ದೆಹಲಿ:ರೈತರ ದಂಗೆಗೆ ರಾಷ್ಟ್ರ ರಾಜಧಾನಿ ದೆಹಲಿ ರಣಾಂಗಣವಾಗಿದ್ದು, ಈ ಭಾಗದಲ್ಲಿ ಇಂಟರ್​ನೆಟ್​ ಸ್ಥಗಿತ ಮಾಡಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಹಿಂಪಡೆಯುವಂತೆ ರೈತರು ನಡೆಸುತ್ತಿರುವ ಹೋರಾಟ ಇಂದು ಹಿಂಸಾರೂಪಕ್ಕೆ ತಿರುಗಿದ್ದು, ಅನ್ನದಾತರ ಕೈಯಲ್ಲಿ ತಲವಾರ್ ಝಳಪಿಸಿದೆ. ಕೆಂಪುಕೋಟೆ ಮೇಲೆ ಮುತ್ತಿಗೆ ಹಾಕಿದ ಪ್ರತಿಭಟನಾನಿರತರು ಅನ್ಯ ಧ್ವಜಗಳನ್ನು ಹಾರಿಸಿದ್ದಾರೆ.
ಸಿಂಗು, ಗಾಜಿಪುರ ಬಾರ್ಡರ್​ನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಜಲಫಿರಂಗಿ, ಲಾಠಿಚಾರ್ಜ್​ ಅಸ್ತ್ರ ಪ್ರಯೋಗಿಸಿದ್ದರೂ ತಹಬದಿಗೆ ಬಂದಿಲ್ಲ. ಸರ್ಕಾರದ ಗೈಡ್​ಲೈನ್ಸ್​ ಪಾಲಿಸದ ಪ್ರತಿಭಟನಾನಿರತರು ಪೊಲೀಸ್‌ ಕೋಟೆ ಬೇಧಿಸಿ, ಬ್ಯಾರಿಕೇಡ್​ಗಳನ್ನೂ ಕಿತ್ತೆಸೆದು, ಲಾರಿ, ಬಸ್​ಗಳನ್ನೂ ಉರುಳಿಸಿ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದರು. ಕೆಂಪು ಕೋಟೆಗೂ ಮುತ್ತಿಗೆ ಹಾಕಿ, ರೈತ ಕಹಳೆ ಮೊಳಗಿಸಿದ್ದಾರೆ. ಪ್ರತಿಭಟನೆಯ ತೀವ್ರತೆ ಅರಿತ ಕೇಂದ್ರ ಸರ್ಕಾರ, ದೆಹಲಿಯ ಸಿಂಗು, ಗಾಜಿಪುರ, ಟಿಕ್ರಿ, ಮುಕರ್ಬಾ ಚೌಕ್ ಮತ್ತು ನಂಗ್ಲೋಯಿ ಪ್ರದೇಶ ಮತ್ತು ದೆಹಲಿ ಗಡಿ ಭಾಗದಲ್ಲಿ ಟೆಲಿಕಾಂ ಸೇವೆಗಳನ್ನು ಸ್ಥಗಿತಗೊಳಿಸಿದೆ.ಇದನ್ನೂ ಓದಿರಿVIDEO| ಹಿಂಸಾಚಾರಕ್ಕೆ ತಿರುಗಿದ ‘ಟ್ರ್ಯಾಕ್ಟರ್​ ಪರೇಡ್​’, ತಲ್ವಾರ್​ ಹಿಡಿದು ಬಂದ ರೈತರು!
ಇಂದು ರಾತ್ರಿ 12 ಗಂಟೆವರೆಗೂ ತಾತ್ಕಾಲಿಕವಾಗಿ ಇಂಟರ್​ನೆಟ್​ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಗಾಳಿ ಸುದ್ದಿ ಹರಡುವ, ಪರಿಸ್ಥಿತಿ ಮತ್ತಷ್ಟು ಕೈಮೀರುವ ಸಾಧ್ಯತೆಯನ್ನು ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಸ್ವಂತ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

VIDEO| ಹಿಂಸಾಚಾರಕ್ಕೆ ತಿರುಗಿದ ‘ಟ್ರ್ಯಾಕ್ಟರ್​ ಪರೇಡ್​’, ತಲ್ವಾರ್​ ಹಿಡಿದು ಬಂದ ರೈತರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
