ನವದೆಹಲಿ :ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದಿನಿಂದ ದೆಹಲಿಯ ಜಂತರ್​ ಮಂತರ್​ನಲ್ಲಿ ‘ಕಿಸಾನ್ ಸಂಸದ್’​ ನಡೆಸಲಿದ್ದಾರೆ. ಸಂಸತ್​ ಅಧಿವೇಶನದ ಅವಧಿಯಲ್ಲಿ ಅದೇ ಮಾದರಿಯಲ್ಲಿ ಪ್ರತಿ ದಿನ 200 ಜನರ ಗುಂಪುಗಳಲ್ಲಿ ಸೇರಿ ವಿನೂತನವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಸಿಂಘು ಗಡಿಯ ಪ್ರತಿಭಟನಾ ಧರಣಿ ಸ್ಥಳದಿಂದ ಪ್ರತಿದಿನ 200 ರೈತರು ಪೊಲೀಸರ ಬಂದೋಬಸ್ತಿನಲ್ಲಿ ಜಂತರ್ ಮಂತರ್​ಗೆ ತೆರಳಿ, ಈ ಕಿಸಾನ್ ಸಂಸದ್​ ನಡೆಸಲಿದ್ದಾರೆ. ಇಂದಿನಿಂದ ಆಗಸ್ಟ್​ 9 ರವರೆಗೆ ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ಈ ಪ್ರತಿಭಟನೆಯನ್ನು ನಡೆಸಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಪ್ರತಿಭಟನಾಕಾರರು ಶಾಂತಿ ಕಾಪಾಡಬೇಕು ಮತ್ತು ಕೋವಿಡ್​ ಪ್ರೊಟೊಕಾಲನ್ನು ಪಾಲಿಸಬೇಕೆಂಬ ಷರತ್ತು ವಿಧಿಸಲಾಗಿದೆ.
ಇದನ್ನೂ ಓದಿ:ಮೊದಲು ಪರಿಹಾರ ನೀಡಿ, ಬಳಿಕ ವಸೂಲಿ ಮಾಡಿ: ವಿಮಾ ಸಂಸ್ಥೆಗೆ ಹೈಕೋರ್ಟ್‌ ಆದೇಶ
ಸಂಸತ್ತಿನ ರೀತಿನೀತಿಗಳನ್ನು ಅನುಸರಿಸಿ ಸಭೆ ನಡೆಸಲಾಗುವುದು. ಸ್ಪೀಕರ್, ಡೆಪ್ಯುಟಿ ಸ್ಪೀಕರ್​ರಂತೆ ಕೆಲವು ನಾಯಕರು ಸಾರಥ್ಯ ವಹಿಸುವರು. ಸಂಸತ್ತನ್ನು ಹೇಗೆ ನಡೆಸಬೇಕು ಎಂಬುದನ್ನು ನಾವು ತೋರಿಸಿಕೊಡಲಿದ್ದೇವೆ ಎಂದು ಚಳುವಳಿಗಾರ ಯೋಗೇಂದ್ರ ಯಾದವ್ ಹೇಳಿದ್ದಾರೆ. ಕೇರಳ ಮತ್ತು ಕರ್ನಾಟಕ ಸೇರಿದಂತೆ ದೂರದೂರದಿಂದ ಇದಕ್ಕಾಗಿ ರೈತರು ಆಗಮಿಸಲಿದ್ದಾರೆ ಎಂದಿದ್ದಾರೆ.(ಏಜೆನ್ಸೀಸ್)
ಸಚಿವೆ ಸ್ಮೃತಿ ಇರಾನಿ ಬಗ್ಗೆ ಅವಹೇಳನಕಾರಿ ಪೋಸ್ಟ್​: ಪ್ರೊಫೆಸರ್ ಜೈಲಿಗೆ
ಪಾದ ಹಸ್ತಾಸನ ಮಾಡಿ, ಬೊಜ್ಜಿಗೆ ಬೈ ಬೈ ಹೇಳಿ!
ಭಾರತಕ್ಕೆ ಭೇಟಿ ನೀಡಲಿದ್ದಾರೆ, ಅಫ್ಘಾನಿಸ್ತಾನದ ಸೇನಾ ಮುಖ್ಯಸ್ಥ!


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 − 4 =
Remember me
