ನವದೆಹಲಿ:ನಿಮ್ಮ ಗಾಡಿಗೆ ಫಾಸ್ಟ್ಯಾಗ್​ ಹಾಕಿಸಿಕೊಂಡಿದ್ದೀರಾ? ಹಾಕಿಸಿಕೊಂಡಿದ್ದರೆ ಓಕೆ, ಇಲ್ಲವಾದರೆ ನಾಳೆಯಿಂದ ಡಬಲ್​ ಟೋಲ್​ ಕಟ್ಟಲು ನೀವು ಸಿದ್ಧರಾಗಿ. ಏಕೆಂದರೆ ಕೇಂದ್ರ ಸರ್ಕಾರವು ಈ ಕುರಿತಾಗಿ ಹೊಸ ಆದೇಶವೊಂದನ್ನು ಪ್ರಕಟಿಸಿದ್ದು, ನಾಳೆಯಿಂದ ಫಾಸ್ಟ್ಯಾಗ್​ ಕಡ್ಡಾಯ ಎನ್ನುವ ನಿಯಮ ಜಾರಿಯಲ್ಲಿರಲಿದೆ.
ನಾಳೆಯಿಂದ ಎಲ್ಲ ಹೆದ್ದಾರಿಗಳ ಟೋಲ್​ ಲೇನ್​ಗಳನ್ನು ಫಾಸ್ಟ್ಯಾಗ್​ ಲೇನ್​ಗಳಾಗಿ ಬದಲಾಯಿಸಲಾಗುವುದು. ಈಗಾಗಲೇ ಎಲ್ಲ ಟೋಲ್​ಗಳಲ್ಲಿ ಲೇನ್​ಗಳನ್ನು ಫಾಸ್ಟ್ಯಾಗ್​ ಲೇನ್​ಗಳಾಗಿ ಬದಲಾಗಿಸಲಾಗಿದ್ದು, ಕೇವಲ ಒಂದು ಲೇನ್​ನ್ನು ಫಾಸ್ಟ್ಯಾಗ್​ ಇಲ್ಲದವರಿಗಾಗಿ ಬಿಡಲಾಗಿತ್ತು. ಆದರೆ ಫೆಬ್ರವರಿ 15ರ ಮಧ್ಯ ರಾತ್ರಿಯಿಂದ ಎಲ್ಲ ಲೇನ್​ಗಳು ಫಾಸ್ಟ್ಯಾಗ್​ ಲೇನ್​ಗಳಾಗಿ ಕೆಲಸ ಮಾಡಲಿವೆ.
ಒಂದು ವೇಳೆ ನೀವು ಇನ್ನೂ ಫಾಸ್ಟ್ಯಾಗ್​ ಹಾಕಿಸಿಕೊಂಡಿಲ್ಲ ಎನ್ನುವುದಾದರೆ, ನಾಳೆ ಮಧ್ಯ ರಾತ್ರಿಯಿಂದ ಪ್ರತಿ ಟೋಲ್​ನಲ್ಲಿ ಟೋಲ್​ ಹಣದ ದುಪ್ಪಟ್ಟು ಹಣವನ್ನು ಶುಲ್ಕವನ್ನಾಗಿ ಕಟ್ಟಿ ಹೋಗಬೇಕಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಅನ್ವಯ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. (ಏಜೆನ್ಸೀಸ್​)
‘ಮೊಮ್ಮಗಳ ಆಸೆಗಾಗಿ ಮನೆ ಮಾರಿದೆ, ಈಗ ಈ ಆಟೋದಲ್ಲೇ ನನ್ನ ಜೀವನ’ ಕಣ್ಣೀರು ತರಿಸುತ್ತೆ ಈ ಅಜ್ಜನ ಕಥೆ

ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
