಭವಾಗಿ ನಾಳೆಗೆ ನೂರು ದಿನಗಳು ಪೂರೈಸುತ್ತವೆ. ಈ ಸಂದರ್ಭದಲ್ಲಿ ನವದೆಹಲಿಯ ಹೊರಗಿನ ಪ್ರಮುಖ ಎಕ್ಸ್​ಪ್ರೆಸ್​ವೇನಲ್ಲಿ ರಸ್ತೆ ತಡೆ ನಡೆಸುವ ನಿರ್ಧಾರವನ್ನು ರೈತನಾಯಕರು ತೆಗೆದುಕೊಂಡಿದ್ದಾರೆ.
ಸರ್ಕಾರದ ಗಮನ ಸೆಳೆಯಲು ಕುಂಡ್ಲಿ-ಮನೇಸರ್-ಪಲವಾಲ್(ಕೆಎಂಪಿ) ಎಕ್ಸ್​ಪ್ರೆಸ್​ವೇ ಎಂದೂ ಕರೆಯಲಾಗುವ ಸಿಕ್ಸ್​-ಲೇನ್ ವೆಸ್ಟರ್ನ್ ಪೆರಿಫೆರಲ್ ಎಕ್ಸ್​ಪ್ರೆಸ್​ವೇನಲ್ಲಿ ಪ್ರತಿಭಟನಾಕಾರರು ಶನಿವಾರ (ಮಾರ್ಚ್ 6) ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ರಸ್ತೆ ತಡೆ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್​ಕೆಎಂ) ಘೋಷಿಸಿದೆ.
ಇದನ್ನೂ ಓದಿ:ಸಾಲಮನ್ನಾದಿಂದ ರೈತರ ಅಭಿವೃದ್ಧಿ ಅಸಾಧ್ಯ
ದೆಹಲಿ ಗಡಿಯಲ್ಲಿ ರೈತರ ಧರಣಿ ಪ್ರತಿಭಟನೆ ಆರಂಭವಾಗಿದ್ದು, ಕಳೆದ ವರ್ಷ ನವೆಂಬರ್ 26 ರಂದು. ಈ ಪ್ರತಿಭಟನೆಯ ನೇತೃತ್ವವನ್ನು ಎಸ್​ಕೆಎಂ ಮತ್ತು ಭಾರತೀಯ ಕಿಸಾನ್ ಯೂನಿಯನ್ ವಹಿಸಿಕೊಂಡಿದೆ. ಮಾರ್ಚ್ 6 ಕ್ಕೆ ಈ ಹೋರಾಟಕ್ಕೆ ನೂರು ದಿನಗಳು ಪೂರೈಸಲಿವೆ.
“ಈ ನೂರು ದಿನಗಳ ನಂತರ, ನಮ್ಮ ಚಳುವಳಿಯು ಸರ್ಕಾರದ ಮೇಲೆ ನೈತಿಕ ಒತ್ತಡ ಹಾಕಲಿದೆ. ಸರ್ಕಾರ ನಮ್ಮೊಂದಿಗೆ ಮತ್ತೆ ಮಾತುಕತೆ ನಡೆಸಿ ನಮ್ಮ ಬೇಡಿಕೆಗಳಿಗೆ ಒಪ್ಪುತ್ತದೆ ಎಂದು ನಾವು ನಂಬಿದ್ದೇವೆ” ಎಂದು ಎಸ್​ಕೆಎಂನ ವಕ್ತಾರ ದರ್ಶನ್ ಪಾಲ್ ಹೇಳಿದ್ದಾರೆ. ಜೊತೆಗೆ, “ಇನ್ನೂ ಹೆಚ್ಚಿನ ಸಮಯದ ಹೋರಾಟಕ್ಕೂ ನಾವು ಸಿದ್ಧರಾಗಿದ್ದೇವೆ” ಎಂದಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಹೊಸ ಕೃಷಿ ಕಾಯ್ದೆ ಐಚ್ಛಿಕ: ಹಳೇ ವ್ಯವಸ್ಥೆಯೂ ಮುಂದುವರಿಕೆ, ಆಯ್ಕೆ ರೈತರಿಗೆ ಸೇರಿದ್ದು…
ತವರಿಗೆ ಹೋಗುವ ಬಗ್ಗೆ ವಾಗ್ವಾದ : ಮಕ್ಕಳನ್ನು ಕೊಂದು ಸಾವಿಗೆ ಶರಣಾದ ಮಹಿಳೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 3 =
Remember me
