ಪುಲ್ವಾಮಾ:ಕಳೆದ ವರ್ಷ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಆತ್ಮಾಹುತಿ ಬಾಂಬರ್​ಗಳಿಂದಾಗಿ 40 ಜನ ಸಿಆರ್​ಪಿಎಫ್​ ಯೋಧರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತಂದೆ ಮತ್ತು ಮಗಳನ್ನು ಬಂಧಿಸಿದೆ.
ಕಳೆದ ವಾರ ಪುಲ್ವಾಮಾ ಹಜಿಬಲ್​ ಪ್ರದೇಶದವನಾದ ಶಕೀರ್ ಬಶೀರ್ ಮ್ಯಾಗ್ರೆ ಎಂಬಾತನನ್ನು ಬಂಧಿಸಲಾಗಿತ್ತು. ಈಗ ಆತನ ಮಗಳನ್ನು ಬಂಧಿಸಲಾಗಿದೆ. ಇವರಿಬ್ಬರು ಉಗ್ರರಿಗೆ ಆಶ್ರಯ ನೀಡಿದ್ದೂ ಅಲ್ಲದೆ, ಬಾಂಬ್​ ತಯಾರಿಸಲು ಸಹಾಯ ಮಾಡಿದ್ದರು.
ಆತ್ಮಾಹುತಿ ದಳದ ಮುಖ್ಯಸ್ಥ ಅದಿಲ್​ ಅಮಹ್ಮದ್​ ದಾರ್​ನಿಗೆ ವಸತಿ ಮತ್ತು ಇನ್ನಿತರ ಸೌಲಭ್ಯ ಒದಗಿಸಿದ್ದ. “ಬಹಳಷ್ಟು ಸಲ ಬಂದೂಕು, ಮದ್ದು ಗುಂಡು, ಹಣ ಮತ್ತಿತರ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡಿದ್ದೆ. ಅವುಗಳನ್ನು ಪುಲ್ವಾಮಾ ದಾಳಿಗೆ ಬಳಸಲಾಗಿತ್ತು” ಎಂದು ಮ್ಯಾಗ್ರೆ ಆರಂಭಿಕ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದ.
ಬಾಂಬ್​ ಸ್ಫೋಟಗೊಳಿಸುವ ದಿನ ಮ್ಯಾಗ್ರೆ ತಾನೇ ಕಾರನ್ನು ಚಲಾಯಿಸಿಕೊಂಡು ಬಂದಿದ್ದ. ಆದರೆ ದಾಳಿಯ ಸ್ಥಳದಿಂದ 500 ಮೀಟರ್ ದೂರದಲ್ಲಿ ವಾಹನದಿಂದ ಕೆಳಗಿಳಿದಿದ್ದ. ಇದರಿಂದಲೇ ತಿಳಿಯುತ್ತದೆ ಬಾಂಬ್​ ಸ್ಫೋಟ ಪ್ರಕರಣದಲ್ಲಿ ಆತ ಭಾಗಿಯಾಗಿದ್ದ ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಬ್​ ತಯಾರಿಸಲು ಬಳಸುವ ಕೈಗವಸುಗಳು, ಬ್ಯಾಟರಿ ಮತ್ತು ಅಮೋನಿಯಮ್​ ಪುಡಿಯನ್ನು ಅಮೆಜಾನ್​ನಿಂದ ಆನ್​ಲೈನ್​ನಲ್ಲಿ ಖರೀದಿಸಿದ್ದರು. ಈ ವಸ್ತುಗಳ ಬಳಕೆಯನ್ನು ಪ್ರಯೋಗಾಲದಿಂದ ಬಂದ ವರದಿಗಳು ಸಾಬೀತುಪಡಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಗ್ರರಾದ ಅದಿಲ್​ ದಾರ್​ ಮತ್ತು ಉಮರ್​ ಫಾರುಕ್​ಗೆ 2018ರಿಂದ 2019ರ ಫೆಬ್ರವರಿ ದಾಳಿ ಆಗುವವರೆಗೆ ಮ್ಯಾಗ್ರೆ ತನ್ನ ಮನೆಯಲ್ಲಿ ನೆಲೆ ನೀಡಿದ್ದ. ಜತೆಗೆ ಸ್ಫೋಟಕ ವಸ್ತುಗಳ ತಯಾರಿಕೆಗೆ ಸಹಾಯ ಮಾಡಿದ್ದ. ಫರ್ನಿಚರ್ಸ್​ ಅಂಗಡಿ ಇಟ್ಟುಕೊಂಡಿದ್ದ ಮ್ಯಾಗ್ರೆ, ಉಗ್ರ ಮೊಹಮ್ಮದ್ ಉಮರ್ ಸಲಹೆಯಂತೆ, ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಬೆಂಗಾವಲುಗಳ ಚಲನೆ ನಿಗಾ ಇಟ್ಟಿದ್ದ.
ಅಲ್ಲದೆ ಸಿಆರ್​ಪಿಎಫ್​ ದಳದ ಚಲನೆಗಳ ಬಗ್ಗೆ ಉಗ್ರರಿಬ್ಬರಿಗೆ ಮಾಹಿತಿ ನೀಡುತ್ತಿದ್ದ. ಜತೆಗೆ ಕಾರಿಗೆ ಬಾಂಬ್​ ಅಳವಡಿಸಲು ಮಾರುತಿ ಇಕೋ ಕಾರ್​ನ್ನು ಬದಲಾಯಿಸಿದ್ದ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
