ಮುಂಬೈ:ಮಗನನ್ನು ನೋಡಲು ತಂದೆ ಎಷ್ಟು ಕಷ್ಟಪಡಬಹುದು? ದಕ್ಷಿಣ ಮುಂಬೈನ ನಿವಾಸಿಯೊಬ್ಬರು, ಶುಕ್ರವಾರ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಗುರುತಿನ ಚೀಟಿ ಮಾಡಿ ಭದ್ರತಾ ಅಧಿಕಾರಿಯಂತೆ ಸೋಗು ಹಾಕಿದ್ದಾರೆ. ಇಷ್ಟೆಲ್ಲಾ ಮಾಡಿದ್ದು ಮಗನನ್ನು ನೋಡಲು!
ಆರೋಪಿ ಚಿಂತನ್ ಗಾಂಧಿ, ಉದ್ಯಮಿ ಮತ್ತು ವಿಪಿ ಪ್ರದೇಶದ ನಿವಾಸಿಯಾಗಿದ್ದು, ಅಂತಾರಾಷ್ಟ್ರೀಯ ಟರ್ಮಿನಲ್‌ನ ನಿರ್ಗಮನ ವಿಭಾಗದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಯ ಹಾಗೆ ಸೋಗು ಹಾಕಿದ್ದರು. ಅವರಲ್ಲಿರುವ ಗುರುತಿನ ಚೀಟಿ ನಕಲಿ ಎಂದು ಗೊತ್ತಾದ ತಕ್ಷಣ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಟರ್ಮಿನಲ್‌ನಲ್ಲಿ, ಸಿಐಎಸ್‌ಎಫ್‌ನ ಸಬ್ ಇನ್ಸ್‌ಪೆಕ್ಟರ್ ಸುಮಿತ್ ಸಿಂಗ್ ಗಾಂಧಿಯನ್ನು ನಿಲ್ಲಿಸಿದ್ದಾರೆ. ಸಾಧಾರಣವಾಗಿ ವಿಶೇಷ ಅನುಮತಿಯನ್ನು ಹೊಂದಿರದ ಹೊರತು ಅವರನ್ನು ಒಳಗೆ ಹೋಗಲು ಅನುಮತಿ ನೀಡಲಾಗುವುದಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಚಿಂತನ್​ ಗಾಂಧಿ, ತಾವು ಸಿಐಎಸ್‌ಎಫ್ ಅಧಿಕಾರಿ ಎಂದು ಹೇಳಿಕೊಂಡು ಗುರುತಿನ ಚೀಟಿಯನ್ನೂ ನೀಡಿದ್ದರು.
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಸುಮೀತ್​ ಸಿಂಗ್, “ಕಾರ್ಡ್ ಅನ್ನು ಸಿಐಎಸ್‌ಎಫ್‌ನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಮ್‌ಕುಮಾರ್ ಹೆಸರಿನಲ್ಲಿ ಮಾಡಲಾಗಿತ್ತು. ನಾನು ಅದನ್ನು ಪರಿಶೀಲಿಸಿದಾಗ ಅದು ನಕಲಿ ಎಂದು ಕಂಡುಬಂದಿದೆ. ಆದ್ದರಿಂದ. ನಾನು ತಕ್ಷಣ ನನ್ನ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ.
ನಂತರ ಗಾಂಧಿಯನ್ನು ಸಿಐಎಸ್‌ಎಫ್‌ನ ಇನ್ಸ್‌ಪೆಕ್ಟರ್ ಅವಿನಾಶ್ ರಂಜನ್ ಅವರ ಬಳಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ನಕಲಿ ಗುರುತಿನ ಚೀಟಿ ಮಾಡಿದ್ದನ್ನು ಒಪ್ಪಿಕೊಂಡರು. ಮುಂಬರುವ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಈ ಘಟನೆಯಿಂದಾಗಿ ಅಧಿಕಾರಿಗಳಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ಚಿಂತೆ ಶುರುವಾಗಿದೆ.
“ಚಿಂತನ್​​ ಗಾಂಧಿ, ತಮ್ಮ ಮಗ ಅಧ್ಯಯನಕ್ಕಾಗಿ ವಿದೇಶಕ್ಕೆ ಹಾರುತ್ತಿದ್ದಾನೆ. ಆತ ಬಹಳ ದೀರ್ಘಕಾಲದ ಸಮಯಕ್ಕೆ ವಿದೇಶಕ್ಕೆ ಹೋಗುತ್ತಿರುವುದರಿಂದ ಅವನನ್ನು ಬೋರ್ಡಿಂಗ್ ಗೇಟ್‌ನವರೆಗೆ ನೋಡಬೇಕೆಂದು ಸಿಐಎಸ್‌ಎಫ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಹೀಗಾಗಿ ಅವರು ಇಂಟರ್ನೆಟ್‌ನಿಂದ ಸಿಐಎಸ್‌ಎಫ್ ಐಡಿ ಕಾರ್ಡ್‌ನ ಚಿತ್ರವನ್ನು ಮುದ್ರಿಸಿ ಅದರ ಮೇಲೆ ಅವರ ಚಿತ್ರವನ್ನು ಮಾರ್ಫಿಂಗ್ ಮಾಡಿದ್ದಾರೆ’ ಎಂದು ಸಹರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ತನ್ನ ಮಗನಿಗೆ ಹೇಳಬೇಡಿ ಎಂದು ಗಾಂಧಿ ಅಧಿಕಾರಿಗಳಿಗೆ ಮನವಿ ಮಾಡಿದಾಗ ಸಿಐಎಸ್ಎಫ್ ಒಪ್ಪಿಕೊಂಡಿತು. ಮಗನಿಗೆ ತಿಳಿಯದಂತೆ ಆತನನ್ನು ಸಹರ್ ಪೊಲೀಸರಿಗೆ ಒಪ್ಪಿಸಲಾಯಿತು. ನಂತರ ಆತನ ಮೇಲೆ ಕೇಸು ದಾಖಲಿಸಿ ಬಂಧಿಸಲಾಯಿತು.
ಘಟನೆಯನ್ನು ದೃಢಪಡಿಸಿದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಗೋವಿಲ್ಕರ್, ಚಿಂತನ್​ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ವಂಚನೆ, ನಕಲಿ ಗುರುತಿನ ಚೀಟಿ ತಯಾರಿಕೆ ಮತ್ತು ಸೋಗು ಹಾಕಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
