ಅಮೃತಸರ:ತನ್ನ ಪ್ರಿಯಕರನ ಜೊತೆ ಓಡಿಹೋಗಿದ್ದಕ್ಕೆ ಕುಪಿತಗೊಂಡ ತಂದೆ ಮರ್ಯಾದೆಗೆ ಅಂಜಿ ತನ್ನ ಸ್ವಂತ ಮಗಳನ್ನು ಕೊಂದು ಬಳಿಕ ಆಕೆಯ ಮೃತದೇಹವನ್ನೂ ಬೈಕಿಗೆ ಕಟ್ಟಿ ಊರಿನ ತುಂಬಾ ಎಳೆದೊಯ್ದಿರುವ ಘಟನೆ ಪಂಜಾಬಿನ ಅಮೃತಸರದಲ್ಲಿರುವ ಮುಚ್ಚಲ್​ ಎಂಬ ಗ್ರಾಮದಲ್ಲಿ ನಡೆದಿದೆ.
ಆರೋಪಿ ತನ್ನ ಮಗಳ ಮೃತದೇಹವನ್ನೂ ಬೈಕಿಗೆ ಕಟ್ಟಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಬಳಿಕ ಶವವನ್ನು ರೈಲ್ವೆ ಹಳಿ ಮೇಲೆ ಎಸೆದು ಪರಾರಿಯಾಗಿದ್ದಾನೆ. ಘಟನೆ ನಡೆದ ಪ್ರದೇಶದ ಸುತ್ತ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಲದೀಪ್​ ಸಿಂಗ್​ ಬಂಧಿತ ಆರೋಪಿಯೂ ನಿಹಾಂಗ್​ ಸಿಖ್​ ಆಗಿದ್ದು, ಆತ ತನ್ನ ಮಗಳು ಮನೆಯಲ್ಲಿ ಯಾರಿಗೂ ಹೇಳದೆ ಹೊರ ಹೋಗಿದ್ದಾಳೆ. ಮಾರನೆಯ ದಿನ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮನೆಗೆ ವಾಪಸ್​ ಆಗಿದ್ದಾಳೆ. ಇದರಿಂದ ಕುಪಿತಗೊಂಡ ಆರೋಪಿಯು ಹರಿತವಾದ ಆಯುಧದಿಂದ ತನ್ನ ಮಗಳನ್ನು ಹತ್ಯೆ ಮಾಡಿ ಬಳಿಕ ಆಕೆಯ ಮೃತದೇಹವನ್ನೂ ಬೈಕಿಗೆ ಕಟ್ಟಿ ಎಳೆದೊಯ್ದು ರೈಲ್ವೆ ಹಳಿಯ ಮೇಲೆ ಬಿಸಾಕಿ ಪರಾರಿಯಾಗಿದ್ದಾನೆ.
ಆರೋಪಿ ಮರ್ಯಾದೆಗೆ ಅಂಜಿ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಐಪಿಸಿ ಸೆಕ್ಷನ್​ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಮೃತಸರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಲದೀಪ್​ ಸಿಂಗ್​ ತಿಳಿಸಿದ್ದಾರೆ.
ಇದನ್ನೂ ಓದಿ:ಮಿನಿ ಟ್ರಕ್​-ಲಾರಿ ನಡುವೆ ಭೀಕರ ಅಪಘಾತ; 10 ಮಂದಿ ಮೃತ್ಯು
Shocking incident of Honor killing in#AmritsarA father murdered his daughter who was missing from home for 2 days.Tied his daughter's dead body to his motorcycle and dragged it across the village.#Punjab#Murder#fatherdaughter#HonorKilling#crimepic.twitter.com/AttM6Nvxxi
“I killed my daughter because she stayed outside with somebody. I killed her because of my pride, and this will also serve as a lesson to girls studying in 6th and 7th class.” This statement is from Nihang Singh who committed the recent honor killing in Amritsar.#Amritsar…https://t.co/ltQx2Bzle5pic.twitter.com/b4k4RzRF57
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
