ಚೆನ್ನೈ:ಅಪ್ಪನೇ ತನ್ನ 75 ದಿನಗಳ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿ ಪೈಶಾಚಿಕವಾಗಿ ವರ್ತಿಸಿದ್ದಾನೆ. ತಮಿಳುನಾಡಿನ ಈರೋಡ್​ ಜಿಲ್ಲೆಯ ಅಂಧಿಯೂರ್​ನಲ್ಲಿ ಈ ಘಟನೆ ನಡೆದಿದ್ದು, ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕಾಮಪಿಪಾಸುವನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್​ಐಆರ್​ ದಾಖಲಿಸಿದ್ದಾರೆ.
ಬಂಧಿತ 40 ವರ್ಷದ ವ್ಯಕ್ತಿ ತನ್ನದೇ ಹೆಣ್ಣುಮಗುವಿನ ಮೇಲೆ ಎರಡು ವಾರಗಳ ಹಿಂದೆ ಕೂಡ ಅತ್ಯಾಚಾರ ಎಸಗಲು ಯತ್ನಿಸಿದ್ದ. ಆದರೆ, ಮನೆಯಿಂದ ಹೊರಹೋಗಿದ್ದ ಬಾಣಂತಿ ಸಕಾಲದಲ್ಲಿ ಮನೆಗೆ ಹಿಂದಿರುಗಿದ್ದರಿಂದ, ಅಪಾಯ ತಪ್ಪಿತ್ತು ಎನ್ನಲಾಗಿದೆ. ಅಲ್ಲದೆ, ತನ್ನ ಮಗುವಿನಿಂದ ದೂರ ಇರುವಂತೆ ಆಕೆ ತನ್ನ ಪತಿಗೆ ಎಚ್ಚರಿಕೆಯನ್ನೂ ನೀಡಿದ್ದಳು ಎಂದು ಹೇಳಲಾಗಿದೆ.
ಆದರೆ, ಈ ಬಾರಿ ತನ್ನ ಪತ್ನಿ ಮನೆಯಿಂದ ಸಾಕಷ್ಟು ಸಮಯ ಹೊರಹೋಗಲಿದ್ದಾಳೆ ಎಂಬುದನ್ನು ಖಚಿತಪಡಿಸಿಕೊಂಡ ಪಿಶಾಚಿ ಅಪ್ಪ, ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ.
ವಿಷಯ ತಿಳಿದ ತಾಯಿ ಭವಾನಿಯ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಳು. ತಕ್ಷಣವೇ ಪೊಲೀಸರು ಆತನನ್ನು ಬಂಧಿಸಿದರು ಎನ್ನಲಾಗಿದೆ.
ಇದನ್ನೂ ಓದಿ:ಭಾರತದ ಮೇಲೆ ದಾಳಿಗೆ ಯುದ್ಧೋಪಕರಣಗಳೊಂದಿಗೆ ಸಜ್ಜಾಗಿದೆ ಚೀನಾ
ಸೋಮವಾರದಂದು ಬಾಣಂತಿ ಯಾವುದೋ ಕೆಲಸ ಮೇಲೆ ಮನೆಯಿಂದ ಹೊರಹೋಗಬೇಕಾಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನ್ನ ಪತಿಗೆ ಮಗುವಿನ ಬಳಿ ಹೋಗದಂತೆ ಎಚ್ಚರಿಕೆ ನೀಡಿ ಹೋಗಿದ್ದಳು. ಆದರೆ, ಆಕೆ ದೀರ್ಘಕಾಲ ಮನೆಗೆ ಮರಳುವುದಿಲ್ಲ ಎಂಬುದನ್ನು ಅರಿತ ಆತ ಈ ಕೃತ್ಯ ಎಸಗಿದ್ದಾನೆ ಎಂದು ಭವಾನಿಯ ಮಹಿಳಾ ಪೊಲೀಸ್​ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಎಸ್​. ಗಜಲಕ್ಷ್ಮಿ ತಿಳಿಸಿದ್ದಾರೆ.
ಮನೆಗೆ ಮರಳಿದ ಬಾಣಂತಿ ತನ್ನ ಮಗುವಿನ ಗುಪ್ತಾಂಗಗಳ ಮೇಲೆ ಗಾಯಗಳಾಗಿದ್ದನ್ನು ಗಮನಿಸಿ ತಕ್ಷಣವೇ ಮಗುವನ್ನು ಆಲಂಪಾಳಯಂನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಳು. ಅಲ್ಲಿ ಪರಿಶೀಲಿಸಿದ ವೈದ್ಯರು ತಕ್ಷಣವೇ ಸೇಲಂನ ಸರ್ಕಾರಿ ಮೋಹನ್​ ಕುಮಾರಮಂಗಳಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸುವಂತೆ ಆಕೆಗೆ ಸಲಹೆ ನೀಡಿದ್ದರು. ಅದರಂತೆ ಅಲ್ಲಿಗೆ ಕರೆದೊಯ್ದಾಗ ವೈದ್ಯರು ಹಸುಗೂಸಿನ ಮೇಲೆ ಅತ್ಯಾಚಾರ ಆಗಿರುವುದು ಖಚಿತಪಡಿಸಿದರು. ಬಳಿಕ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿದರು. ಇದೀಗ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಲಡಾಖ್​ ಉದ್ವಿಗ್ನತೆ ಕುರಿತು ಮೋದಿ-ಟ್ರಂಪ್​ ಮಾತುಕತೆ ನಡೆಸಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 18 =
Remember me
