ರೇವಾ:ವಿದ್ಯಾರ್ಥಿನಿಯ ತಂದೆಯೊಬ್ಬ ಶಾಲಾ ಶಿಕ್ಷಕರ ಬೆರಳನ್ನು ಮುರಿದು ಹಾಕಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ ರೇವಾ ಬಳಿ ನಡೆದಿದೆ.
ಇದನ್ನೂ ಓದಿ:ಬೆಕ್ಕು ಅಡ್ಡ ಬಂದಿದ್ದಕ್ಕೆ ಅಪಶಕುನವೆಂದು ಕಾರು ನಿಲ್ಲಿಸಿದ ಕಳ್ಳರು: ಆಮೇಲೆ ನಡೆದಿದ್ದು ಮಾತ್ರ..ಘಟನೆಗೆ ಸಂಬಂಧಿಸಿದಂತೆ 45 ವರ್ಷದ ಜಗನ್ನಾಥ್ ಸಾಹು ಎಂಬಾತನು, ಶಿಕ್ಷಕ ಮಹೇಂದ್ರ ಸಿಂಗ್ ಏಂಬುವರ ಬೆರಳನ್ನು ಮುರಿದಿದ್ದಾರೆ ಎಂದು ಆರೋಪಿಸಲಾಗಿದೆ.ಘಟನೆ ಹಿನ್ನೆಲೆ:ಸ್ಥಳೀಯ ಶಾಲೆಯೊಂದರಲ್ಲಿ ಜಗನ್ನಾಥ್​ ಸಾಹುವಿನ ಮಗಳು 7ನೇ ತರಗತಿಯನ್ನು ಓದುತ್ತಿದ್ದು, ಶಾಲಾ ಶಿಕ್ಷಕನು ಆಕೆಗೆ ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವಂತೆ ಹೇಳಿದ್ದ. ಈ ವೇಳೆ ಆಕೆ ನಿರಾಕರಿಸಿದಾಗ ಥಳಿಸಿದ್ದಾನೆ. ವಿದ್ಯಾರ್ಥಿನಿಯು ಮನೆಗೆ ಹೋಗಿ ಶಾಲೆಯಲ್ಲಿ ನಡೆದ ವಿಷಯವನ್ನು ತಂದೆಗೆ ತಿಳಿಸಿದಾಗ ಆತನಿಗೆ ಕೋಪ ಬಂದಿದ್ದು, ಆತ ಮರುದಿನ ಶಾಲೆಗೆ ಬಂದಿದ್ದ.
ಇದನ್ನೂ ಓದಿ:ಮಲಗಿದ್ದಲ್ಲೇ ಪ್ರಾಣ ಬಿಟ್ಟಿದ್ದ ಇಬ್ಬರು ಮಹಿಳೆಯರು: ಕೃತ್ಯದ ಹಿಂದಿತ್ತು ಪರಿಚಿತ ಪುರುಷನ ಕೈವಾಡ?
ಶಿಕ್ಷರೊಂದಿಗಿನ ಭೇಟಿ ವೇಳೆ ಸಾಹು ವಾಗ್ವಾದಕ್ಕಿಳಿದಿದ್ದು, ಅದು ಸ್ವಲ್ಪ ಸಮಯದ ನಂತರ ಜಗಳಕ್ಕೆ ತಿರುಗಿದೆ. ಈ ನಡುವೆ ಸಾಹು ಶಿಕ್ಷಕನ ಬಲ ಬೆರಳಿನ ತುದಿಯನ್ನು ಬಲವಾಗಿ ಕಚ್ಚಿದ್ದು, ಬೆರಳಿನ ಭಾಗ ಮುರಿದು ನೆಲದ ಮೇಲೆ ಬಿದ್ದಿದೆ. ಕೂಡಲೇ ಶಿಕ್ಷಕನು ಪೊಲೀಸರಿಗೆ ದೂರು ನೀಡಿದ್ದು, ಪೋಲಿಸರು ಆತನನ್ನು ವಶಕ್ಕೆ ಪಡೆದಿದ್ದಾರೆ.ಆ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿಂದ ಜೈಲಿಗೆ ಕಳುಹಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಉಸ್ತುವಾರಿ ವಿಜಯ್ ಸಿಂಗ್ ಪರಿಹಾರ್ ತಿಳಿಸಿದ್ದಾರೆ. ಆದರೆ ಮತ್ತೊಂದೆಡೆ ಶಿಕ್ಷಕ ಬಾಲಕಿಗೆ ಥಳಿಸಿದ್ದಾರೆ ಎಂದು ಶಾಹು ಕುಟುಂಬದವರು ಆರೋಪಿಸಿದ್ದು, ಸದ್ಯ ಈ ವಿಚಾರದಲ್ಲಿ ತನಿಖೆ ನಡೆಯುತ್ತಿದೆ ಎಂದು ಪೋಲಿಸರು ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + sixteen =
Remember me
