ಉತ್ತರಪ್ರದೇಶ:ವ್ಯಕ್ತಿಯೊಬ್ಬ ಡೇಟಾ ಕೇಬಲ್ ಬಳಸಿ ತನ್ನ ಮಗಳ ಕತ್ತು ಹಿಸುಕಿ ಕೊಂದಿದ್ದಾನೆ. ಈ ಮರ್ಯಾದಾ ಹತ್ಯೆಯ ಪ್ರಕರಣ ಮಹರಾಷ್ಟ್ರದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಧಾ ಪುರಂ ನಿವಾಸಿ ಶ್ಯಾಮ್ ಬಹದ್ದೂರ್ ಮಗಳನ್ನು ಕೊಂದ ಆರೋಪಿಯಾಗಿದ್ದಾನೆ. ಅರ್ಚನಾ ಮೃತ ಹುಡುಗಿ. ಈ ಮರ್ಯಾದಾ ಹತ್ಯೆಯ ಪ್ರಕರಣವೊಂದರಲ್ಲಿ ತಂದೆಯನ್ನು ಬಂಧಿಸಲಾಗಿದೆ.
ರಾಧಾ ಪುರಂ ನಿವಾಸಿ ಶ್ಯಾಮ್ ಬಹದ್ದೂರ್ ತನ್ನ 16 ವರ್ಷದ ಮಗಳು ಅರ್ಚನಾಳ ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಂಡು ಆಕೆಗೆ ಬುದ್ದಿ ಹೇಳಿದ್ದನು. ಈ ವಿಚಾರವಾಗಿ ಪತ್ನಿ ಸಂಗೀತಾ ಅವರೊಂದಿಗೆ ಜಗಳವಾಡುತ್ತಿದ್ದ. ಪದೇ ಪದೆ ಜಗಳವಾಗುತ್ತಿದ್ದರಿಂದ ಶ್ಯಾಮ್ ಬಹದ್ದೂರ್ ಕೆಲ ದಿನಗಳ ಹಿಂದೆ ಸಂಗೀತಾಳನ್ನು ಆಕೆಯ ತವರು ಮನೆಗೆ ಕಳುಹಿಸಿದ್ದನು. ನಿನ್ನೆ ಸಂಜೆ ಮದ್ಯದ ಅಮಲಿನಲ್ಲಿ ಮನೆಗೆ ಬಂದ ಶ್ಯಾಮ್, ಮಗಳು ಯಾರೊಂದಿಗೋ ಫೋನ್​ನಲ್ಲಿ ಮಾತನಾಡುತ್ತಿರುವುದನ್ನು ಕಂಡಿದ್ದಾನೆ. ಈ ವೇಳೆ ಆಕೆಗೆ ತೀವ್ರವಾಗಿ ಥಳಿಸಿದ್ದಾನೆ. ತೀವ್ರವಾಗಿ ಕೋಪಗೊಂಡಿದ್ದ ಆತ, ತನ್ನ ಮಗನ ಮುಂದೆಯೇ ಅವಳ ಮೊಬೈಲ್ ಫೋನ್​ನ ಡೇಟಾ ಕೇಬಲ್​ನಿಂದ ಕತ್ತು ಹಿಸುಕಿ ಕೊಂದಿದ್ದಾನೆ.
ಇದನ್ನೂ ಓದಿ:ಪಾರಿವಾಳಗಳಿಗೆ ಆಹಾರ ಹಾಕಿದರೆ 500 ರೂ. ದಂಡ..!
ಕೃತ್ಯವನ್ನು ಒಪ್ಪಿಕೊಂಡಿರುವ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಇದರೊಂದಿಗೆ ಸ್ಥಳದಲ್ಲಿ ತನಿಖೆ ನಡೆಸಿ ಕೊಲೆಯ ಬಗ್ಗೆ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಬಾಲಕಿಯ ಕತ್ತು ಹಿಸುಕಲು ಬಳಸಿದ ಡೇಟಾ ಕೇಬಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದು ನನ್ನ ಕೊನೆಯ ವಿವಾಹ..92ನೇ ವಯಸ್ಸಿನಲ್ಲಿ 5ನೇ ಮದುವೆಯಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
