ಲಖನೌ:ಈಗೀಗ ಲಿವ್​ ಇನ್​ ರಿಲೇಷನ್​ಶಿಪ್​ ಎನ್ನುವುದು ಅತ್ಯಂತ ಸಾಮಾನ್ಯ ವಿಚಾರವಾಗಿ ಬದಲಾಗಿಬಿಟ್ಟಿದೆ. ಮದುವೆಗೂ ಮೊದಲು ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ನಂತರ ದಾಂಪತ್ಯ ಆರಂಭಿಸುತ್ತೇವೆ ಎನ್ನುತ್ತಿದೆ ಯುವ ಸಮಾಜ. ಯುವಜನತೆ ಹಾಗಿರಲಿ, ಇಲ್ಲೊಬ್ಬ 70 ವರ್ಷದ ವೃದ್ಧ ಕೂಡ ಲಿವ್​ ಇನ್​ ರಿಲೇಷನ್​ಶಿಪ್​ನಲ್ಲೇ ಇದ್ದು, ದಾರುಣ ಅಂತ್ಯ ಕಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಎಂಐ 10ಟಿ ಪ್ರೋ ಫೋನ್​ ಇಲ್ಲದೆ ಮದುವೆಯಾಗುವುದಿಲ್ಲ ಎಂದ ಯುವಕ! ಯುವಕನ ಆಸೆಯನ್ನು ಈಡೇರಿಸಿದ ಶಿಯೋಮಿ ಸಂಸ್ಥೆ!
ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಇಂತದ್ದೊಂದು ಘಟನೆ ವರದಿಯಾಗಿದೆ. 70 ವರ್ಷದ ರಾಮ್​ ದಯಾಲ್​ಗೆ ಮದುವೆಯಾಗಿ, ಮಕ್ಕಳು, ಮೊಮ್ಮಕ್ಕಳಿದ್ದಾರೆ. ಹಾಗಿದ್ದರೂ ಆತನಿಗೆ ಲಿವ್​ ಇನ್​ ರಿಲೇಷನ್​ಶಿಪ್​ ಹುಚ್ಚು ಹತ್ತಿದ್ದು, ಶಾಂತಿ ದೇವಿ ಹೆಸರಿನ ಮಹಿಳೆಯೊಂದಿಗೆ ಲಿವ್​ ಇನ್​ ರಿಲೇಷನ್​ಶಿಪ್​ ಆರಂಭಿಸಿದ್ದಾನೆ. ವಯಸ್ಸಾದ ಅಪ್ಪ ಏನಾದರೂ ಮಾಡಿಕೊಳ್ಳಲಿ ಎಂದು ಮಕ್ಕಳು ಸುಮ್ಮನಾಗಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ರಾಮ್​​ ದಯಾಲ್​, ತನ್ನ 57 ಲಕ್ಷ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಮಾರಲು ಮುಂದಾಗಿದ್ದಾನೆ. ಅದಕ್ಕೆಂದು ಒಬ್ಬರಿಂದ 11 ಲಕ್ಷ ರೂಪಾಯಿ ಅಡ್ವಾನ್ಸ್​ ಪಡೆದಿದ್ದಾನೆ. ಅದರಲ್ಲಿ 4 ಲಕ್ಷ ರೂಪಾಯಿಯನ್ನು ಶಾಂತಿ ದೇವಿಗೆ ಕೊಟ್ಟಿದ್ದಾನೆ.
ಇದನ್ನೂ ಓದಿ:ಈಗಷ್ಟೇ ಮದುವೆಯಾಗಿರುವ ಗಾಯಕಿಗೆ ಯೌವನದ ಮಗ! ಅಭಿಮಾನಿಗಳಿಗೆ ಶಾಕ್​ ನೀಡಿದ ನೇಹಾ ಕಕ್ಕರ್​!
ಹೆಂಡತಿ ಮಕ್ಕಳಿರುವಾಗಲೇ ಹಣವನ್ನು ಬೇರೊಬ್ಬ ಮಹಿಳೆಗೆ ಹಣ ಕೊಟ್ಟಿದ್ದಕ್ಕೆ, ಹೆಂಡತಿ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಅಪ್ಪನಿಗೆ ತಿಳಿ ಹೇಳಲೆಂದು ಇಬ್ಬರು ಮಕ್ಕಳು ಮತ್ತು ಅವರ ಮೂರು ಸ್ನೇಹಿತರು, ಅಪ್ಪ ಮತ್ತು ಶಾಂತಿ ದೇವಿ ಇದ್ದ ಮನೆಗೆ ತೆರಳಿದ್ದಾರೆ. ಈ ವೇಳೆ ನಾವು ಆಸ್ತಿಯನ್ನು ಮಾರಾಟ ಮಾಡಿಯೇ ತೀರುತ್ತೇವೆ ಎಂದು ಶಾಂತಿ ದೇವಿ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಮಕ್ಕಳು ಅಪ್ಪ ಮತ್ತು ಶಾಂತಿ ದೇವಿಯನ್ನು ಕೊಲೆ ಮಾಡಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾರೆ.
ಜೋಡಿ ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿಗಳು ಯಾರು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಇದೀಗ ರಾಮ್​ ದಯಾಲ್​ನ ಇಬ್ಬರು ಮಕ್ಕಳು ಮತ್ತು ಅವರ ಮೂವರು ಸ್ನೇಹಿತರು ಜೈಲು ಪಾಲಾಗಿದ್ದಾರೆ. (ಏಜೆನ್ಸೀಸ್​)
https://www.vijayavani.net/lady-si-romance-with-married-constable-in-nellore/
ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − twelve =
Remember me
