ಲಖನೌ:ಅವರಿಬ್ಬರದ್ದು ಲವ್​ ಮ್ಯಾರೇಜ್. ಸೋಶಿಯಲ್​ ಮೀಡಿಯಾ ಮೂಲಕ ಸ್ನೇಹಿತರಾಗಿದ್ದ ಅಸ್ಸಾಂ ಮೂಲದ ಯುವತಿ ಮತ್ತು ಉತ್ತರ ಪ್ರದೇಶದ ಮೂಲದ ಪ್ರಿನ್ಸ್ ಮದುವೆಯಾಗಿದ್ದರು. ಪ್ರಿನ್ಸ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಗಾಜಿಯಾಬಾದ್​ನಲ್ಲೇ ವಾಸ ಆರಂಭಿಸಿದ್ದರು.
ಈ ಮಧ್ಯೆ ಪ್ರಿನ್ಸ್​ನ ತಂದೆ ಸೊಸೆಯನ್ನು ಬರಾಬಂಕಿಯಲ್ಲಿರುವ ನಮ್ಮ ಮನೆಗೆ ಬಾ ಎಂದು ಕರೆದಿದ್ದಾರೆ. ಜೂನ್​ 4ರಂದು ಸೊಸೆಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಮತ್ತೊಬ್ಬ ಯುವಕನಿದ್ದು, ಸಂಜೆ ವೇಳೆ ಆತನೇ ನಿನ್ನನ್ನು ಗಂಡನ ಮನೆ ಬಳಿ ಬಿಡುತ್ತಾನೆ ಎಂದು ಕಳುಹಿಸಿಕೊಟ್ಟಿದ್ದಾನೆ. ಆದರೆ ಆತ ಆಕೆಯನ್ನು ಗಾಜಿಯಾಬಾದ್​ಗೆ ಕರೆದುಕೊಂಡು ಹೋಗಿದ್ದಾನೆ.
ಈ ರೀತಿ ಏನೋ ಅನಾಹುತವಾಗಿದೆಯೆಂದು ಯುವತಿಯ ಸಹೋದರ ಪ್ರಿನ್ಸ್​ಗೆ 5ನೇ ತಾರೀಖಿನಂದು ಕರೆ ಮಾಡಿ ತಿಳಿಸಿದ್ದಾನೆ. ತಕ್ಷಣ ಪ್ರಿನ್ಸ್​ ತನ್ನ ತಂದೆಯ ಮನೆಗೆ ಹೋಗಿದ್ದಾನೆ. ಆದರೆ ಅಲ್ಲಿ ಹೆಂಡತಿಯಾಗಲೀ ಅಥವಾ ತಂದೆಯಾಗಲಿ ಇಲ್ಲದಿರುವುದು ಕಂಡು ಗಾಬರಿಗೊಂಡು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ಜತೆ ಆರೋಪಿಯನ್ನು ಹುಡುಕಿದ್ದಾರೆ. ಮಾವ ತನ್ನ ಸೊಸೆಯನ್ನು 80 ಸಾವಿರ ರೂಪಾಯಿಗೆ ಯುವಕನಿಗೆ ಮಾರಿದ್ದಾಗಿ ಹೇಳಲಾಗಿದೆ. ಹಾಗೂ ಆ ಯುವಕ ಆಕೆಯೊಂದಿಗೆ ಮದುವೆ ಮಾಡಿಕೊಳ್ಳಲೂ ಸಿದ್ಧತೆ ಮಾಡಿಕೊಂಡಿದ್ದ ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)
ದುಡ್ಡು ಬೇಕೆಂದು ಮೆಸೆಂಜರ್​ನಲ್ಲಿ ಬೇಡಿಕೆಯಿಟ್ಟ ಶಾಸಕ! ವಾಯ್ಸ್​ ಮೆಸೇಜ್​ ಕಳಿಸಲು ಹೇಳಿದಾಗ ಹೊರಬಿತ್ತು ಸತ್ಯ

ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
