ಈರೋಡ್:13 ಮಕ್ಕಳ ತಂದೆಯೊಬ್ಬನಿಗೆ ಕೊನೆಗೂ ಮನವೋಲಿಸಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುವಲ್ಲಿ ವೈದ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪೊಲೀಸರ ಸಹಾಯ ಪಡೆದು, ಮೂರು ದಿನಗಳ ಕಾಲ ಆತನನ್ನು ಮನವೋಲಿಸಿ ಚಿಕಿತ್ಸೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.ಇದನ್ನೂ ಓದಿ:ಸ್ಟೇರಿಂಗ್ ಲಾಕ್; ಕಬ್ಬಿನ ಗದ್ದೆಗೆ ನುಗ್ಗಿದ ಕೆಎಸ್​​ಆರ್​ಟಿಸಿ ಬಸ್
ಈರೋಡ್​​ನ ಮಾದಯ್ಯನ್(46) ಮತ್ತು ಶಾಂತಿ(40) ದಂಪತಿ ಈಗಾಗಲೇ 12 ಮಕ್ಕಳನ್ನು ಹೊಂದಿದ್ದಾರೆ. ಧಾರ್ಮಿಕ ಸಂಪ್ರದಾಯ ಎಂಬ ಕಾರಣಕ್ಕೆ ದಂಪತಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಮೊದಲು ಒಪ್ಪಿಗೆ ಸೂಚಿಸಿರಲಿಲ್ಲ. ಇವರಿಗೆ ಈಗಾಗಲೇ 7 ಗಂಡು ಮತ್ತು 5 ಹೆಣ್ಣು ಮಕ್ಕಳು ಇದ್ದಾರೆ. ಕಳೆದ ವಾರ ಶಾಂತಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ದಂಪತಿಯ ಹಿರಿಯ ಮಗನಿಗೆ ಈಗ 25 ವರ್ಷ ವಯಸ್ಸಾಗಿದೆ ಮತ್ತು ಆತನಿಗೆ ಮದುವೆಯಾಗಿ ಮಗುವಾಗಿದೆ.ಇದನ್ನೂ ಓದಿ:ಭೀಕರ ಅಪಘಾತ; ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು
13ನೇ ಮಗುವಿನ ಜನನದ ವೇಳೆ ಶಾಂತಿ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದಳು. ಮತ್ತೊಮ್ಮೆ ಗರ್ಭಿಣಿಯಾಗದರೆ, ಹೆರಿಗೆಯ ವೇಳೆ ಆಕೆಯ ಪ್ರಾಣಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಆಕೆಯ ಗಂಡನಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಬಗ್ಗೆ ದಂಪತಿಗೆ ಮನವರಿಕೆ ಮಾಡಿಕೊಟ್ಟು, ಈರೋಡ್ ಜಿಲ್ಲೆಯ ಅಂದಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಾದಯ್ಯನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಬ್ಲಾಕ್ ವೈದ್ಯಾಧಿಕಾರಿ ಕೆ.ಶಾಂತಿ ಕೃಷ್ಣನ್ ತಿಳಿಸಿದ್ದಾರೆ.(ಏಜೆನ್ಸೀಸ್)
ಇದನ್ನೂ ಓದಿ:ಹುಬ್ಬಳ್ಳಿ | 5 ರೂ. ಕೇಳಿದ್ದೇ ತಪ್ಪಾಯ್ತು; ಸಿಟ್ಟಿನಲ್ಲಿ ಬಾಲಕನ ಜೀವ ತೆಗೆದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
