ಹೈದರಾಬಾದ್: ಮಗಳ ಸಾವನ್ನು ಸಹಿಸಲಾಗದೆ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಹೈದರಾಬಾದ್​ ಬಳಿಯ ಖೈರತಾಬಾದ್‌ನಲ್ಲಿ ನಡೆದಿದೆ.
ಖೈರತಾಬಾದ್‌ನಲ್ಲಿ ನೆಲೆಸಿರುವ ಕಿಶೋರ್‌ಗೆ ಐದು ವರ್ಷದ ಆರಾಧ್ಯ ಎಂಬ ಮಗಳಿದ್ದು, ಆಕೆ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಆತ ತನ್ನ ಸಾಮರ್ಥ್ಯ ಮೀರಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದು, ಕೊನೆಗೆ ಅದು ಫಲಕಾರಿಯಾಗ ಚಿಕಿತ್ಸೆ ವೇಳೆ ಮಗು ಆರಾಧ್ಯ ಮೃತಪಟ್ಟಿದೆ.
ಇದನ್ನೂ ಓದಿ:ಸೌಂದರ್ಯವನ್ನು ಇಮ್ಮಡಿಗೊಳಿಸುವುದರೆ ಜತೆಗೆ ಹಲವು ಸಮಸ್ಯೆಗಳಿಗೆ ರಾಮಬಾಣ ಈ ಮೂಲಿಕೆ..
ಮುತ್ತು ಕೊಟ್ಟು ತನ್ನ ಹೃದಯದ ಮೇಲೆ ಬೆಳೆಸಿದ ಮಗುವಿನ ಸಾವಿನಿಂದ ತೀವ್ರವಾಗಿ ನೊಂದಿದ್ದ ಆತ, ತನ್ನ ಪ್ರೀತಿಯ ಮಗಳು ಕಣ್ಣೆದುರೇ ಮೃತಪಟ್ಟಿದ್ದನ್ನು ಕಂಡು ಪ್ರೀತಿಯ ಮಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಕಿಶೋರ್ ಅಳಲು ತೋಡಿಕೊಂಡಿದ್ದರು. ಮಗಳನ್ನು ಬಿಟ್ಟು ಬದುಕಲಾರೆ ಎಂದು ಮನದಾಳದ ಅಳಲು ತೋಡಿಕೊಂಡಿದ್ದ ಆತ ಖೈರತಾಬಾದ್ ಬಳಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯರಿಂದ ಮಾಹಿತಿ ಪಡೆದ ರೈಲ್ವೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಕಿಶೋರ್  ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಆತನ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದ್ದು ಇದೇ ವೇಳೆ ತಂದೆ ಮಗಳ ಸಾವಿನಿಂದಾಗಿ ಸಂಬಂಧಿಕರಲ್ಲಿ ದುಃಖದ ಛಾಯೆ ಆವರಿಸಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
