ಕರೀಂನಗರ:ಮಗಳ ಮದುವೆಯ ದಿನವೇ ತಂದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ.
ಇದನ್ನೂ ಓದಿ:ಕೇರಳದ ಗುರುವಾಯೂರಪ್ಪನಿಗೆ ಚಿನ್ನದ ಕಿರೀಟ! ಕೃಷ್ಣ ಜನ್ಮಾಷ್ಟಮಿಗೆ ಚಿನ್ನದ ವ್ಯಾಪಾರಿಯಿಂದ ಬರ್ತಡೇ ಗಿಫ್ಟ್
ಮೃತನನ್ನು ಎರ್ರಾಳ ರಾಮುಲು(48) ಎಂದು ಗುರುತಿಸಲಾಗಿದ್ದು, ಶಂಕರಪಟ್ಟಣ ಮಂಡಲದ ಅಂಬಲಪುರ ಗ್ರಾಮದ ನಿವಾಸಿ. ಟ್ರ್ಯಾಕ್ಟರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಈತನಿಗೆ ಮೂವರು ಹೆಣ್ಣುಮಕ್ಕಳಿದ್ದು, ಈ ಪೈಕಿ ಹಿರಿಯ ಮಗಳು ಲಾವಣ್ಯಳ ಮದುವೆ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಮದುವೆ ನಿಗದಿಯಾಗಿತ್ತು.
ಮುಹೂರ್ತಕ್ಕೆ ಇನ್ನೂ ಎರಡು ಗಂಟೆ ಬಾಕಿ ಇದ್ದು, ಇಡೀ ಮದುವೆ ಮಂಟಪ ಬಂಧುಗಳಿಂದ ತುಂಬಿ ತುಳುಕುತ್ತಿತ್ತು. ವಧು-ವರರು ಕೂಡ ಮಂಟಪವನ್ನು ಪ್ರವೇಶಿಸಲು ಸಿದ್ಧರಾಗಿದ್ದ ವೇಳೆ ರಾಮುಲು ಎದೆಯಲ್ಲಿ ನೋವು ಕಾಣಿಸಿಕೊಂಡು ಏಕಾಏಕಿ ಕುಸಿದು ಬಿದ್ದಿದ್ದಾನೆ. ಇದನ್ನು ಗಮನಿಸಿದ ಸಂಬಂಧಿಕರು ಕೂಡಲೇ ಹುಜೂರಾಬಾದ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆತನನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ನಿಂಬೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ…ಚರ್ಮದ ಆರೋಗ್ಯಕ್ಕೆ ಇದೆ ಹಲವಾರು ಪ್ರಯೋಜನ….
ಆತನ ನಿಧನದಿಂದಾಗಿ ಮದುವೆ ಮನೆ ಮಸಣವಾಗಿ ಮಾರ್ಪಟ್ಟಿದ್ದು, ಅಲ್ಲಿಯವರೆಗೂ ಇದ್ದ ಸಂತಸದ ಕ್ಷಣಗಳೆಲ್ಲ ಮರೆಯಾಗಿ ಆತನ ನಿಧನಕ್ಕೆ ಪತ್ನಿ, ಮಕ್ಕಳು, ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ತುಂಬಾ ಖುಷಿಯಿಂದ ನಡೆಯಬೇಕಿದ್ದ ಮನೆಯಲ್ಲಿ ಈ ಅನಿರೀಕ್ಷಿತ ಘಟನೆಯಿಂದಾಗಿ ಮದುವೆಯನ್ನು ಮುಂದೂಡಲಾಯಿತು.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 2 =
Remember me
