ರಾಜಸ್ಥಾನ:ಪ್ರೀತಿಯಲ್ಲಿ ಬೀಳುವುದು ಅತ್ಯಂತ ಮಧುರ ಭಾವನೆಗಳಲ್ಲಿ ಒಂದು ಎಂದು ಬಲ್ಲವರು ಹೇಳಿದ್ದಾರೆ. ಆದರೆ ನೀವು ಈಗಾಗಲೇ ನಿಮ್ಮ ಕುಟುಂಬದ ಭಾಗವಾಗಿರುವ ತಪ್ಪು ವ್ಯಕ್ತಿಯನ್ನು ಪ್ರೀತಿಸಿದರೆ ಏನಾಗುತ್ತದೆ? ಅದು ವಿಲಕ್ಷಣ ಘಟನೆಯಾಗಿ ಸುದ್ದಿಯಾಗುತ್ತದೆ! ರಾಜಸ್ಥಾನದ ಒಬ್ಬ ವ್ಯಕ್ತಿ ತನ್ನ ಸೊಸೆಯನ್ನೇ ಪ್ರೀತಿಸುತ್ತಿದ್ದನು. ಇಬ್ಬರೂ ಆತನಿಗೆ ಆತನ ಸೊಸೆಯಿಂದಲೇ ಓರ್ವ ಮೊಮ್ಮಗಳೂ ಇದ್ದಾಳೆ. ಅವರಿಬ್ಬರೂ ಮೊಮ್ಮಗಳನ್ನು ಬಿಟ್ಟು ಓಡಿಹೋಗಿದ್ದಾರೆ.
ಬುಂದಿ ಜಿಲ್ಲೆಯ ಸಿಲೋರ್ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಪವನ್ ವೈರಾಗಿ ಎಂಬ ಸಂತ್ರಸ್ತ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಇದು ಬೆಳಕಿಗೆ ಬಂದಿದೆ. ದೂರಿನಲ್ಲಿ, ತನ್ನ ತಂದೆ ರಮೇಶ್ ವೈರಾಗಿ ಈತನ ಹೆಂಡತಿಯೊಂದಿಗೆ ಓಡಿಹೋಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಇದಲ್ಲದೆ, ತನ್ನ ತಂದೆ ತನ್ನ ಹೆಂಡತಿಯನ್ನು ಸೆಳೆಯುತ್ತಿದ್ದಾನೆ ಮತ್ತು ಅವಳು ನಿರಪರಾಧಿ ಎಂದು ಪತಿ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾನೆ.
ಪವನ್ ಆರು ತಿಂಗಳ ಹೆಣ್ಣು ಮಗುವಿನ ತಂದೆ. ಇದಲ್ಲದೆ, ಪವನ್ ನ ತಂದೆ ಕೆಲವು ಕಾನೂನುಬಾಹಿರ ಕೆಲಸದಲ್ಲಿ ತೊಡಗಿದ್ದಾರೆ ಎಂದು ಸಂತ್ರಸ್ತ ಹೇಳಿದ್ದಾರೆ. ಕೆಲಸದ ಕಾರಣದಿಂದಾಗಿ ಈತನ ತಂದೆ ಹಳ್ಳಿಯಿಂದ ದೂರ ಉಳಿದಿದ್ದಾರೆ. ಪವನ್ ವೈರಾಗಿಯ ಪತ್ನಿಯನ್ನು ಕದಿಯುವುದರ ಜೊತೆಗೆ, ಈ ತಂದೆ ಮಗನ ದ್ವಿಚಕ್ರ ವಾಹನವನ್ನು ಸಹ ದರೋಡೆ ಮಾಡಿದ್ದಾನೆ.
ಈ ಮಧ್ಯೆ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪವನ್ ಆರೋಪಿಸಿದ್ದಾರೆ. ಆದರೆ ಪವನ್ ಅವರ ಆರೋಪವನ್ನು ತಳ್ಳಿಹಾಕಿದ ಸದರ್ ಠಾಣಾಧಿಕಾರಿ ಅರವಿಂದ್ ಭಾರದ್ವಾಜ್ ಪ್ರಕರಣವನ್ನು ಶ್ರದ್ಧೆಯಿಂದ ಪರಿಶೀಲಿಸುತ್ತಿರುವುದಾಗಿ ಹೇಳಿದರು. ಕದ್ದ ದ್ವಿಚಕ್ರ ವಾಹನದೊಂದಿಗೆ ಓಡಿಹೋದ ದಂಪತಿಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಜೋಡಿಯ ಸ್ಥಳದ ಬಗ್ಗೆ ಪೊಲೀಸರು ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ. ಈ ಘಟನೆಯನ್ನು ಜೀರ್ಣಿಸಿಕೊಳ್ಳಲು ಕಷ್ಟವಾದರೂ, ಇದೇ ರೀತಿಯ ಪ್ರಕರಣಗಳು ನಡೆದಿವೆ. ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ, 40 ವರ್ಷದ ಅತ್ತೆ ತನ್ನ ಅಳಿಯನನ್ನು ಪ್ರೀತಿಸುತ್ತಿದ್ದಳು. ಆಕೆ ತನ್ನ ಪತಿಗೆ ಭಾರಿ ಅಮಲು ಕಾರಕ ವಸ್ತು ನೀಡಿದ ನಂತರ ಇಬ್ಬರೂ ಓಡಿಹೋಗಿದ್ದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
