ನವದೆಹಲಿ:ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನು ವಿರೋಧಿಸಿ ಸಾವಿರಾರು ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೂ ಕಾರಣವಾಗಿದೆ. ಆದರೆ ಇದೇ ಪ್ರತಿಭಟನೆಯಲ್ಲಿ ಮಾನವೀಯ ಮೌಲ್ಯಗಳನ್ನೂ ಎತ್ತಿ ಹಿಡಿದಿರುವ ಘಟನೆಗಳು ನಡೆದಿವೆ.
ಇದನ್ನೂ ಓದಿ:ಕರೊನಾ ನಂತರ ಮೊದಲನೇ ಬಾರಿ ವಾರಣಾಸಿಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ; ಆರು ಲೇನ್​ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ
ಇಂದು ದೇಶಾದ್ಯಂತ ಸಿಖ್​ ಧರ್ಮ ಸಂಸ್ಥಾಪಕ ಗುರುನಾನಕ್​ ದೇವ ಅವರ 551ನೇ ಜಯಂತಿ ಆಚರಿಸಲಾಗುತ್ತಿದೆ. ದೆಹಲಿ ರೈತ ಹೋರಾಟದಲ್ಲಿ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಬಹುತೇಕರು ಪಂಜಾಬ್​ ಮೂಲದವರಾಗಿದ್ದಾರೆ. ಸಿಖ್​ ಧರ್ಮದವರಾಗಿರುವ ಈ ರೈತರು ಹೋರಾಟದ ಮಧ್ಯೆಯೂ ಗುರುನಾನಕ್​ ಜಯಂತಿ ಆಚರಿಸಿದ್ದಾರೆ. ಈ ಶುಭ ದಿನದಂದು ಪೊಲೀಸರು ಸೇರಿ ಸುತ್ತ ಮುತ್ತಲಿದ್ದ ಪ್ರತಿಯೊಬ್ಬರಿಗೂ ಪ್ರಸಾದ ವಿತರಣೆ ಮಾಡುವ ಮೂಲಕ ದಿನಾಚರಣೆ ಆಚರಿಸಲಾಗಿದೆ.
ಇದನ್ನೂ ಓದಿ:ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಲಸಿಕೆ ಬಗ್ಗೆ ತಿಳಿಸಿ; ಸಂಶೋಧಕರಲ್ಲಿ ಮೋದಿ ಮನವಿ
ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನು ವಿರೋಧಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದು, ರಾಷ್ಟ್ರರಾಜಧಾನಿಗೆ ಮುತ್ತಿಗೆ ಹಾಕುವ ಪ್ರಯತ್ನದಲ್ಲಿದ್ದಾರೆ. ಈ ಪ್ರತಿಭಟನೆ ಇಂದು 5ನೇ ದಿನಕ್ಕೆ ಕಾಲಿರಿಸಿದೆ. ರಾಜಧಾನಿ ಪ್ರವೇಶದ ಐದು ಪ್ರವೇಶದ್ವಾರಗಳನ್ನು ಬಂದ್ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಪ್ರತಿಭಟನೆಯನ್ನು ಸ್ಥಳಾಂತರಿಸಲು ಸರ್ಕಾರ ಮಾಡಿರುವ ಮನವಿಯನ್ನು ಪ್ರತಿಭಟನಾಕಾರರು ತಿರಸ್ಕರಿಸಿದ್ದಾರೆ. (ಏಜೆನ್ಸೀಸ್​)
ಲಾಡ್ಜ್​ಗೆ ಬರುವಾಗ ಇಬ್ಬರು, ಹೋಗುವಾಗ ಒಬ್ಬನೇ: ಮುಚ್ಚಿದ್ದ ಕೊಠಡಿ ತೆರೆದವರಿಗೆ ಕಾದಿತ್ತು ಶಾಕ್​!

ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − two =
Remember me
