| ಮುಕುಂದಯ್ಯ ಜಗದೀಶ್ ಮಂಜುನಾಥ್,ಮ್ಯೂಚುವಲ್ ಫಂಡ್ ವಿತರಕರು
ಪ್ರತಿಯೊಬ್ಬ ವ್ಯಕ್ತಿಯೂ ಆರ್ಥಿಕ ಸ್ವಾವಲಂಬನೆ ಬಯಸುತ್ತಾನೆ. ವ್ಯವಸ್ಥಿತ ಹೂಡಿಕೆ ಯೋಜನೆಯಿಂದ ಹಣಕಾಸು ಬದುಕಿಗೆ ಒಂದು ಶಿಸ್ತುಬದ್ಧತೆ ಬರುತ್ತದೆ. ಬಹುತೇಕ ಮಂದಿಗೆ ಒಂದೇ ಸಲ ಇಡಿಗಂಟನ್ನು ಹೂಡಿಕೆ ಮಾಡಲು ಅಸಾಧ್ಯ. ಇಂಥ ಸಂದರ್ಭದಲ್ಲಿ ಸಣ್ಣ ಪುಟ್ಟ ಮೊತ್ತದಿಂದಲೇ ಹೂಡಿಕೆಯನ್ನು ಆರಂಭಿಸಬೇಕಾಗುತ್ತದೆ.
ಶಿಸ್ತುಬದ್ಧ ಹೂಡಿಕೆ ಮಾಡುವುದು ಹಲವರಿಗೆ ಪ್ರಯಾಸಕರ ಕೆಲಸದಂತೆ ಕಾಣಿಸಬಹುದು. ಇಂಥವರಿಗೆ ವರದಾನವಾಗಿ ಬಂದಿರುವುದು ‘ಸಿಪ್​’ (SIP). ‘ಸಿಪ್​’ನಲ್ಲಿ ಹೂಡಿಕೆ ಮಾಡುವ ಮೂಲಕ ಪ್ರಯಾಸದ ಕೆಲಸವನ್ನೂ ಸುಲಭ ಮಾಡಿಕೊಳ್ಳಬಹುದಾಗಿದೆ. ಪ್ರತಿ ತಿಂಗಳು ವ್ಯವಸ್ಥಿತವಾಗಿ ‘ಸಿಪ್​’ನಲ್ಲಿ ಹೂಡಿಕೆ ಮಾಡಿ ಕಾಲಾನಂತರದಲ್ಲಿ ಹೆಚ್ಚಿನ ಹಣವನ್ನು ಸಂಗ್ರಹಿಸಬಹುದಾಗಿದೆ. ದೀರ್ಘಕಾಲೀನ ಹಣಕಾಸು ಗುರಿಗಳನ್ನು ಈಡೇರಿಸಲು ಇದು ಸಹಕಾರಿ.
ಇಂದು, ಕೇವಲ ”ಸಿಪ್​”ನಲ್ಲಿಯೇ ಹಲವಾರು ವಿವಿಧ ಆವಿಷ್ಕಾರಗಳನ್ನು ಮಾಡಲಾಗಿದೆ. ಅವುಗಳ ಪೈಕಿ ಒಂದು ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್ ಪ್ರಾರಂಭಿಸಿರುವ ‘ಬೂಸ್ಟರ್​ ಸಿಪ್​’ (Booster SIP). ಮಾರುಕಟ್ಟೆಯ ಏರಿಳಿತದ ಲಾಭವನ್ನು ಪಡೆದುಕೊಳ್ಳುವುದು ಮತ್ತು ಹೂಡಿಕೆದಾರರ ಪರವಾಗಿ ಕೆಲಸ ಮಾಡುವುದು ಇದರ ಗುರಿಯಾಗಿದೆ. ಮಾರುಕಟ್ಟೆಯ ಏರಿಳಿತಗಳ ಬಗ್ಗೆ ತಲೆ ಕೊಡಿಸಿಕೊಳ್ಳದೆ ನಿಶ್ಚಿಂತೆಯಿಂದ ಬಂಡವಾಳ ಹೂಡಿಕೆ ಮಾಡಲು ಇದು ಉಪಯುಕ್ತವಾಗಿದೆ.
ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?ಮಾರುಕಟ್ಟೆಯ ಏರಿಳಿತವನ್ನು ಆಧರಿಸಿ ಹೂಡಿಕೆ ಮಾಡುವ ಸಮಯದಲ್ಲಿ ಹೂಡಿಕೆದಾರರಿಗೆ ಗೊಂದಲ ಉಂಟಾಗುವುದು ಸಹಜ. ಮಾರುಕಟ್ಟೆಯ ಪರಿಸ್ಥಿತಿ ಹೇಗಿದೆಯೋ, ಹೂಡಿಕೆ ಮಾಡಬಹುದೇ ಅಥವಾ ಮುಂದೂಡುವುದು ಸೂಕ್ತವೇ ಎಂಬ ಗೊಂದಲ ಕಾಡುತ್ತಿರುತ್ತದೆ. ಏಕೆಂದರೆ ಮಾರುಕಟ್ಟೆಯ ಏರಿಳಿತ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂದು ಯಾರೂ ಊಹಿಸಿಕೊಳ್ಳುವುದು ಕಷ್ಟ. ಹೀಗಾಗಿ ಕೆಲವೊಮ್ಮೆ ನೀವು ನಿಮ್ಮ ಹೂಡಿಕೆಯನ್ನೇ ಮುಂದೂಡಬಹುದು. ಇಂಥವರಿಗೆ ವರದಾನವಾಗಿ ಬಂದಿರುವುದು ‘ಬೂಸ್ಟರ್​ ಸಿಪ್​’. ಇಲ್ಲಿ, ಪ್ರತಿ ತಿಂಗಳು ‘ಸಿಪ್​’ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ ಮತ್ತು ಸಾಲ ಯೋಜನೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಆ ನಂತರ, ಮಾರುಕಟ್ಟೆ ಏರಿಳಿತದ ಆಧಾರದ ಮೇಲೆ ಹೆಚ್ಚುವರಿ ಮೊತ್ತವನ್ನು ಹೂಡಿಕೆದಾರರ ಇಚ್ಛಾನುಸಾರ ಇಕ್ವಿಟಿ ಯೋಜನೆಗೆ ವರ್ಗಾಯಿಸಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಈ ವರ್ಗಾವಣೆ ಹಂತವನ್ನು ‘ವ್ಯವಸ್ಥಿತ ವರ್ಗಾವಣೆ ಯೋಜನೆ’ (STP) ಎಂದು ಕರೆಯಲಾಗುತ್ತದೆ.
ಫಂಡ್ ಹೌಸ್ ಈಕ್ವಿಟಿ ಯೋಜನೆಯಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಬೇಕೆಂದು ನಿರ್ಧರಿಸಲು ಇಕ್ವಿಟಿ ಮೌಲ್ಯಮಾಪನ ಸೂಚ್ಯಂಕ ಎಂದು ಕರೆಯುವ ಆಂತರಿಕ ಸ್ವಾಮ್ಯದ ಮಾದರಿಯನ್ನು (in-house proprietary model ) ಬಳಸಲಾಗುತ್ತದೆ. ಈ ಮೊತ್ತವು ‘ಸಿಪ್​’ ಮೊತ್ತದ 0.1x ನಿಂದ 10x ವರೆಗೆ ಎಲ್ಲಿಯಾದರೂ ಇರಬಹುದು. ಇದರ ಸಹಾಯದೊಂದಿಗೆ ಹೂಡಿಕೆದಾರರು ಮಾರುಕಟ್ಟೆಯ ಏರಿಳಿತದ ಆಧಾರದ ಮೇಲೆ ಹೆಚ್ಚೂ- ಕಡಿಮೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಮಾರುಕಟ್ಟೆ ಸೂಚ್ಯಂಕ ಇಳಿದಿದ್ದಾಗ ಹೆಚ್ಚು ಯುನಿಟ್‌ಗಳು ನಿಮ್ಮದಾಗುತ್ತದೆ. ಸೂಚ್ಯಂಕ ಎತ್ತರದಲ್ಲಿದ್ದಾಗ ಕಡಿಮೆ ಯುನಿಟ್‌ಗಳು ನಿಮ್ಮದಾಗುತ್ತದೆ. ಈ ವಿಧಾನದಿಂದ ಸರಾಸರಿ ವೆಚ್ಚ ನಿಮಗೆ ಅನುಕೂಲಕರವಾಗುತ್ತದೆ.
ಉದಾಹರಣೆಗೆ-ಹೂಡಿಕೆದಾರರು ‘ಸಿಪ್​’ ಮೊತ್ತವಾಗಿ 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಲು ಇಚ್ಛೆಪಟ್ಟರೆ, ಈ ಮೊತ್ತವನ್ನು ಪ್ರತಿ ತಿಂಗಳು ಕಡಿತಗೊಳಿಸಲಾಗುತ್ತದೆ ಮತ್ತು ಸಾಲ ನಿಧಿಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಅದರ ನಂತರ, ಈಕ್ವಿಟಿ ಮೌಲ್ಯಮಾಪನ ಸೂಚ್ಯಂಕವನ್ನು ಆಧರಿಸಿ, ಒಂದು ಮೊತ್ತವು ರೂ. 1,000 (0.1x) ರಿಂದ ರೂ.1 ಲಕ್ಷ (10x) ವರೆಗೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + six =
Remember me
