ಚಂಡೀಗಢ:ದೇಶಾದ್ಯಂತ ಕರೊನಾ ಅಬ್ಬರ ಹೆಚ್ಚಾಗಿದೆ. ಪ್ರತಿದಿನ ಸಾವಿರಾರು ಜನರು ಸೋಂಕಿಗೆ ಬಲಿಯಾಗುತ್ತಿದ್ದು, ಅಂತ್ಯಕ್ರಿಯೆ ನಡೆಸುವುದೂ ದೊಡ್ಡ ಸಾಹಸವಾಗಿಬಿಟ್ಟಿದೆ. ಸರ್ಕಾರದಿಂದ ಯಾವುದೇ ಸವಲತ್ತು ಸಿಗದ ತಂದೆಯೊಬ್ಬ ಕರೊನಾದಿಂದಾಗಿ ಸಾವನ್ನಪ್ಪಿದ ತನ್ನ ಮಗಳನ್ನು ಹೆಗಲ ಮೇಲೇ ಹೊತ್ತೊಯ್ದು ಅಂತ್ಯಸಂಸ್ಕಾರ ಮಾಡಿರುವ ಘಟನೆ ಪಂಜಾಬ್​ನ ಜಲಂಧರ್​ನಲ್ಲಿ ನಡೆದಿದೆ.
ಜಲಂಧರ್​ನ ರಾಮನಗರ ವಾಸಿ ದಿಲೀಪ್​ ಕುಮಾರ್ ಅವರ ಮಗಳು ಸೋನು (11) ಕರೊನಾ ಸೋಂಕಿಗೆ ಬಲಿಯಾಗಿದ್ದಾಳೆ. ಸೋಂದು ದೃಢವಾದ ಹಿನ್ನೆಲೆಯಲ್ಲಿ ಆಕೆಯನ್ನು ಜಲಂಧರ್​ ಸಿವಿಲ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಸ್ಥಿತಿ ಗಂಭೀರವಾಗಿದ್ದು, ಅಮೃತಸರಕ್ಕೆ ಕರೆದೊಯ್ಯುವಂತೆ ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದು, ಆಕೆಯನ್ನು ಡಿಸ್ಚಾರ್ಜ್​ ಮಾಡಿದ್ದಾರೆ. ಆಕೆಯನ್ನು ಕರೆದೊಯ್ಯಲು ಯಾವುದೇ ವಾಹನ ವ್ಯವಸ್ಥೆಯನ್ನೂ ಮಾಡಿಲ್ಲ. ಈ ಮಧ್ಯೆ ಸೋನು ಕೊನೆಯುಸಿರೆಳೆದಿದ್ದಾಳೆ.
ಸೋನುವಿನ ಶವವನ್ನು ಸಾಗಿಸಲೂ ಆ್ಯಂಬುಲೆನ್ಸ್​ ಲಭ್ಯವಾಗಿಲ್ಲ. ಆ ಕಾರಣ ಆಕೆಯ ತಂದೆ ಮಗಳ ದೇಹವನ್ನು ಹೆಗಲ ಮೇಲೆಯೇ ಹೊತ್ತು ತಂದು ಅಂತ್ಯಸಂಸ್ಕಾರ ಮಾಡಿದ್ದಾನೆ. ನಿಯಮಗಳ ಪ್ರಕಾರ ಸರ್ಕಾರದ ವತಿಯಿಂದ ಅಂತ್ಯಸಂಸ್ಕಾರ ಮಾಡಬೇಕು. ಆದರೆ ಎಷ್ಟು ಸಮಯವಾದರೂ ಯಾರೊಬ್ಬರೂ ಮುತುವರ್ಜಿ ವಹಿಸಿದ ಹಿನ್ನೆಲೆಯಲ್ಲಿ ತಾನೇ ಅಂತ್ಯ ಸಂಸ್ಕಾರ ಮಾಡಿದ್ದಾಗಿ ದಿಲೀಪ್​ ಕುಮಾರ್​ ತಿಳಿಸಿದ್ದಾರೆ.
ಜಲಂಧರ್​ ಜಿಲ್ಲೆಯಲ್ಲಿ ಸುಮಾರು 500ಕ್ಕೂ ಅಧಿಕ ಆಸ್ಪತ್ರೆಗಳಿವೆ. 100ಕ್ಕೂ ಅಧಿಕ ಆ್ಯಂಬುಲೆನ್ಸ್​ಗಳಿವೆ. ಅಷ್ಟಿದ್ದರೂ ಬಡ ಸೋಂಕಿತರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)
ಪ್ರೀತಿಗೆ ಒಪ್ಪದ ಯುವತಿಯ ಅಪ್ಪ; ಯುವಕನ ತಂದೆಯ ಎದುರೇ ಬರ್ಬರವಾಗಿ ಕೊಲೆ

ಗಲಾಟೆ ಮಾಡಿದ ಎನ್ನುವ ಕಾರಣಕ್ಕೆ ಆರು ವರ್ಷದ ಮಗನನ್ನು ಬೆಲ್ಟ್​ನಿಂದ ಹೊಡೆದು ಕೊಂದ ಮಲತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 20 =
Remember me
