ರಾಂಚಿ:ಎನ್​ಜಿಒ ಆಯೋಜಿಸಿದ್ದ ಆಹಾರ ವಿತರಣಾ ಕಾರ್ಯಕ್ರಮ ಹೃದಯಸ್ಪರ್ಶಿ ಘಟನೆಯೊಂದಕ್ಕೆ ಕಾರಣವಾಗಿದೆ. ಹೌದು, ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅನ್ನದಾನ ಕಾರ್ಯಕ್ರಮ ತಂದೆ ಮತ್ತು ಮಗನನ್ನು ಹತ್ತು ವರ್ಷಗಳ ನಂತರ ಒಂದಾಗುವಂತೆ ಮಾಡಿದೆ.
ಟಿಂಕು ವರ್ಮಾ ಎಂಬಾತ 2013ರಲ್ಲಿ ಪತ್ನಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ. ಬಳಿಕ ಜೈಲು ಶಿಕ್ಷೆಗೆ ಗುರಿಯಾಗಿದ್ದರಿಂದ ಮೂರು ವರ್ಷದ ಮಗ ಶಿವಂ ಅನಾಥನಾಗಿದ್ದ. ಸಂಬಂಧಿಕರು ನೋಡಿಕೊಳ್ಳಲು ಹಿಂದೇಟು ಹಾಕಿದ್ದರಿಂದ, ಅಧಿಕಾರಿಗಳು ಬಾಲಕನನ್ನು ರಾಮಗಢದಲ್ಲಿರುವ ಡಿವೈನ್ ಓಂಕಾರ್ ಮಿಷನ್ ಎಂಬ ಸೇವಾ ಸಂಸ್ಥೆಗೆ ಹಸ್ತಾಂತರಿಸಿದ್ದರು.
ಇದನ್ನೂ ಓದಿ:ಬೆಳಗಾಗುವಷ್ಟರಲ್ಲಿ ಕೋಟ್ಯಧಿಪತಿಯಾದ ಕೂಲಿ ಕಾರ್ಮಿಕ; 17 ರೂ. ಇದ್ದ ಬ್ಯಾಂಕ್ ಖಾತೆಯಲ್ಲೀಗ 100 ಕೋಟಿ ರೂ.!
ಕಳೆದ ಹತ್ತು ವರ್ಷಗಳಿಂದ ಸೇವಾ ಸಂಸ್ಥೆಯಲ್ಲಿ ಬೆಳೆದಿರುವ ಶಿವಂ ಈಗ ಎಂಟನೇ ತರಗತಿ ವಿದ್ಯಾರ್ಥಿ. ಡಿವೈನ್ ಓಂಕಾರ್ ಸೇವಾ ಸಂಸ್ಥೆ ಕಳೆದ ಶುಕ್ರವಾರ ಅನ್ನದಾನ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸಾಲಾಗಿ ಕುಳಿತವರಿಗೆ ಶಿವಂ ಊಟ ಬಡಿಸುತ್ತಾ ಬಂದಿದ್ದಾನೆ. ಅದೇ ಸಾಲಿನಲ್ಲಿ ಕುಳಿತಿದ್ದ ಗಡ್ಡಧಾರಿ ವ್ಯಕ್ತಿಯೊಬ್ಬ ತನ್ನ ತಂದೆಯ ಸಹಜವನ್ನೇ ಹೋಲುತ್ತಿರುವುದನ್ನು ಗಮನಿಸಿದ್ದಾನೆ. ಕೂಡಲೇ ಟಿಂಕು ವರ್ಮ ತನ್ನ ಮಗ ಶಿವಂನನ್ನು ಗುರುತು ಹಿಡಿದಿದ್ದಾನೆ. ಇದರಿಂದಾಗಿ 2013ರಲ್ಲಿ ಬೇರ್ಪಟ್ಟ ತಂದೆ ಮತ್ತು ಮಗ ಹತ್ತು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ.
ಇದನ್ನೂ ಓದಿ:ಬಹುಕಾಲದ ಗೆಳತಿಯೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್; ಇಲ್ಲಿದೆ ನೋಡಿ ಮದುವೆ ಫೋಟೋಸ್…
ಜೈಲಿನಿಂದ ಬಿಡುಗಡೆಗೊಂಡ ನಂತರ ಟಿಂಕು ವರ್ಮಾ ರಾಮಗಢದ ವಿಕಾಸ್ ನಗರ ಕಾಲೋನಿಯಲ್ಲಿ ವಾಸಿಸುತ್ತಿದ್ದು, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾನೆ. ತಂದೆಯೊಂದಿಗೆ ತೆರಳಲು ಶಿವಂ ಒಪ್ಪಿಕೊಂಡಿದ್ದ. ಹೀಗಾಗಿ ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿ ಬಾಲಕನನ್ನು ಹಸ್ತಾಂತರಿಸಿದ್ದೇವೆ ಎಂದು ಎನ್‌ಜಿಒ ವ್ಯವಸ್ಥಾಪಕ ರಾಜೇಶ್ ನೇಗಿ ತಿಳಿಸಿದ್ದಾರೆ. ಹತ್ತು ವರ್ಷಗಳ ಕಾಲ ಸಾಕಿ ಸಲಹಿದ ಸೇವಾ ಸಂಸ್ಥೆಯನ್ನು ತೊರೆಯುವಾಗ ಶಿವಂ ಭಾವುಕನಾಗಿದ್ದಾನೆ. ತಂದೆಯನ್ನು ನೋಡುತ್ತೇನೆ ಊಹಿಸಿರಲಿಲ್ಲ. ಇದು ನಿಜಕ್ಕೂ ದೇವರ ಮಹಿಮೆ ಎಂದು ಶಿವಂ ಹೇಳಿಕೊಂಡಿದ್ದಾನೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 1 =
Remember me
