ನವದೆಹಲಿ:ಹೆದ್ದಾರಿಯಲ್ಲಿ ನಿಂತ ಕಾರನ್ನು ಒರೆಸುವ ನೆಪದಲ್ಲಿ ಬರುವ ಬಾಲಕರು ಕಾರಿನ ಗಾಜಿನ ಮೇಲಿರುವ ಫಾಸ್ಟ್ಯಾಗ್​ ಸ್ಟಿಕ್ಕರ್ ಮೇಲೆ ಕೈಯಾಡಿಸುತ್ತ ಅದರಲ್ಲಿನ ಪ್ರಿಪೇಯ್ಡ್ ವ್ಯಾಲೆಟ್​ ಹಣ ಕಬಳಿಸುತ್ತಿದ್ದಾರೆ ಎಂದು ಹೇಳಲಾದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ ಇದೀಗ ಅದರ ಕುರಿತ ಅಸಲಿಯತ್ತು ಹೊರಬಿದ್ದಿದೆ.
ಬಾಲಕನೊಬ್ಬ ಕಾರಿನ ಗಾಜನ್ನು ಒರೆಸುತ್ತ ಅದರ ಮೇಲಿನ ಫಾಸ್ಟ್ಯಾಗ್​ ಸ್ಟಿಕ್ಕರ್ ಮೇಲೆ ಕೈಯಾಡಿಸಿದ್ದನ್ನು ನೋಡಿ ಅನುಮಾನಗೊಂಡ ಕಾರುಸವಾರನೊಬ್ಬ ಆತನನ್ನು ಪ್ರಶ್ನಿಸಿದ್ದ. ಆಗ ಓಡಲಾರಂಭಿಸಿದ್ದ ಬಾಲಕನನ್ನು ಆತ ಅಟ್ಟಿಸಿಕೊಂಡು ಹೋಗಿದ್ದರೂ ಸಿಕ್ಕಿರಲಿಲ್ಲ. ಆ ಬಾಲಕ ಫಾಸ್ಟ್ಯಾಗ್ ಹಣ ಕಬಳಿಸಲು ಮುಂದಾಗಿದ್ದ, ಅಂಥ ದೊಡ್ಡ ವಂಚನಾ ಜಾಲವೇ ಇದೆ ಎಂದು ಹೇಳಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಫ್ಯಾಕ್ಟ್​ಚೆಕ್​ ಮಾಡಿದ್ದ ಪ್ರೆಸ್ ಇನ್​ಫಾರ್ಮೇಷನ್​ ಬ್ಯೂರೋ (ಪಿಐಬಿ) ಅಸಲಿಯತ್ತು ಹೊರಹಾಕಿದೆ. ಈ ಕುರಿತು ಪರಿಶೀಲನೆ ನಡೆಸಿದ್ದು, ಅದು ಫೇಕ್​ ವಿಡಿಯೋ ಎಂದು ಪಿಐಬಿ ಹೇಳಿದೆ. ಅಂಥ ಟ್ರಾನ್​ಸ್ಯಾಕ್ಷನ್​ ಸಾಧ್ಯವಿಲ್ಲ, ಅದು ಓಪನ್​ ಇಂಟರೆನ್​​ನಲ್ಲಂತೂ ಅಸಾಧ್ಯ. ಪ್ರತಿ ಟೋಲ್ ಪ್ಲಾಜಾ ಕೂಡ ನಿಗದಿತ ಬ್ಯಾಂಕ್​ ಮತ್ತು ಜಿಯೋ ಕೋಡ್ ಹೊಂದಿರುವ ಯುನಿಕ್ ಕೋಡ್ ಒಳಗೊಂಡಿರುತ್ತದೆ. ಇದು ನ್ಯಾಷನಲ್ ಇಲೆಕ್ಟ್ರಿಕ್​ ಟೋಲ್ ಕಲೆಕ್ಷನ್ ಸಿಸ್ಟಮ್​ ಮೂಲಕ ಮ್ಯಾಪಿಂಗ್ ಆಗುತ್ತಿರುತ್ತದೆ. ಟೋಲ್​ ಫಾಸ್ಟ್ಯಾಗ್ ಪ್ರಿಪೇಯ್ಡ್​ ವ್ಯಾಲೆಟ್ ಪಾವತಿ ಸುರಕ್ಷಿತ, ಈಗ ಹರಿದಾಡುತ್ತಿರುವ ವಿಡಿಯೋ ಫೇಕ್ ಎಂದು ಪಿಐಬಿ ಹೇಳಿದೆ.
A#viralVideo claims that devices like watches are being used to swipe the#Fastagon vehicles, leading to fraudulent deduction of money from prepaid wallets.#PIBFactCheck:
▶️ This Video is#FAKE
▶️ Such transactions are not possible
▶️ Each Toll Plaza has a unique codepic.twitter.com/n7p01AXF4A
— PIB Fact Check (@PIBFactCheck)June 25, 2022

ಟೆಸ್ಟ್​ ಡ್ರೈವ್ ವೇಳೆ ಮೂರನೇ ಮಹಡಿಯಿಂದ ಬಿದ್ದ ಕಾರು; ಇಬ್ಬರು ಸ್ಥಳದಲ್ಲೇ ಸಾವು..

ಭಾರಿ ಅಪಘಾತ: ತಂದೆ-ತಾಯಿ-ಮಗಳು ಸೇರಿ 8 ಮಂದಿ ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − five =
Remember me
