ಸೂರತ್​:ಮನೆಯ ನವೀಕರಣಕ್ಕಾಗಿ ಎನ್​ಆರ್​ಐ ಪುತ್ರ ಪಡೆದಿದ್ದ 1.80 ಲಕ್ಷ ರೂ. ಸಾಲ ಮರಳಿಸುವ ವಿಷಯವಾಗಿ ಉಂಟಾದ ಜಗಳದಲ್ಲಿ ತಂದೆಯೇ ಪುತ್ರನನ್ನು ಇರಿದು ಕೊಂದಿದ್ದಾರೆ.
ಇಮ್ರಾನ್​ (36) ಕೊಲೆಯಾದವರು. ಅಬ್ದುಲ್​ ಹಮೀದ್​ ಮಣಿಯಾರ್​ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಲಂಡನ್​ನಲ್ಲಿ ನೆಲೆಸಿದ್ದ ಇಮ್ರಾನ್​ ಇತ್ತೀಚೆಗೆ ಪತ್ನಿಯೊಂದಿಗೆ ಭಾರತಕ್ಕೆ ಬಂದಿದ್ದರು. ತಮ್ಮ ತಂದೆಯಿಂದ 1.80 ಲಕ್ಷ ರೂ. ಪಡೆದು ತಮ್ಮ ಒಡೆತನದ ಮನೆಯನ್ನು ನವೀಕರಿಸಿದ್ದರು. ಲಾಕ್​ಡೌನ್​ ಹಿನ್ನೆಲೆಯಲ್ಲಿ ತುಂಬಾ ಕಾಲ ಇಲ್ಲಿಯೇ ಇರಬೇಕಾಗಿ ಬಂದಿತ್ತು.
ತನ್ನ ಪ್ರಜೆಗಳಿಗಾಗಿ ಬ್ರಿಟನ್​ ಸರ್ಕಾರ ಭಾರತದಿಂದ ಶನಿವಾರ ವಿಶೇಷ ವಿಮಾನದ ಏರ್ಪಾಟು ಮಾಡಿದೆ. ಈ ವಿಮಾನದಲ್ಲಿ ಲಂಡನ್​ಗೆ ಮರಳಲು ಇಮ್ರಾನ್​ ಸಿದ್ಧತೆ ನಡೆಸಿದ್ದರು.
ವಿಷಯ ಗೊತ್ತಾಗುತ್ತಲೇ ಪುತ್ರನ ಮನೆಗೆ ಹೋದ ಅಬ್ದುಲ್​ ಹಮೀದ್​ ಮಣಿಯಾರ್​ ಹಣದ ವಿಷಯವಾಗಿ ಸೊಸೆ ಶಾಮ್ಸುನ್ನೀಸಾ ಜತೆ ವಾಗ್ವಾದಕ್ಕಿಳಿದಿದ್ದರು. ಅಷ್ಟರಲ್ಲೇ ಮನೆಗೆ ಮರಳಿದ ಇಮ್ರಾನ್​, ಮನೆ ನವೀಕರಣಕ್ಕೆ ಸ್ನೇಹಿತರಿಂದಲೂ ಹಣ ಪಡೆದಿದ್ದೇನೆ. ಆ ಸಾಲವನ್ನು ತೀರಿಸಿದ ಬಳಿಕ ನಿಮ್ಮ ಸಾಲ ತೀರಿಸುತ್ತೇನೆ. ಇಲ್ಲ ತುರ್ತು ಇದೆ ಎಂದಾದರೆ, ನನ್ನ ಮನೆಯ ಒಂದು ಭಾಗವನ್ನು ಬಾಡಿಗೆಗೆ ಕೊಟ್ಟು ಬರುವ ಬಾಡಿಗೆಯನ್ನು ಸಾಲಕ್ಕೆ ಸರಿಮಾಡಿಕೊಳ್ಳಿ ಎಂದು ತಂದೆಗೆ ಹೇಳಿದ್ದರು ಎನ್ನಲಾಗಿದೆ.
ಆದರೆ, ಈ ವಿಷಯವನ್ನು ಒಪ್ಪದ ಅಬ್ದುಲ್​ ಹಮೀದ್​ ಮಣಿಯಾರ್​, ತಮಗೆ ಈಗಲೇ ಹಣಬೇಕು ಎಂದು ಹಟ ಹಿಡಿದರು ಎನ್ನಲಾಗಿದೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದ್ದು, ಕೋಪದಲ್ಲಿ ಅಬ್ದುಲ್​ ಪುತ್ರನ ಹೆಗಲು ಮತ್ತು ಕೊಂಕಳಿಗೆ ಚೂರಿಯಿಂದ ಇರಿದರು ಎನ್ನಲಾಗಿದೆ. ತೀವ್ರ ರಕ್ತಸ್ರಾವವಾಗಿ ಇಮ್ರಾನ್​ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಲಾಲ್​ಗೇಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾಸ್ಕ್​ ಧರಿಸುವುದು ಹೇಗೆ ಎಂದು ತೋರಿಸಲು ಹೋಗಿ ಮುಜುಗರಕ್ಕೆ ಒಳಗಾದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್​ ರಾಮಫೋಸಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
