ಶ್ರೀನಗರ:ಸಂವಿಧಾನದ 370ನೇ ವಿಧಿಯನ್ನು ಮತ್ತೆ ಚಾಲ್ತಿಗೆ ತರುವ ಏಕೈಕ ಉದ್ದೇಶದೊಂದಿಗೆ ರಚನೆಯಾಗಿರುವ ಗುಪ್ಕಾರ್ ಡಿಕ್ಲರೇಷನ್ ಜನತಾ ಮೈತ್ರಿಕೂಟದ ಸಾರಥ್ಯ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಹೆಗಲೇರಿದೆ.
ಶನಿವಾರ ನಡೆದ ಸಭೆಯಲ್ಲಿ ಫಾರೂಕ್ ಅಬ್ದುಲ್ಲಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಜನತಾ ಪ್ರಜಾಸತ್ತಾತ್ಮಕ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾರ್ಕ್ಸ್​ವಾದಿ ಕಮ್ಯುನಿಸ್ಟ್ ಪಕ್ಷದ ಧುರೀಣ ಮಹಮದ್ ಯೂಸುಫ್ ತರಿಗಾಮಿ ಮೈತ್ರಿಕೂಟದ ಸಂಚಾಲಕರಾಗಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನ ಸೇನೆಯ ಚೀನಾ ನಿರ್ಮಿತ ಕ್ವಾಡ್​ಕಾಪ್ಟರ್​ನ್ನು ಹೊಡೆದುರುಳಿಸಿತು ಸೇನೆ
ಮೆಹಬೂಬಾ ಮುಫ್ತಿ ಮನೆಯಲ್ಲಿ ಸಭೆ ನಡೆಸಿದ ನಾಯಕರು, ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದ ಧ್ವಜವನ್ನು ಮೈತ್ರಿಕೂಟದ ಲಾಂಛನವಾಗಿ ಅಂಗೀಕರಿಸಿದರು. ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ರಾಜ್ಯ ಸ್ಥಾನಮಾನ ತೆಗೆದು ಹಾಕಿದ ನಂತರದ ಒಂದು ವರ್ಷದಲ್ಲಿ ಜಮ್ಮು-ಕಾಶ್ಮೀರದಲ್ಲಿನ ಆಡಳಿತ ಪರಿಸ್ಥಿತಿ ಬಗ್ಗೆ ಒಂದು ತಿಂಗಳೊಳಗೆ ಶ್ವೇತಪತ್ರ ಪ್ರಕಟಿಸಲು ಕೂಟ ನಿರ್ಧರಿಸಿದೆ. (ಏಜೆನ್ಸೀಸ್)
ಕಿಸಾನ್ ಸೂರ್ಯೋದಯ ಲೋಕಾರ್ಪಣೆಗೊಳಿಸಿದ್ರು ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 19 =
Remember me
