ಮುಂಬೈ:ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಅವಳ ಅಪ್ಪ-ಅಣ್ಣ, ಸಂಬಂಧಿಕರೇ ಕೊಂದು ಸುಟ್ಟು ಹಾಕಿರುವ ಪ್ರಕರಣವೊಂದು ನಡೆದಿದೆ. ಮಹಾರಾಷ್ಟ್ರದಲ್ಲಿ ನಡೆದ ಈ ಭೀಕರ ಕೊಲೆ ಪ್ರಕರಣದಲ್ಲಿ 22 ವರ್ಷದ ಯುವತಿ ಸಾವಿಗೀಡಾಗಿದ್ದಾಳೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಪಿಂಪ್ರಿ ಮಹಿಪಾಲ್ ಗ್ರಾಮದಲ್ಲಿ ಈ ಜ. 22ರಂದು ಈ ಪ್ರಕರಣ ನಡೆದಿದೆ. ಯುವತಿ ಅಪ್ಪ, ಅಣ್ಣ ಮತ್ತು ಮೂವರು ಸಂಬಂಧಿಕರು ಯುವತಿಯನ್ನು ಹಗ್ಗದಿಂದ ಬಿಗಿದು ಸಾಯಿಸಿದ್ದು, ಬಳಿಕ ಶವ ಸುಟ್ಟು ಹಾಕಿ, ಅವಶೇಷಗಳನ್ನು ಹರಿಯುವ ನೀರಿಗೆ ಎಸೆದಿದ್ದರು. ಈ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಿಎಚ್​ಎಂಎಸ್​ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿರುವ ಈ ಯುವತಿಗೆ ಮನೆಯವರು ಮದುವೆ ಮಾಡಲು ನಿಶ್ಚಯಿಸಿದ್ದರು. ಆದರೆ ತಾನು ಕಾಲೇಜಿನಲ್ಲಿ ಬೇರೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಈ ಯುವತಿ ತನಗೆ ಮನೆಯವರು ಗೊತ್ತು ಮಾಡಿದ್ದ ಯುವಕನಿಗೆ ತಿಳಿಸಿದ್ದಳು. ಹೀಗಾಗಿ ಮನೆಯವರು ನಿಗದಿ ಮಾಡಿದ್ದ ಮದುವೆ ನಿಂತುಹೋಗಿತ್ತು.
ಇದರಿಂದ ತೀವ್ರ ಸಿಟ್ಟಾದ ಯುವತಿಯ ಅಪ್ಪ, ತನ್ನ ಪುತ್ರ ಹಾಗೂ ಇನ್ನು ಮೂವರು ಸಂಬಂಧಿಕರೊಂದಿಗೆ ಸೇರಿಗೆ ಆಕೆಯನ್ನು ಜ. 22ರ ರಾತ್ರಿ ತೋಟಕ್ಕೆ ಕರೆದೊಯ್ದು ಅಲ್ಲಿ ಕೊಲೆ ಮಾಡಿ, ಸಾಕ್ಷ್ಯ ನಾಶಗೊಳಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹೃದಯಾಘಾತಕ್ಕೆ ಮತ್ತೊಂದು ಬಲಿ; ತಂದೆ-ತಾಯಿಯ ಏಕೈಕ ಪುತ್ರ, ಜೆಡಿಎಸ್​ ಯುವ ಮುಖಂಡ ನಿಧನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + sixteen =
Remember me
