ಚಂಡೀಗಢ:ಮನೆಯಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳ ಮದುವೆಯೆಂದರೆ ಅದೆಷ್ಟು ಸಂಭ್ರಮವಿರುತ್ತದೆಯಲ್ಲವೇ. ಆದರೆ ಎಲ್ಲ ಹೆಣ್ಣು ಹೆತ್ತವರ ಕಥೆ ಒಂದೇ ರೀತಿ ಇರುವುದಿಲ್ಲ. ಕೆಲವು ತಂದೆ ತಾಯಿಯರು ಮಗಳ ಮದುವೆಗಾಗಿ ಪ್ರಾಣವನ್ನೇ ಕಳೆದುಕೊಳ್ಳುವ ಸ್ಥಿತಿಯೂ ಬಂದುಬಿಡುತ್ತದೆ. ಅಂತದ್ದೇ ಒಂದು ಘಟನೆ ಹರಿಯಾಣದಲ್ಲಿ ನಡೆದಿದೆ.
ಇದನ್ನೂ ಓದಿ:ತೀವ್ರ ಟೀಕೆಗೊಳಗಾದ ಪೊಲೀಸ್ ಕಾಯ್ದೆ ತಿದ್ದುಪಡಿ ಹಿಂತೆಗೆದುಕೊಂಡ ಕೇರಳ ಸರ್ಕಾರ
ಹರಿಯಾಣದ ರೇವಾರಿ ನಗರದ ಕುಟುಂಬವೊಂದರ ಹೆಣ್ಣು ಮಗಳ ಮದುವೆ ನವೆಂಬರ್​ 20ಕ್ಕೆ ನಿಶ್ಚಯವಾಗಿತ್ತು. ಗುರುಗ್ರಾಮದ ವರನಿಗೆ ಮಗಳನ್ನು ಮದುವೆ ಮಾಡಿಕೊಡಲು ಕುಟುಂಬ ಸಿದ್ಧವಾಗುತ್ತಿತ್ತು. ಆದರೆ ಮದುವೆಗೆ ಒಂದು ದಿನವಿರುವಾಗ ಅಂದರೆ ನವೆಂಬರ್​ 19ರಂದು ವಧುವಿನ ತಂದೆ ಮಗಳ ಲಗ್ನ ಪತ್ರಿಕೆಯಲ್ಲೇ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಂದೆ ಈ ರೀತಿ ಮಾಡುವುದಕ್ಕೆ ಕಾರಣ ವರನ ಮನೆಯವರೇ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಮದುವೆಗೆ ಎರಡು ದಿನ ಬಾಕಿಯಿರುವವರೆಗೂ ಸುಮ್ಮನಿದ್ದ ವರನ ಕುಟುಂಬ ನವೆಂಬರ್​ 18ಕ್ಕೆ ಹೊಸ ವರಸೆ ಆರಂಭಿಸಿದೆ. 30 ಲಕ್ಷ ರೂಪಾಯಿ ವರದಕ್ಷಿಣೆ ಕೊಡಿ, ಇಲ್ಲದಿದ್ದರೆ ನಾವು ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆ ಕ್ಷಣಕ್ಕೆ ಏನು ಮಾಡಬೇಕೆಂದು ಅರಿಯದ ವಧುವಿನ ತಂದೆ ಹಾಗೂ ಹೀಗೂ ಮಾಡಿ 15 ಲಕ್ಷ ಹೊಂದಿಸಿದ್ದಾರೆ. ಆದರೆ ಪೂರ್ತಿ ಹಣ ಕೊಡದಿದ್ದರೆ ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ವರನ ಕುಟುಂಬ ಪಟ್ಟು ಹಿಡಿದಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಈ ವರ್ಷ ಶಾಲೆ ಆರಂಭ ಇಲ್ಲ, ಮಹತ್ತರ ನಿರ್ಧಾರ ಕೈಗೊಂಡ ಸರ್ಕಾರ
ನವೆಂಬರ್​ 18ಕ್ಕೆ ವಧುವಿನ ತಂದೆ ಮತ್ತು ಸಂಬಧಿಯೊಬ್ಬರು ವರನ ಮನೆಗೆ ಹೋಗಿ ಈ ವಿಚಾರವಾಗಿ ಮಾತನಾಡಿದ್ದಾರೆ. ಆದರೆ ಅವರು ಅದಕ್ಕೆ ಒಪ್ಪದ ಹಿನ್ನೆಲೆ ಬೇಸರದಿಂದ ಮನೆಗೆ ಬಂದಿದ್ದಾರೆ. ನವೆಂಬರ್​ 19ರಂದು ತಂದೆ ನೇಣಿಗೆ ಶರಣಾಗಿದ್ದಾರೆ. ವರದಕ್ಷಿಣೆ ಕೊಡಲಾಗದ ಹಿನ್ನೆಲೆ ಮಗಳ ಮದುವೆ ಮುರಿದುಬೀಳಲಿದೆ. ಅದನ್ನು ತಾಳಲಾರದ ನಾನು ಸಾಯುತ್ತಿದ್ದೇನೆ ಎಂದು ಲಗ್ನ ಪತ್ರಿಕೆಯಲ್ಲಿ ಬರೆದಿಟ್ಟು ಅವರು ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)
ನಾನು ಗರ್ಭಿಣಿ ಎನ್ನುವುದು ನನಗೇ ಗೊತ್ತಿರಲಿಲ್ಲ! ಶೌಚಕ್ಕೆ ಕೂತಾಗ ಮಗು ಬಂತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 2 =
Remember me
