ಲಖನೌ:ಮನೆಯ ಕೋಣೆಯಲ್ಲಿ ಬೆಚ್ಚಗೆ ಮಲಗಬೇಕಿದ್ದ ಬಾಲಕ ಯಾವುದೋ ಅಂಗಡಿಯ ಮುಂದೆ ಮಲಗಿದ್ದಾನೆ. ಅಮ್ಮನ ಮಡಿಲಲ್ಲಿರಬೇಕಾದವನ ಮಡಿಲಲ್ಲಿ ನಾಯಿಯಿದೆ. ಇಂತದ್ದೊಂದು ಮನಕಲಕುವ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಆ ಫೋಟೋದಲ್ಲಿರುವ ಬಾಲಕನ ಕಥೆ ಹೊರಬಿದ್ದಿದೆ.
ಇದನ್ನೂ ಓದಿ:15 ಸಾವಿರ ರೂ. ಬಿಲ್​ಗೆ 36 ಲಕ್ಷ ಟಿಪ್ಸ್​ ಕೊಟ್ಟ ಭೂಪ! ವೇಟರ್​ ಈಗ ಫುಲ್​ ಖುಷ್​!
ಫೋಟೋದಲ್ಲಿರುವ ಬಾಲಕನ ಹೆಸರು ಅಂಕಿತ್​. ಈತನ ತಂದೆ ಯಾವುದೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ತಾಯಿಯೂ ಬಿಟ್ಟು ಹೋಗಿದ್ದಾಳೆ. ತಂದೆ ತಾಯಿಯನ್ನು ಬಿಟ್ಟು ಕುಟುಂಬದ ಯಾರೋಬ್ಬರೂ ಗೊತ್ತಿರದ ಬಾಲಕ ತನ್ನ ಪ್ರೀತಿಯ ನಾಯಿಯೊಂದಿಗೆ ಜೀವನ ನಡೆಸುತ್ತಿದ್ದಾನೆ. ಟೀ ಶಾಪ್​ ಒಂದರಲ್ಲಿ ಕೆಲಸ ಮಾಡಿ, ತನ್ನ ಮತ್ತು ನಾಯಿಯ ಹೊಟ್ಟೆ ತುಂಬಿಸಿಕೊಳ್ಳುತ್ತಾನಂತೆ.
ಇದನ್ನೂ ಓದಿ:ಏಳು ಮಕ್ಕಳಿಗೆ ಜೀವ ಕೊಟ್ಟು ಪ್ರಾಣ ಬಿಟ್ಟ ಮಗು! ಉಕ್ರೇನ್​, ರಷ್ಯಾದ ಮಕ್ಕಳಿಗೂ ಉಸಿರು ನೀಡಿದ ಬಾಲಕ
ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶದ ಮುಜಾಫರ್​ನಗರ್ ಆಡಳಿತ ಎಚ್ಚೆತ್ತುಕೊಂಡಿದ್ದು, ಬಾಲಕನನ್ನು ಹುಡುಕಿದೆ. ಇದೀಗ ಬಾಲಕನನ್ನು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಣೆಯಲ್ಲಿಟ್ಟುಕೊಳ್ಳಲಾಗಿದೆ. ಆತನಿಗೆ ಉತ್ತಮ ಶಿಕ್ಷಣವನ್ನೂ ನೀಡಲಾಗುತ್ತಿರುವುದಾಗಿ ತಿಳಿಸಲಾಗಿದೆ. (ಏಜನ್ಸೀಸ್​)
ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

https://www.vijayavani.net/bride-leaves-from-marriage-hall/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
