ಕೋಲ್ಕತ್ತಾ:ಇಂದು ಬೆಳಗ್ಗೆ ಕೋಲ್ಕತ್ತಾದಲ್ಲಿ ಎದೆನೋವಿನಿಂದ ಬಳಲುತ್ತಿದ್ದ ಹಿರಿಯ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸುದ್ದಿಯಾದ ಕೆಲವೇ ಗಂಟೆಗಳ ಬೆನ್ನಲ್ಲೇ ಚಕ್ರವರ್ತಿ ಅವರ ಸೊಸೆ ಮದಾಲ್ಸಾ ಶರ್ಮಾ ಇದು ಸುಳ್ಳು ಸುದ್ದಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಹಲ್ದ್ವಾನಿ ಹಿಂಸಾಚಾರ: ಐವರ ಬಂಧನ, 5,000 ಮಂದಿ ವಿರುದ್ಧ ಪ್ರಕರಣ ದಾಖಲು!
“ದಿನನಿತ್ಯದ ತಪಾಸಣೆಗೆ ಅವರನ್ನು ನಾವು ಆಸ್ಪತ್ರೆಗೆ ಕರೆದುಕೊಂಡು ಬರುತ್ತೇವೆ. ಇದನ್ನು ತಪ್ಪಾಗಿ ಭಾವಿಸಿ, ತಿರುಚಿ ಹೇಳುವಂತದ್ದು ಏಕೆ? ಅವರು ಆರೋಗ್ಯವಾಗಿಯೇ ಇದ್ದಾರೆ, ಚೆನ್ನಾಗಿದ್ದಾರೆ. ಇದು ಕೇವಲ ಒಂದು ತಪಾಸಣೆ, ಈ ವದಂತಿಗಳನ್ನು ಯಾರು ಹರಡುತ್ತಿದ್ದಾರೆ?” ಎಂದು ಮದಾಲ್ಸಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ:ಸುತ್ತೂರು ಜಾತ್ರೆಯಲ್ಲಿ ಟಗರು ಸಿನಿಮಾ ಡೈಲಾಗ್​ ಹೊಡೆದ ನಟ ಡಾಲಿ! ಫ್ಯಾನ್ಸ್​ ಫಿದಾ
ವರದಿಯ ಪ್ರಕಾರ, ಮದಾಲ್ಸಾ ಅವರು ಆಸ್ಪತ್ರೆಗೆ ದಾಖಲಾದ ವರದಿಗಳನ್ನು ತಳ್ಳಿಹಾಕಿದರು. ಸೊಸೆಯ ಬಳಿಕ ಮಿಥುನ್​ ಅವರ ಹಿರಿಯ ಪುತ್ರ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ತಂದೆ 100% ಚೆನ್ನಾಗಿದ್ದಾರೆ ಮತ್ತು ಇದು ಅವರ ಎಂದಿನ ತಪಾಸಣೆಯಾಗಿದೆ” ಎಂದು ಹೇಳುವ ಮುಖೇನ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ,(ಏಜೆನ್ಸೀಸ್).
‘ಓಂ’ ಚಿತ್ರದಲ್ಲಿರುವ ಈ ಇಬ್ಬರು ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ? ಸ್ಟಾರ್​ ನಟನ ಮಕ್ಕಳಿವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
