ಬೆಂಗಳೂರು:ಅಯ್ಯೋ ಪಾಪ ಎಂದು ಒಂದೊಳ್ಳೆಯ ಕೆಲಸ ಮಾಡಲು ಹೋಗಿ ಸ್ವತಃ ಅವರೇ ಇನ್ನೊಬ್ಬರ ಬಳಿ ಅಯ್ಯೋ ಪಾಪ ಎಂದೆನಿಸಿಕೊಳ್ಳುವಂಥ ಪ್ರಕರಣವಿದು. ನೀರಲ್ಲಿ ಮುಳುಗೇಳುತ್ತಿದ್ದ ನಾಯಿಮರಿಯೊಂದನ್ನು ರಕ್ಷಿಸಲು ಹೋದ ಅಪ್ಪ-ಮಗನಿಗೇ ದುಷ್ಕರ್ಮಿಗಳು ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ.
ಮನೆಗೆ ಸಮೀಪದ ಕಾಲುವೆ ಬಳಿ ನೀರಲ್ಲಿ ಮುಳುಗುತ್ತಿದ್ದ ನಾಯಿಮರಿಯೊಂದು ರಕ್ಷಣೆಗಾಗಿ ದೈನ್ಯವಾಗಿ ಬೊಗಳುತ್ತಿದ್ದುದನ್ನು ಕೇಳಿ ತಂದೆ-ಮಗ ಇಬ್ಬರೂ ಕಾರು ತೆಗೆದುಕೊಂಡು ಹೋಗಿ, ಅದರ ಹೆಡ್​ಲೈಟ್​ ಬೆಳಕು ನಾಯಿ ಇದ್ದ ಜಾಗದ ಮೇಲೆ ಬೀಳುವಂತೆ ರಕ್ಷಣೆಗೆ ತೆರಳಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಆ ದಾರಿಯಾಗಿ ಮತ್ತೊಂದು ಕಾರ್​ನಲ್ಲಿ ಬಂದ ನಾಲ್ವರು ತುಂಬ ಪದೇಪದೆ ಹಾರ್ನ್​ ಮಾಡಿದ್ದಾರೆ. ಪಕ್ಕದಲ್ಲಿ ಇನ್ನೊಂದು ಕಾರು ಹೋಗುವಷ್ಟು ಜಾಗವಿದ್ದರೂ ತಕರಾರು ತೆಗೆದ ಅಪರಿಚಿತರು ಬಳಿಕ ಅಪ್ಪ-ಮಗನಿಗೆ ಚೂರಿಯಿಂದ ಇರಿದಿದ್ದಾರೆ.
ಇದನ್ನೂ ಓದಿ:ಒಬ್ಬನಿಗೆ ಒಂದೇ ಸಲಕ್ಕೆ ಅಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲ; ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್​ ಅಭಿಪ್ರಾಯವಿದು…
ಅಂದಹಾಗೆ ಶುಕ್ರವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಕುನ್ವರ್ ಸಿಂಗ್ ಹಾಗೂ ಅವರ ಪುತ್ರ ಸಾಗರ್ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್​ನ ಕೋಲಾರ ಎಂಬಲ್ಲಿನ ಕಾಲುವೆ ಬಳಿ ಈ ಪ್ರಕರಣ ನಡೆದಿದೆ. ತಂದೆ ಕುನ್ವರ್ ಸಿಂಗ್​ಗೆ ಇರಿಯುತ್ತಿದ್ದುದನ್ನು ತಪ್ಪಿಸಲು ಮುಂದಾದ ಪುತ್ರ ಸಾಗರ್ ಎದೆಗೂ ದುಷ್ಕರ್ಮಿಗಳು ಚುಚ್ಚಿದ್ದು ಗಂಭೀರ ಗಾಯಗಳಾಗಿವೆ. ಸಿಂಗ್ ಅವರ ಬಲಗಣ್ಣು, ಬೆನ್ನು-ಹೊಟ್ಟೆಯ ಮೇಲೆ ಗಾಯಗಳಾಗಿವೆ. ಕೂಗಾಟ-ಚೀರಾಟ ಕೇಳಿ ಸೆಕ್ಯುರಿಟಿ ಗಾರ್ಡ್​ಗಳಾದ ಮಿಲಿಂದ್ ಅಧ್ವಾನಿ ಹಾಗೂ ಪ್ರಕಾಶ್ ಸಿಂಗ್ ರಕ್ಷಣೆಗೆ ಧಾವಿಸುತ್ತಿದ್ದಂತೆ ದುಷ್ಕರ್ಮಿಗಳು ಪಾರಾಗಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಮೈಮೇಲೆ ಕೂದಲು ಹೆಚ್ಚಿಗೆ ಇದ್ದರೆ, ಋತುಸ್ರಾವ ಏರುಪೇರಾದರೆ ಮಕ್ಕಳಾಗುವುದಿಲ್ಲವೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + four =
Remember me
